ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು

Tara Sutaria: ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್​​ ಲೆವೆಲ್​​ನಲ್ಲಿ ನಿರ್ಮಾಣ ಮಾಡಿರುವುದು ಸಿನಿಮಾದ ಟೀಸರ್, ಪೋಸ್ಟರ್​​ಗಳಿಂದ ಈಗಾಗಲೇ ತಿಳಿದಿದೆ. ಆದರೆ ಯಶ್ ಅವರು ಸಿನಿಮಾದ ಸೆಟ್​​ನಲ್ಲೂ ನಟ-ನಟಿ ಸೇರಿದಂತೆ ಎಲ್ಲ ಸಿಬ್ಬಂದಿಗೂ ವಿಶ್ವ ದರ್ಜೆಯ ಟ್ರೀಟ್​​ಮೆಂಟ್ ಸಿಗುವಂತೆ ಮಾಡಿದ್ದರು. ‘ಟಾಕ್ಸಿಕ್’ ಸಿನಿಮಾ ಸೆಟ್​​ನಲ್ಲಿದ್ದ ವೃತ್ತಿಪರತೆ ಬಗ್ಗೆ ಕೆಲಸದ ಗುಣಮಟ್ಟ ಇನ್ನಿತರೆ ವಿಷಯಗಳ ಬಗ್ಗೆ ಸಿನಿಮಾದ ಐವರು ನಾಯಕಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಮಾತನಾಡಿದ್ದಾರೆ.

ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು
Tara Sutaria

Updated on: May 17, 2026 | 5:01 PM

ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ (Pan India) ಲೆವೆಲ್​​ಗೆ ಮತ್ತು ಈಗ ‘ಟಾಕ್ಸಿಕ್’ ಮೂಲಕ ಹಾಲಿವುಡ್​​ ಲೆವೆಲ್​​ಗೆ ಕೊಂಡೊಯ್ಯುವ ಕಾರ್ಯವನ್ನು ನಟ ಯಶ್ ಮಾಡುತ್ತಿದ್ದಾರೆ. ಅವರು ಸಿನಿಮಾವನ್ನು ಹಾಲಿವುಡ್​​ ಲೆವೆಲ್​​ನಲ್ಲಿ ನಿರ್ಮಾಣ ಮಾಡಿರುವುದು ಸಿನಿಮಾದ ಟೀಸರ್, ಪೋಸ್ಟರ್​​ಗಳಿಂದ ಈಗಾಗಲೇ ತಿಳಿದಿದೆ. ಆದರೆ ಯಶ್ ಅವರು ಸಿನಿಮಾದ ಸೆಟ್​​ನಲ್ಲೂ ನಟ-ನಟಿ ಸೇರಿದಂತೆ ಎಲ್ಲ ಸಿಬ್ಬಂದಿಗೂ ವಿಶ್ವ ದರ್ಜೆಯ ಟ್ರೀಟ್​​ಮೆಂಟ್ ಸಿಗುವಂತೆ ಮಾಡಿದ್ದರು. ‘ಟಾಕ್ಸಿಕ್’ ಸಿನಿಮಾ ಸೆಟ್​​ನಲ್ಲಿದ್ದ ವೃತ್ತಿಪರತೆ ಬಗ್ಗೆ ಕೆಲಸದ ಗುಣಮಟ್ಟ ಇನ್ನಿತರೆ ವಿಷಯಗಳ ಬಗ್ಗೆ ಸಿನಿಮಾದ ಐವರು ನಾಯಕಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಮಾತನಾಡಿದ್ದಾರೆ.

ಹಾಲಿವುಡ್ ರಿಪೋರ್ಟರ್​ ಜೊತೆಗೆ ಮಾತನಾಡಿರುವ ನಟಿ ತಾರಾ ಸುತಾರಿಯಾ ‘ಟಾಕ್ಸಿಕ್’ ಸಿನಿಮಾದ ಸೆಟ್ ಮತ್ತು ಅಲ್ಲಿಯ ಶೂಟಿಂಗ್ ವಿಧಾನ, ಕಲಾವಿದರನ್ನು, ತಂತ್ರಜ್ಞರನ್ನು, ಸಿಬ್ಬಂದಿಗಳನ್ನು ನಡೆಸಿಕೊಳ್ಳುತ್ತಿದ್ದ ವಿಧಾನ ಎಷ್ಟು ವೃತ್ತಿಪರವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ‘ನನಗಂತೂ ‘ಟಾಕ್ಸಿಕ್’ ಸಿನಿಮಾನಲ್ಲಿ ಕೆಲಸ ಮಾಡಿದ್ದು ಬಹಳ ತೃಪ್ತಿ ತಂದಿದೆ. ಶೂಟಿಂಗ್ ಸೆಟ್‌ನಲ್ಲಿ ನನಗೆ ತುಂಬಾ ಒಳ್ಳೆಯ ಅನುಭವ ನೀಡಿದ ಸಿನಿಮಾ ಇದು’ ಎಂದಿದ್ದಾರೆ.

ಸಿನಿಮಾ ಸೆಟ್​​ಗಳಲ್ಲಿ ಅತಿಯಾದ ಕೆಲಸಕ್ಕೆ ಪ್ರಾಧಾನ್ಯತೆ ಹೆಚ್ಚು, ಶೂಟಿಂಗ್ ಬೇಗನೆ ಮುಗಿಯಬೇಕು ಮತ್ತು ರಿಚ್ ಆಗಿ ಬರಬೇಕೆಂದು ಚಿತ್ರತಂಡಗಳು ನಟ-ನಟಿಯರನ್ನು ಹೆಚ್ಚಿಗೆ ದುಡಿಸಿಕೊಳ್ಳುವುದು, ಭದ್ರತೆ, ಸುರಕ್ಷತೆಗೆ ಹೆಚ್ಚು ಗಮನ ವಹಿಸದೇ ಇರುವುದು ಮಾಡುತ್ತವೆ. ಆದರೆ ‘ಟಾಕ್ಸಿಕ್’ ಸೆಟ್​​ನಲ್ಲಿ ಇದೆಲ್ಲ ಇರಲೇ ಇಲ್ಲವಂತೆ. ‘ಸೆಟ್​​ನಲ್ಲಿ ಮಾನವೀಯತೆಗೆ ಮತ್ತು ಪ್ರಮಾಣಿಕತೆಗೆ ಮೊದಲ ಆದ್ಯತೆ ಇತ್ತು’ ಎಂದು ನಟಿ ತಾರಾ ಸುತಾರಿಯಾ ಹೇಳಿದ್ದಾರೆ.

ಇದನ್ನೂ ಓದಿ:ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

ಮುಂದುವರೆದು ಮಾತನಾಡಿ, ‘ನನಗೆ ಬಹಳ ವರ್ಷಗಳ ಬಳಿಕ ಒಳ್ಳೆಯ ತಂಡ ಸಿಕ್ಕಿತು, ಅದು ಕೂಡ ಗೀತು ಮೋಹನ್ ದಾಸ್ ಅವರ ನಾಯಕತ್ವದಲ್ಲಿ. ನಿಖಿಲ್ ನಾಗೇಶ್ ಭಟ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ ಬಳಿಕ ನನಗೆ ಸಿಕ್ಕ ಅದ್ಭುತ ನಿರ್ದೇಶಕಿ ಗೀತು ಮೋಹನ್​​ದಾಸ್. ಅವರ ಜೊತೆ ಕೆಲಸ ಮಾಡುವುದು ಮತ್ತು ಒಬ್ಬ ಮಹಿಳೆಯ ನೇತೃತ್ವದಲ್ಲಿ ಮುನ್ನಡೆಯುವುದು ನನ್ನ ಜೀವನದ ಅತ್ಯಂತ ಸಂತೋಷದ ವಿಷಯವಾಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಕೆಲಸ ಮಾಡಿರುವ ಯಾರನ್ನು ಬೇಕಾದರೂ ಕೇಳಿ ಎಲ್ಲರೂ ಇದೇ ಉತ್ತರ ನೀಡುತ್ತಾರೆ’ ಎಂದಿದ್ದಾರೆ ನಟಿ ತಾರಾ ಸುತಾರಿಯಾ.

ಯಶ್, ‘ಟಾಕ್ಸಿಕ್’ ಸಿನಿಮಾದ ಸಹ ನಿರ್ಮಾಪಕ ಆಗಿದ್ದು, ಯಶ್ ಅವರು ವೃತ್ತಿಪರತೆಯಿಂದ, ಕಾರ್ಪೊರೇಟ್ ಶೈಲಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ. ಸಾಮಾನ್ಯ ಸಿನಿಮಾ ಶೂಟಿಂಗ್​​ನ ಮಾದರಿಗಳನ್ನು ಕೈಬಿಟ್ಟು, ಕನ್ನಡ ಸಿನಿಮಾ ಶೂಟಿಂಗ್​​ಗೆ ಒಂದು ಕಾರ್ಪೊರೇಟ್ ಶೈಲಿಯನ್ನು ತಂದಿದ್ದಾರೆ. ಈಗ ಸಿನಿಮಾವನ್ನು ಸಹ ಹಾಲಿವುಡ್ ಲೆವೆಲ್​​ನಲ್ಲಿ ಬಿಡುಗಡೆ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾದ ಹೊಸ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Sun, 17 May 26

Follow Us