AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹತ್ಯೆಗೆ ಸಂಚು ಪ್ರಕರಣ; ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್

ಉಮಾಪತಿ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಯನಗರ ಪೊಲೀಸರು 2020ರ ಕೊನೆಯಲ್ಲಿ ಹಲವು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ದರ್ಶನ್, ಸಂಜು ಎಂಬ ಇಬ್ಬರು ತಲೆಮರಿಸಿಕೊಂಡಿದ್ದರು.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹತ್ಯೆಗೆ ಸಂಚು ಪ್ರಕರಣ; ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್
ಉಮಾಪತಿ ಶ್ರೀನಿವಾಸ್
TV9 Web
| Edited By: |

Updated on:Jan 23, 2022 | 1:44 PM

Share

ಸ್ಯಾಂಡಲ್​​ವುಡ್​ನ (Sandalwood) ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivasa)​ ಅವರು ಹಿಟ್​ ಚಿತ್ರಗಳು ನೀಡಿದ್ದಾರೆ. ಅವರ ನಿರ್ಮಾಣದ ಸಿನಿಮಾಗಳು ಅದ್ದೂರಿಯಾಗಿರುತ್ತವೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ತೆರೆಗೆ ಬಂದ ಅವರ ನಿರ್ಮಾಣದ ‘ಮದಗಜ’ (Madhagaja) ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ಈಗ ಒಟಿಟಿಯಲ್ಲಿ ತೆರೆಗೆ ಬಂದಿದೆ. ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇಟ್ಟುಕೊಂಡಿರುವ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಕೇಸ್​ನಲ್ಲಿ ತಲೆಮರೆಸಿಕೊಂಡಿದ್ದ ಮತ್ತೆ ಇಬ್ಬರನ್ನು ಈಗ ಬಂಧಿಸಲಾಗಿದೆ.

ಉಮಾಪತಿ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಯನಗರ ಪೊಲೀಸರು 2020ರ ಕೊನೆಯಲ್ಲಿ ಹಲವು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ದರ್ಶನ್, ಸಂಜು ಎಂಬ ಇಬ್ಬರು ತಲೆಮರೆಸಿಕೊಂಡಿದ್ದರು. ಇವರಿಗಾಗಿ ಪೊಲೀಸರು ಹುಡಕಾಟ ನಡೆಸಿದ್ದರು. ಆದರೆ, ಸಿಕ್ಕಿರಲಿಲ್ಲ. ಈಗ ಇವರನ್ನು ಪತ್ತೆ ಹಚ್ಚಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಇವರ ವಿಚಾರಣೆ ನಡೆಯತ್ತಿದೆ.

ದರ್ಶನ್ ಹಾಗೂ ಸಂಜು ಪ್ರಕರಣದ 16 ಮತ್ತು 17ನೇ ಆರೋಪಿಗಳಾಗಿದ್ದಾರೆ. ಇವರು 1 ವರ್ಷದಿಂದ ತಲೆಮರೆಸಿಕೊಂಡಿದ್ದರು. ಆರೋಪಿಗಳು ಬೆಂಗಳೂರಿನ ಸುಂಕದಕಟ್ಟೆಯ ಚೈತ್ರಾ ಬಾರ್ ಬಳಿಯಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ನಿಯಂತ್ರಣ ದಳದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರನ್ನು ಜಯನಗರ ಠಾಣಾ ಪೊಲೀಸರ ವಶಕ್ಕೆ ನೀಡಲಾಗಿದೆ.

ಅಮೇಜಾನ್​ ಪ್ರೈಮ್​ನಲ್ಲಿ ‘ಮದಗಜ’

ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ‘ಮದಗಜ’ ಸಿನಿಮಾ ಲಭ್ಯವಾಗಿದೆ. ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಅನೇಕರ ಮನದಲ್ಲಿತ್ತು. ಆ ಬಗ್ಗೆ ನಿರ್ದೇಶಕ ಮಹೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದರು. ‘ಸದ್ಯದ ಟ್ರೆಂಡ್​ ಅದೇ ರೀತಿ ಇದೆ. ಬಿಡುಗಡೆಯಾಗಿ ಎರಡು ವಾರಕ್ಕೆ ಒಟಿಟಿಗೆ ಬಂದರೆ ಅಲ್ಲಿ ಸಿಗುವ ಮೊತ್ತ ದೊಡ್ಡದಾಗಿರುತ್ತದೆ. ಇದರಿಂದ ಚಿತ್ರತಂಡಕ್ಕೆ ಅನುಕೂಲ ಆಗುತ್ತದೆ’ ಎಂದಿದ್ದರು ಮಹೇಶ್​ ಕುಮಾರ್​.

ಒಟಿಟಿಯಲ್ಲಿ ಮನರಂಜನೆ ಬಯಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ ಎಂಬುದು ನಿಜ. ಆದರೆ ಬಿ, ಸಿ ಸೆಂಟರ್​ಗಳಲ್ಲಿ ಪರಿಸ್ಥಿತಿ ಬೇರೆಯೇ ಇದೆ ಎಂಬುದು ಮಹೇಶ್​ ಅಭಿಪ್ರಾಯ. ‘ಮಹಾನಗರಗಳಲ್ಲಿ ಮಾತ್ರ ಒಟಿಟಿ ವೀಕ್ಷಕರು ಜಾಸ್ತಿ ಇದ್ದಾರೆ. ಆದರೆ ಬಿ ಮತ್ತು ಸಿ ಸೆಂಟರ್​ಗಳಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರೇ ಜಾಸ್ತಿ. 40ಕ್ಕೂ ಹೆಚ್ಚು ಕಡೆ ನಮ್ಮ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೆಲವು ಪರಭಾಷೆ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಬಳಿಕ ಜನರು ಮತ್ತೆ ನಮ್ಮ ಸಿನಿಮಾದತ್ತ ಬರಲು ಆರಂಭಿಸಿದ್ದಾರೆ. ಹಾಗಾಗಿ ಒಟಿಟಿಯಲ್ಲಿ ಬಂದರೂ ಕೂಡ ಬಿ, ಸಿ ಸೆಂಟರ್​ಗಳ ಪ್ರದರ್ಶನಕ್ಕೆ ತೊಂದರೆ ಆಗುವುದಿಲ್ಲ’ ಎಂಬುದು ಮಹೇಶ್​ ಹೇಳಿದ್ದರು.

‘ಮದಗಜ’ ಚಿತ್ರಕ್ಕೆ ಗ್ರ್ಯಾಂಡ್​ ಓಪನಿಂಗ್​ ಸಿಕ್ಕಿತ್ತು. 900ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಂಡಿತ್ತು. ಶಿವರಾಜ್​ ಕೆ.ಆರ್​.ಪೇಟೆ, ಚಿಕ್ಕಣ್ಣ, ಧರ್ಮಣ್ಣ ಮುಂತಾದ ಹಾಸ್ಯ ಕಲಾವಿದರು ಕೂಡ ಭರ್ಜರಿ ಮನರಂಜನೆ ನೀಡಿದ್ದರು. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಗಮನ ಸೆಳೆಯುತ್ತಿವೆ. ಈ ಎಲ್ಲ ಕಾರಣಗಳಿಗಾಗಿ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.

ಇದನ್ನೂ ಓದಿ: ಅಮೇಜಾನ್​ ಪ್ರೈಮ್​ನಿಂದ ಬಂಪರ್​ ಆಫರ್​; ಈ ಸಿನಿಮಾಗಳು ಉಚಿತ ವೀಕ್ಷಣೆಗೆ ಲಭ್ಯ

ಅಕ್ಷಯ್​ ಕುಮಾರ್​ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್​; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ

Published On - 1:43 pm, Sun, 23 January 22