ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್: ಪುಂಡರ ವಿರುದ್ಧ ಸಮರ ಸಾರಿದ ಅನಸೂಯ!

ಹೈದರಾಬಾದ್: ಅನಸೂಯ ಭಾರದ್ವಾಜ್​.. ಮಾತಿನಲ್ಲೇ ಮೋಡಿ ಮಾಡೋ.. ಪ್ರೋಗ್ರಾಂಗಳಲ್ಲಿ ಪಟ ಪಟ ಮಾತನಾಡೋ ಸುಂದರಿ. ನಿರೂಪಣೆ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಡಬಲ್ಲ ಫೇಮಸ್ ಆ್ಯಂಕರ್. ಟಾಲಿವುಡ್​​​ನಲ್ಲಿ ಕಮಾಲ್ ಮಾಡಿರೋ ನಟಿ, ನಿರೂಪಕಿ ಅನಸೂಯ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಟಾಲಿವುಡ್​​​ ಟಾಪ್​​​​ ನಿರೂಪಕಿ ಬಗ್ಗೆ ಅಸಭ್ಯ ಪೋಸ್ಟ್..! ಯೆಸ್.. ತೆಲುಗು ಸಿನಿದುನಿಯಾದಲ್ಲಿ ಯಾವುದೇ ಕಾರ್ಯಕ್ರಮ ನಡೀಲಿ.. ಯಾವುದೇ ಚಿತ್ರದ ಸಾಂಗ್​ ರಿಲೀಸ್.. ಟ್ರೇಲರ್​​ ರಿಲೀಸ್​​ ಆಗ್ಲಿ.. ಆ್ಯಂಕರ್ ಅನಸೂಯ ಅಲ್ಲಿ ಇರ್ತಾರೆ. ಅವರದ್ದೇ ನಿರೂಪಣೆ ಇರುತ್ತೆ. ತಮ್ಮದೇ […]

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್: ಪುಂಡರ ವಿರುದ್ಧ ಸಮರ ಸಾರಿದ ಅನಸೂಯ!
Follow us
ಸಾಧು ಶ್ರೀನಾಥ್​
|

Updated on:Feb 26, 2020 | 10:33 AM

ಹೈದರಾಬಾದ್: ಅನಸೂಯ ಭಾರದ್ವಾಜ್​.. ಮಾತಿನಲ್ಲೇ ಮೋಡಿ ಮಾಡೋ.. ಪ್ರೋಗ್ರಾಂಗಳಲ್ಲಿ ಪಟ ಪಟ ಮಾತನಾಡೋ ಸುಂದರಿ. ನಿರೂಪಣೆ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಡಬಲ್ಲ ಫೇಮಸ್ ಆ್ಯಂಕರ್. ಟಾಲಿವುಡ್​​​ನಲ್ಲಿ ಕಮಾಲ್ ಮಾಡಿರೋ ನಟಿ, ನಿರೂಪಕಿ ಅನಸೂಯ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಟಾಲಿವುಡ್​​​ ಟಾಪ್​​​​ ನಿರೂಪಕಿ ಬಗ್ಗೆ ಅಸಭ್ಯ ಪೋಸ್ಟ್..! ಯೆಸ್.. ತೆಲುಗು ಸಿನಿದುನಿಯಾದಲ್ಲಿ ಯಾವುದೇ ಕಾರ್ಯಕ್ರಮ ನಡೀಲಿ.. ಯಾವುದೇ ಚಿತ್ರದ ಸಾಂಗ್​ ರಿಲೀಸ್.. ಟ್ರೇಲರ್​​ ರಿಲೀಸ್​​ ಆಗ್ಲಿ.. ಆ್ಯಂಕರ್ ಅನಸೂಯ ಅಲ್ಲಿ ಇರ್ತಾರೆ. ಅವರದ್ದೇ ನಿರೂಪಣೆ ಇರುತ್ತೆ. ತಮ್ಮದೇ ಸ್ಟೈಲ್​​​ ಆಫ್ ಆ್ಯಂಕರಿಂಗ್​ ಮೂಲಕ ಜನಮನ ಸೆಳೆಯೋ ಅನಸೂಯ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಅದೇನಂದ್ರೆ ಅನಸೂಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹಾಕಿರೋ ಆ ಒಂದು ಅಸಭ್ಯ ಪೋಸ್ಟ್​.

ಸೈಬರ್ ಪೊಲೀಸ್​ ಠಾಣೆ ಮೆಟ್ಟಿಲೇರಿದ ಅನಸೂಯ: ಇನ್ನು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಹಾಕಿರೋ ಅಸಭ್ಯ ಪೋಸ್ಟ್ ವೈರಲ್ ಆಗ್ತಿದ್ದಂತೆ ಅನಸೂಯ ಕೆರಳಿದ್ರು. ಫೇಸ್​​ಬುಕ್​​ನಲ್ಲಿ​ ಪೋಸ್ಟ್​​​​ ಹಾಕಿರೋರ ವಿರುದ್ಧ ಸೈಬರ್ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಈ ಕೃತ್ಯ ಎಸಗಿರೋರನ್ನ ಕೂಡಲೇ ಬಂಧಿಸುವಂತೆ ದೂರು ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ಇತ್ತ ಪೊಲೀಸ್ ಅಧಿಕಾರಿಗಳು ಕೂಡ ಕ್ರಮದ ಭರವಸೆ ನೀಡಿದ್ದಾರೆ.

ಒಂದ್ಕಡೆ ಟಾಲಿವುಡ್​​ನ ಜಬರ್ದಸ್ತ್​ ಕಾರ್ಯಕ್ರಮದ ಮೂಲಕ ಫೇಮಸ್ ಆಗಿರೋ ಟಾಪ್​​ ಆ್ಯಂಕರ್​​ ಬಗ್ಗೆ ಕ್ರಿಮಿಗಳು ಪೋಸ್ಟ್​ ಹಾಕಿ ಮೆರೆದಿರೋದು ವಿವಾದ ಸೃಷ್ಟಿಸಿದೆ. ಇದ್ರಿಂದ ಆ್ಯಂಕರ್ ಅನಸೂಯ ಮುಜುಗರಕ್ಕೀಡಾಗಿದ್ದಾರೆ. ಇತ್ತ ಫೇಕ್ ಅಕೌಂಟ್​​ಗಳ ಮೂಲಕ ಪೋಸ್ಟ್​​​​​​ ಹಾಕಿರ್ಬೋದು ಎನ್ನಲಾಗ್ತಿದೆ. ಅಸಭ್ಯ ಪೋಸ್ಟ್ ಹಾಕಿರೋ ಕ್ರಿಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Published On - 10:26 am, Tue, 11 February 20

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್