
‘ಟಾಕ್ಸಿಕ್’ ಚಿತ್ರದ ಟೀಸರ್ (Toxic Movie Teaser) ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಚಿತ್ರದ ಮೇಕಿಂಗ್ ಹೇಗಿರಲಿದೆ ಎಂಬ ಸಣ್ಣ ಝಲಕ್ ಟೀಸರ್ನಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಬರೋ ಬೋಲ್ಡ್ ದೃಶ್ಯಗಳನ್ನು ನೋಡಿದರೆ ಇದೊಂದು ‘ಎ’ ಪ್ರಮಾಣಪತ್ರ ಪಡೆಯಲಿರುವ ಚಿತ್ರ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗುತ್ತಿದೆ. ಹೀಗಿರುವಾಗೇ ‘ಟಾಕ್ಸಿಕ್’ ಸಿನಿಮಾದ ಟೀಸರ್ನಲ್ಲಿ ಬರೋ ಕೊನೆಯ ಡೈಲಾಗ್ ಗಮನ ಸೆಳೆಯುವ ರೀತಿಯಲ್ಲಿದೆ. ಇಡೀ ಚಿತ್ರ ಕಥೆ ಇದರಲ್ಲೇ ಅಡಿಗೆ ಎನ್ನಲಾಗಿದೆ.
‘ಟಾಕ್ಸಿಕ್’ ಚಿತ್ರದ ಓಪನಿಂಗ್ ದೃಶ್ಯ ಆರಂಭ ಆಗೋದು ಸ್ಮಶಾನದ ಮೂಲಕ. ಹೆಣ ಹೂಳುವ ಕೆಲಸ ಆಗುತ್ತಾ ಇರುತ್ತದೆ. ಅಲ್ಲಿಗೆ ಬರೋ ಗ್ಯಾಂಗ್ ಇವರ ಮೇಲೆ ಹಲ್ಲೆ ಮಾಡುತ್ತದೆ. ಅವರನ್ನು ಸ್ಮಶಾನದಿಂದ ಹೊರ ಹಾಕುತ್ತಾರೆ. ಆಗ ಎಂಟ್ರಿ ಆಗುತ್ತಾನೆ ರಾಯ (ಯಶ್). ಬೋಲ್ಡ್ ದೃಶ್ಯವನ್ನು ತೋರಿಸೋ ನಿರ್ದೇಶಕಿ ಗೀತು ಮೋಹನ್ದಾಸ್, ನಂತರ ಮಾಸ್ ಅಂಶ ತೋರಿಸುತ್ತಾರೆ.
ಯಶ್ ಅವರಿಗೆ ಇಡೀ ಟೀಸರ್ನಲ್ಲಿ ಇರೋದು ಒಂದೇ ಡೈಲಾಗ್, ಅದುವೇ ‘Daddy’s Home’ ಎಂದು. ಈ ಪದದ ಅರ್ಥ ‘ಲೀಡರ್ ಬಂದಾಯ್ತು’ ಎಂದು. ಅಥವಾ ರಕ್ಷಕ ಬಂದ ಎಂಬರ್ಥವೂ ಬರುತ್ತದೆ. ಅಂದರೆ, ಕೆಟ್ಟವರಿಗೆ ರಾಯ ದುಸ್ವಪ್ನನಾಗುತ್ತಾನೆ ಎಂಬರ್ಥವನ್ನೂ ಇದಕ್ಕೆ ಕಲ್ಪಿಸಬಹುದು. ಈ ಚಿತ್ರದಲ್ಲಿ ಯಶ್ ಅವರೇ ಗ್ಯಾಂಗ್ಸ್ಟರಾ ಎಂಬ ಪ್ರಶ್ನೆಯೂ ಮೂಡುತ್ತದೆ.
ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ನಲ್ಲಿ ಮಾಸ್ ಹಾಗೂ ಹಸಿಬಿಸಿ ದೃಶ್ಯ; ಇಲ್ಲಿವೆ ಫೋಟೋಸ್
‘ಟಾಕ್ಸಿಕ್’ ಸಿನಿಮಾ ಕೇವಲ ವಯಸ್ಕರಿಗೆ ಮಾತ್ರ. ಚಿತ್ರದ ಮೇಕಿಂಗ್ ಹಾಲಿವುಡ್ ಸ್ಟೈಲ್ನಲ್ಲಿ ಇದೆ. ಈ ಟೀಸರ್ ಮೂರು ಗಂಟೆಗೆ ಬರೋಬ್ಬರಿ 3 ಲಕ್ಷದಷ್ಟು ವೀಕ್ಷಣೆ ಕಂಡಿದೆ ಎಂಬುದು ವಿಶೇಷ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಟ್ರೇಲರ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:11 pm, Thu, 8 January 26