ಬಿಗ್ ಬಾಸ್ (Bigg Boss) ಮನೆಯಲ್ಲಿ ‘ಬೆಂಕಿ’ ಎಂದೇ ಫೇಮಸ್ ಆದವರು ತನಿಷಾ ಕುಪ್ಪಂಡ. ಫಿನಾಲೆ ವಾರಕ್ಕೆ ಕಾಲಿಡುವ ಮೊದಲೇ ಅವರು ಎಲಿಮಿನೇಟ್ ಆಗಿದ್ದಾರೆ. ಕಣ್ಣೀರು ಹಾಕುತ್ತಲೇ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ದೊಡ್ಮನೆಯಿಂದ ಹೊರ ಹೋದ ತನಿಷಾ ಒಂದು ಸರ್ಪ್ರೈಸ್ ಸಿಕ್ಕಿದೆ. ಇದನ್ನು ನೋಡಿ ಅವರು ಸಾಕಷ್ಟು ಖುಷಿಪಟ್ಟಿದ್ದಾರೆ. ಈ ಬಗ್ಗೆ ಅವರು ಹೇಳಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಬಿಗ್ ಬಾಸ್ಗೆ ಹೋದ ಬಳಿಕ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗುತ್ತದೆ. ತನಿಷಾ ಅವರ ಜನಪ್ರಿಯತೆ ಹೆಚ್ಚಿದ್ದು, ಅಭಿಮಾನಿ ಬಳಗ ಹಿರಿದಾಗಿದೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಎರಡೂವರೆ ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಅವರ ಕುರಿತು ‘ಬೆಂಕಿ ಬಂತೋ..’ ಹಾಡನ್ನು ಮಾಡಲಾಗಿದೆ. ಇದನ್ನು ಕೇಳಿ ತನಿಷಾ ಸಖತ್ ಖುಷಿ ಆಗಿದ್ದಾರೆ. ‘ಎಲಿಮಿನೇಟ್ ಆದೆ ಅನ್ನೋ ಬೇಸರದಲ್ಲಿ ನಾನು ಬಂದೆ. ಆದರೆ, ಬೆಂಕಿ ಬಂತೋ ಹಾಡು ನೋಡಿ ಸಖತ್ ಖುಷಿಪಟ್ಟೆ. ಈ ಹಾಡನ್ನು ಚೆನ್ನಾಗಿ ಬರೆದಿದ್ದೀರ’ ಎಂದಿದ್ದಾರೆ ಅವರು. ಬಿಗ್ ಬಾಸ್ ಮನೆಯಲ್ಲಿ ‘ಬೆಂಕಿ’ ಎಂದೇ ಫೇಮಸ್ ಆದವರು ತನಿಷಾ. ಹೀಗಾಗಿ ಅಭಿಮಾನಿಗಳು ‘ಬೆಂಕಿ ಬಂತೋ..’ ಸಾಂಗ್ ಮಾಡಿದ್ದಾರೆ.
‘ಎ2 ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ ಮೂಲಕ ‘ಬೆಂಕಿ ಬಂತೋ..’ ಹಾಡು ರಿಲೀಸ್ ಆಗಿದೆ. ಈ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಶಮಂತ್ ನಾಗರಾಜ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ಅವರು ಈ ಹಾಡನ್ನು ಹಾಡಿದ್ದಾರೆ. ಸಂಗೀತ ಸಂಯೋಜನೆಯೂ ಅವರದ್ದೇ. ತನಿಷಾ ಕುಪ್ಪಂಡ ಅವರ ಎನರ್ಜಿ, ಮಾತಿನ ಶೈಲಿ ಸೇರಿ ಎಲ್ಲ ಗುಣಗಳನ್ನು ಈ ಸಾಂಗ್ನಲ್ಲಿ ಬಣ್ಣಿಸಲಾಗಿದೆ.
ಇದನ್ನೂ ಓದಿ: ‘ಯಾಕೆ ಬಿಗ್ ಬಾಸ್?’; ಕಣ್ಣೀರು ಹಾಕುತ್ತಲೇ ಮನೆಯಿಂದ ಹೊರ ಹೋದ ತನಿಷಾ
ಗುರುವಾರದ (ಜನವರಿ 18) ಎಪಿಸೋಡ್ನಲ್ಲಿ ತನಿಷಾ ಔಟ್ ಆದರು. ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಬಹುದು ಅನ್ನೋದು ಕೆಲವರ ಊಹೆ ಆಗಿತ್ತು. ಆದರೆ, ಹಾಗಾಗಿಲ್ಲ. ಇದು ಅವರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:51 am, Fri, 19 January 24