ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files Movie) ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಮೊದಲ ದಿನ ಬಾಲಿವುಡ್ನಲ್ಲಿ ಕೇವಲ 3 ಕೋಟಿ ರೂಪಾಯಿ ಗಳಿಸಿತ್ತು ಈ ಸಿನಿಮಾ. ಈ ಚಿತ್ರದ ಲೈಫ್ಟೈಮ್ ಕಲೆಕ್ಷನ್ 250 ಕೋಟಿ ರೂಪಾಯಿ ದಾಟಿದೆ. ಈಗ ಚಿತ್ರ ಒಟಿಟಿಯಲ್ಲಿ ಕಮಾಲ್ ಮಾಡುತ್ತಿದೆ. ಮೇ 13ರಂದು ಜೀ5 ಆ್ಯಪ್ನಲ್ಲಿ ಬಿಡುಗಡೆ ಆದ ಸಿನಿಮಾ ಕೋಟಿ ಕೋಟಿ ವೀಕ್ಷಣೆ ಕಾಣುತ್ತಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಸಿನಿಮಾ ಉಡೀಸ್ ಮಾಡಿದೆ.
ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆ ಕುರಿತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಕೆಲವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರು. ಪರ-ವಿರೋಧಗಳ ಚರ್ಚೆ ಮಧ್ಯೆ ಸಿನಿಮಾ ಗೆದ್ದು ಬೀಗಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆ ಬರೆದಿದೆ.
ಇದನ್ನೂ ಓದಿ: ಕಣಿವೆ ರಾಜ್ಯದಲ್ಲಿ ಮತ್ತೆ ಹತ್ಯೆಗೆ ಕಾರಣವಾಯ್ತಾ ಕಾಶ್ಮೀರ್ ಫೈಲ್ಸ್ ಸಿನಿಮಾ?; ಕಾಶ್ಮೀರಿ ಪಂಡಿತರು ಹೇಳೋದೇನು?
ಇತ್ತೀಚೆಗೆ ಈ ಸಿನಿಮಾ ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾವನ್ನು ಮೊದಲ ವಾರಾಂತ್ಯಕ್ಕೆ 60 ಲಕ್ಷ ಬಾರಿ ನೋಡಿದ್ದು, 2.20 ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಈಗ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದೆ. ಒಂದು ವಾರಕ್ಕೆ ಈ ಚಿತ್ರವನ್ನು 90 ಲಕ್ಷ ಮಂದಿ ನೋಡಿದ್ದು, 3 ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಜೀ5 ಆ್ಯಪ್ನಲ್ಲಿ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿದ್ದು ಇದೇ ಮೊದಲು ಎನ್ನಲಾಗಿದೆ. ಈ ಮೂಲಕ ಒಟಿಟಿಯಲ್ಲೂ ಸಿನಿಮಾ ಧೂಳೆಬ್ಬಿಸಿದೆ.
ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್ ಖೇರ್ ಹೇಗಾದ್ರು ನೋಡಿ
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದ ಬಜೆಟ್ ಕೇವಲ 15 ಕೋಟಿ ರೂಪಾಯಿ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ನಡೆದಿದೆ. ಈ ಚಿತ್ರವನ್ನು ಕೆಲವರು ವಿರೋಧಿಸಿದ್ದಾರೆ. ಈ ಚಿತ್ರದಿಂದ ಶಾಂತಿ ಕದಡುವ ಪ್ರಯತ್ನ ಆಗಿದೆ ಎಂದು ಆರೋಪಿಸಿದವರು ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.