‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ

‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಟೀಸರ್‌ಗಳ ವೀಕ್ಷಣೆಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಯಶ್ ಅಭಿನಯದ ‘ಟಾಕ್ಸಿಕ್’ ಟೀಸರ್ 97 ಮಿಲಿಯನ್ ವೀಕ್ಷಣೆಗಳೊಂದಿಗೆ ಭಾರಿ ಕ್ರೇಜ್ ಸೃಷ್ಟಿಸಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 50 ಮಿಲಿಯನ್ ವೀಕ್ಷಣೆ ಕಂಡಿತ್ತು. ‘ಧುರಂಧರ್ 2’ ಟೀಸರ್ ಕೇವಲ 11 ಮಿಲಿಯನ್ ವೀಕ್ಷಣೆ ಪಡೆದು ಗಮನ ಸೆಳೆಯುವಲ್ಲಿ ವಿಫಲವಾಗಿದೆ.

‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ
ಯಶ್​-ರಣವೀರ್

Updated on: Feb 05, 2026 | 7:39 AM

‘ಟಾಕ್ಸಿಕ್’ ಟೀಸರ್ (Toxic Movie) ರಿಲೀಸ್ ಆದಾಗ ಶುರುವಾದ ಒಂದು ಹಲ್​ಚಲ್ ಇದೆಯಲ್ಲ ಅದು ತುಂಬಾನೇ ದೊಡ್ಡದು. ಈ ಟೀಸರ್​​ನಲ್ಲಿ ಬಂದ ಯಾರೂ ಊಹಿಸದ ದೃಶ್ಯದಿಂದ ಟೀಸರ್ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತೆ ಆಯಿತು. ಆದರೆ, ‘ಧುರಂಧರ್ 2’ ಸಿನಿಮಾದ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಎರಡೂ ಟೀಸರ್ ವೀಕ್ಷಣೆಯ ವೀವ್ಸ್ ನೋಡಿದರೆ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ, ಯಾವ ಸಿನಿಮಾಗೆ ಹೆಚ್ಚು ಬೇಡಿಕೆ ಇದೆ ಎಂಬುದು ಸ್ಪಷ್ಟವಾಗಿದೆ.

‘ಟಾಕ್ಸಿಕ್’ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅಂದು ಯಶ್ ಜನ್ಮದಿನ. ಈ ಟೀಸರ್ 24 ಗಂಟೆಯಲ್ಲಿ ಯೂಟ್ಯೂಬ್ ಒಂದರಲ್ಲೇ ಸುಮಾರು 50 ಮಿಲಿಯನ್ಸ್ ವೀವ್ಸ್ ಕಂಡಿತ್ತು. ಅಂದರೆ 5 ಕೋಟಿ. ಇದು ಟಾಕ್ಸಿಕ್ ಚಿತ್ರದ ನಿಜವಾದ ಕ್ರೇಜ್ ಏನು ಎಂಬುದನ್ನು ತೋರಿಸಿತ್ತು. ಈ ಟೀಸರ್ ಈವರೆಗೆ ಸುಮಾರು 97 ಮಿಲಿಯನ್ ವೀಕ್ಷಣೆ ಕಂಡಿದೆ. ಇದು ಚಿತ್ರದ ಹೆಚ್ಚುಗಾರಿಕೆ.

ಇದನ್ನೂ ಓದಿ: ‘ಜನ ನಾಯಗನ್’, ‘ಟಾಕ್ಸಿಕ್’ ಬಳಿಕ ‘ಕೆಡಿ’ ಚಿತ್ರಕ್ಕೆ ಬಂತೊಂದು ಸ್ಟ್ರಾಂಗ್ ಪ್ರತಿಸ್ಪರ್ಧಿ

ಆದರೆ, ಈ ದಾಖಲೆಯ ಹತ್ತಿರ ಬರಲು ‘ಧುರಂಧರ್ 2’ ಟೀಸರ್ ಬಳಿ ಸಾಧ್ಯವಾಗಿಲ್ಲ. ಹಿಂದಿ ಟೀಸರ್ 24 ಗಂಟೆಯಲ್ಲಿ 9 ಮಿಲಿಯನ್​​ಗೂ ಕಡಿಮೆ ವೀಕ್ಷಣೆ ಕಂಡಿದೆ. ಇನ್ನು, ಉಳಿದ ಭಾಷೆಯ ಟೀಸರ್ ಸೇರಿಸಿದರೆ ಹೆಚ್ಚುವರಿಯಾಗಿ ಎರಡು ಮಿಲಿಯನ್ ಸೇರ್ಪಡೆ ಆಗಬಹುದು. ಅಂದರೆ, ಈವರೆಗೆ ಟೀಸರ್ 11 ಮಿಲಿಯನ್ ವೀಕ್ಷಣೆ ಕಂಡಿರಬಹುದು. ‘ಟಾಕ್ಸಿಕ್’ ಟೀಸರ್ ಕಂಡ 50 ಮಿಲಿಯನ್ ವೀಕ್ಷಣೆ ಎಲ್ಲಿ, ‘ಧುರಂಧರ್ 2’ ಕಂಡ 11 ಮಿಲಿಯನ್ ವೀಕ್ಷಣೆ ಎಲ್ಲಿ’ ಎಂದು ಕನ್ನಡ ಸಿನಿಪ್ರಿಯರು ಕೇಳಿಕೊಳ್ಳುತ್ತಿದ್ದಾರೆ.

‘ಧುರಂಧರ್’ ಸಿನಿಮಾದಲ್ಲಿ ಬರೋ ಎಂಡ್ ಕ್ರೆಡಿಟ್ ದೃಶ್ಯಗಳನ್ನೇ ‘ಧುರಂಧರ್ 2’ ಟೀಸರ್ ಎಂದು ರಿಲೀಸ್ ಮಾಡಲಾಗಿದೆ. ಇದು ಚಿತ್ರಕ್ಕೆ ತೀವ್ರ ಹಿನ್ನಡೆ ತಂದಿದೆ. ಇನ್ನು ಹೆಚ್ಚೆಂದರೆ ಟೀಸರ್ 20 ಮಿಲಿಯನ್ ವಿಕ್ಷಣೆ ಕಾಣಬಹುದು. ಅದಾಗಲೇ, ‘ಟಾಕ್ಸಿಕ್’ ಟೀಸರ್ 100 ಮಿಲಿಯನ್ ಕ್ಲಬ್ ಸೇರಿರುತ್ತದೆ ಎಂಬುದು ಪಕ್ಕಾ. ಎರಡೂ ಟೀಸರ್ ಮಧ್ಯೆ ಸುಮಾರು 80 ಮಿಲಿಯನ್ ವ್ಯತ್ಯಾಸ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us