Yash in Amrutheshwara Temple: ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿಯಾದ ಯಶ್​, ರಾಜಮೌಳಿ

‘ರಾಕಿಂಗ್​ ಸ್ಟಾರ್​’ ಯಶ್​ ಹಾಗೂ ಪ್ಯಾನ್​ ಇಂಡಿಯಾ ಡೈರೆಕ್ಟರ್​ ರಾಜಮೌಳಿ ಅವರು ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿ ಆಗಿದ್ದಾರೆ. ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಯಶ್​ ಮಾತನಾಡಿದ್ದಾರೆ.

Yash in Amrutheshwara Temple: ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿಯಾದ ಯಶ್​, ರಾಜಮೌಳಿ
ಎಸ್​ಎಸ್​ ರಾಜಮೌಳಿ, ಯಶ್​
Follow us
ಮದನ್​ ಕುಮಾರ್​
|

Updated on: Feb 29, 2024 | 4:03 PM

ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​ (Yash) ಅವರು ‘ಟ್ಯಾಕ್ಸಿಕ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಅವರು ಬಳ್ಳಾರಿಗೆ ತೆರಳಿದ್ದಾರೆ. ಅಲ್ಲಿ ಶ್ರೀ ಅಮೃತೇಶ್ವರ ದೇವಸ್ಥಾನದ (Sri Amrutheshwara Temple) ಉದ್ಘಾಟನೆಯಲ್ಲಿ ಅವರು ಭಾಗಿ ಆಗಿದ್ದಾರೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಕೂಡ ಈ ದೇವಸ್ಥಾನದ ಉದ್ಘಾಟನೆಯಲ್ಲಿ ಪತ್ನಿ ಸಮೇತರಾಗಿ ಭಾಗಿಯಾಗಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾದ ರಾಜಮೌಳಿ (SS Rajamouli) ಮತ್ತು ಯಶ್​ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

‘ದೇವರ ದರ್ಶನಕ್ಕೆ ಬಂದಿದ್ದೇನೆ. ಸಾಯಿ ಅವರು ನಮ್ಮ ಆತ್ಮೀಯರು. ‘ಕೆಜಿಎಫ್​ 1’ ಸಿನಿಮಾವನ್ನು ತೆಲುಗಿನಲ್ಲಿ ಅವರು ವಿತರಣೆ ಮಾಡಿದ್ದರು. ಆ ಸಿನಿಮಾದ ಗೆಲುವಿಗೆ ಅವರು ಕೂಡ ಕಾರಣ ಆಗಿದ್ದರು. ಅವರು ತುಂಬ ದೈವ ಭಕ್ತರು ಕೂಡ ಹೌದು. ಅವರು ಊರಿನಲ್ಲಿ ದೇವಸ್ಥಾನದ ಕಟ್ಟುವಾಗ ನನಗೆ ಮೊದಲೇ ಹೇಳಿದ್ದರು. ಅದಕ್ಕಾಗಿ ಇವತ್ತು ಬಂದಿದ್ದೇನೆ. ದೇವರ ದರ್ಶನ ಮಾಡಿದೆ. ಪೂಜೆಯಲ್ಲಿ ಭಾಗಿದ್ದು ಬಹಳ ಖುಷಿ ಆಯಿತು’ ಎಂದು ಯಶ್​ ಹೇಳಿದ್ದಾರೆ.

ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆ ಬಳಿಕ ಮಾಧ್ಯಮದವರ ಜೊತೆ ಯಶ್​ ಮಾತನಾಡಿದ್ದಾರೆ. ಈ ವೇಳೆ ತಮ್ಮ ವೈರಲ್​ ಫೋಟೋದ ಬಗ್ಗೆಯೂ ಅವರು ಮಾತನಾಡಿದರು. ‘ಅದು ನಮ್ಮ ರಾಧಿಕಾ ಅವರ ಮನೆಯ ಬಳಿಯ ದೇವಸ್ಥಾನಕ್ಕೆ ಹೋದಾಗ ಮಕ್ಕಳು ತಿಂಡಿ ಕೇಳಿದ್ದರು. ತಿಂಡಿ ಕೊಡಿಸುತ್ತಿದ್ದೆ ಅಷ್ಟೇ. ಆ ಅಂಗಡಿಗೆ ನಾವು 10-12 ವರ್ಷದಿಂದ ಹೋಗುತ್ತಿದ್ದೇವೆ’ ಎಂದು ಯಶ್​ ಹೇಳಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಯಶ್​ ವಿಡಿಯೋ ವೈರಲ್​:

‘ಸಿಂಪಲ್​ ಎಂಬುದು ಏನೂ ಅಲ್ಲ. ಯಾಕೆಂದರೆ ಐಷಾರಾಮಿ ಕಾರು ಮತ್ತು ವಿಮಾನದಲ್ಲಿ ಓಡಾಡುತ್ತೇವೆ. ಅದರಲ್ಲಿ ಯಾವ ಸರಳತೆ ಇದೆ? ಸಹಜವಾಗಿ ಇರುವುದನ್ನೇ ಜನರು ಸರಳತೆ ಅಂತಾರೆ ಈಗ. ನಾವು ಬೆಳೆದಿರುವುದೇ ಹಾಗೇ. ಅದನ್ನೂ ತಿನ್ನುತ್ತೇವೆ, ಫೈ ಸ್ಟಾರ್​ ಹೋಟೆಲ್​ಗೂ ಹೋಗುತ್ತೇವೆ. ಜೀವನದಲ್ಲಿ ಎಲ್ಲವೂ ಇರಬೇಕು’ ಎಂದು ಯಶ್​ ಹೇಳಿದ್ದಾರೆ.

ಇದನ್ನೂ ಓದಿ: ಅಭಿಮಾನಿಯ ಕಾಲ ಮೇಲೆ ಹರಿಯಿತು ಯಶ್ ಬೆಂಗಾವಲು ಪಡೆ ವಾಹನ

ಇದೇ ವೇಳೆ ರಾಜಕೀಯದ ಬಗ್ಗೆ ಬಗ್ಗೆಯೂ ಯಶ್​ ಅವರಿಗೆ ಪ್ರಶ್ನೆ ಎದುರಾಯಿತು. ದೇವಸ್ಥಾನದ ಆವರಣದಲ್ಲಿ ರಾಜಕೀಯದ ಕುರಿತು ವಿಷಯ ಎತ್ತಿದ್ದು ಅವರಿಗೆ ಸರಿ ಎನಿಸಲಿಲ್ಲ. ‘ನಿನಗೇನಾದರೂ ಬುದ್ಧಿ ಇದೆಯೇನಯ್ಯ? ರಾಜಕೀಯದ ಬಗ್ಗೆ ಕೇಳುವ ಜಾಗನಾ ಇದು? ನೀವು ಹೀಗೆಲ್ಲ ಮಾಡಬಾರದು’ ಎಂದು ಯಶ್​ ಗರಂ ಆಗಿದ್ದಾರೆ. ಆ ಮೂಲಕ ಅವರು ರಾಜಕೀಯದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.

Toxic star Yash and SS Rajamouli inaugurates Sri Amrutheshwara Temple in Bellary mdn

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ