ಪುನೀತ್ ರಾಜ್ಕುಮಾರ್ ಅವರ ಜನ್ಮದಿನ ಸಮಿಪೀಸಿದೆ. ಮಾರ್ಚ್ 17ರಂದು ಅವರು ಇದ್ದಿದ್ದರೆ 50ನೇ ವರ್ಷದ ಬರ್ತ್ಡೇನ ಅವರ ಜೊತೆ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಪುನೀತ್ ರಾಜ್ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲದಿದ್ದರು ಆಚರರಣೆ ನಿಂತಿಲ್ಲ. ಅವರ ನಟನೆಯ ‘ಅಪ್ಪು’ ಸಿನಿಮಾ (Appu Movie) ರೀ-ರಿಲೀಸ್ ಆಗಿದೆ. ಎಲ್ಲ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅವರ ಬರ್ತ್ಡೇ ಸಂದರ್ಭದಲ್ಲಿ ಅವರ ವಿಡಿಯೋಗಳನ್ನು ಹಂಚಿಕೊಳ್ಳುವ ಕೆಲಸ ಆಗುತ್ತಿದೆ. ಈಗ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಅವರು ತಮ್ಮ ಪ್ರೀತಿ ವಿಚಾರವನ್ನು ತಂದೆಗೆ ಹೇಳಿಕೊಂಡ ಬಗ್ಗೆ ಮಾತನಾಡಿದ್ದರು.
ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಪ್ರೀತಿಸಿ ಮದುವೆ ಆದವರು. ಇವರ ಪ್ರೀತಿಗೆ ಕುಟುಂಬದವರು ಕೂಡ ಒಪ್ಪಿಗೆ ಕೊಟ್ಟ ಬಳಿಕವೇ ಮದುವೆ ನಡೆಯಿತು. ಪುನೀತ್ ರಾಜ್ಕುಮಾರ್ ಅವರು ಈ ವಿಚಾರವನ್ನು ತುಂಬಾನೇ ಭಯದಲ್ಲೇ ತಂದೆ ಬಳಿ ಹೇಳಿಕೊಂಡಿದ್ದರು. ವಿಶೇಷ ಎಂದರೆ ರಾಜ್ಕುಮಾರ್ ನೀಡಿದ ಪುನೀತ್ ಮೊಗದಲ್ಲಿ ನಗು ತರಿಸಿತ್ತು.
ಪುನೀತ್ ರಾಜ್ಕುಮಾರ್ ಅವರಿಗೆ ಆಗ 24 ವರ್ಷ. ರಾಜ್ಕುಮಾರ್ಗೆ 70+ ವರ್ಷ ಆಗಿತ್ತು. ಆದರೂ ರಾಜ್ಕುಮಾರ್ ಅವರು ಮಕ್ಕಳ ಭಾವನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ‘ನನ್ನ ತಾಯಿ ಬಳಿ ಪ್ರೀತಿ ವಿಚಾರ ಹೇಳಿದೆ. ಆಯ್ತಪ್ಪ, ತಂದೆಗೆ ಹೇಳಿ ಎಂದರು. ಆಗ ನನಗೆ 24 ವರ್ಷ. ಅವರಿಗೆ 72 ವರ್ಷ. ನನ್ನ ತಂದೆ ಬಳಿ ಹೋಗಿ ಒಂದು ಹುಡುಗಿಯನ್ನು ಇಷ್ಟಪಟ್ಟಿದೀನಿ ಎಂದೆ. ಅವರು ನಕ್ಕರು. ಮದುವೆ ಮಾಡ್ಕೋತಿನಿ ಎಂದರು. ನನ್ನ ತಂದೆ ಬರ್ತ್ಡೇ ದಿನ ಅಶ್ವಿನಿ ಬಳಿ ಕಾಲ್ ಮಾಡಿಸಿ ತಂದೆಗೆ ವಿಶ್ ಮಾಡಿಸಿದ್ದೆ. ಜನರೇಶನ್ ಗ್ಯಾಪ್ ಅನ್ನೋದಲ್ಲ ಏನೂ ಇರಲಿಲ್ಲ’ ಎಂದಿದ್ದರು ಪುನೀತ್. (ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ)
ಇದನ್ನೂ ಓದಿ: ‘ಅಪ್ಪು’ ಸಿನಿಮಾ ಹಿಟ್ ಆದಾಗ ರಾಜ್ಕುಮಾರ್ ಮಾಡಿದ್ದೇನು? ಪುನೀತ್ಗೆ ಖುಷಿ ಕೊಟ್ಟಿತ್ತು ವಿಚಾರ
ರಾಜ್ಕುಮಾರ್ ಅವರು ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುತ್ತಿದ್ದರು. ಹಿರಿಯರ ಬಳಿ ಅವರ ರೀತಿಯೇ ಇರುತ್ತಿದ್ದರು. ರಾಜ್ಕುಮಾರ್ ಒಪ್ಪಿಗೆ ಬಳಿಕ ಪುನೀತ್ ಹಾಗೂ ಅಶ್ವಿನಿ ಮದುವೆ ಅದ್ದೂರಿಯಾಗಿ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:53 am, Sat, 15 March 25