‘ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ’; ‘ಯುಐ’ನಲ್ಲಿ 2040ರ ಕಥೆ ಹೇಳಿದ ಉಪೇಂದ್ರ

|

Updated on: Dec 02, 2024 | 11:54 AM

ವಿಶ್ವದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳ ಪೈಕಿ ಕೆಲವು ಪ್ರಮುಖ ವಿಚಾರಗಳನ್ನು ‘ಯುಐ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಪೈಕಿ, ಜಾಗತಿಕ ತಾಪಮಾನ ಏರಿಕೆ, ಕೊವಿಡ್ 19, ಹಣದುಬ್ಬರ, ಎಐ, ನಿರುದ್ಯೋಗ ಹಾಗೂ ಯುದ್ಧಗಳ ಬಗ್ಗೆ ಸಿನಿಮಾದಲ್ಲಿ ಹೇಳುವ ಕೆಲಸ ಆಗಲಿದೆ.

‘ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ’; ‘ಯುಐ’ನಲ್ಲಿ 2040ರ ಕಥೆ ಹೇಳಿದ ಉಪೇಂದ್ರ
ಯುಐ
Follow us on

ಉಪೇಂದ್ರ ಅವರು ‘ಯುಐ’ ಚಿತ್ರವನ್ನು ನಿರ್ದೇಶನ ಮಾಡಿ ಪ್ರೇಕ್ಷಕರ ಎದುರು ಇಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಇದೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಬಹುದು? ಈ ಚಿತ್ರದ ಕಥೆ ಏನು ಎನ್ನುವ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ‘ಯುಐ’ ಸಿನಿಮಾದ ‘ವಾರ್ನರ್​’ (ಎಚ್ಚರಿಕೆ) ವಿಡಿಯೋ ರಿಲೀಸ್ ಮಾಡಲಾಗಿದೆ. ಇದರಲ್ಲಿ ಸಿನಿಮಾದ ಝಲಕ್ ತೋರಿಸಲಾಗಿದೆ.

ವಿಶ್ವದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳ ಪೈಕಿ ಕೆಲವು ಪ್ರಮುಖ ವಿಚಾರಗಳನ್ನು ‘ಯುಐ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಪೈಕಿ, ಜಾಗತಿಕ ತಾಪಮಾನ ಏರಿಕೆ, ಕೊವಿಡ್ 19, ಹಣದುಬ್ಬರ, ಎಐ, ನಿರುದ್ಯೋಗ ಹಾಗೂ ಯುದ್ಧಗಳ ಬಗ್ಗೆ ಸಿನಿಮಾದಲ್ಲಿ ಹೇಳುವ ಕೆಲಸ ಆಗಲಿದೆ. ಈಗ ರಿಲೀಸ್ ಆಗಿರುವ ವಿಡಿಯೋದಲ್ಲಿ ಈ ಸಿನಿಮಾದ ಕಥೆ 2040ರಲ್ಲಿ ಆರಂಭ ಆಗುವ ರೀತಿಯಲ್ಲಿ ತೋರಿಸಲಾಗಿದೆ.

ಒಂದು ಬಾಳೆ ಹಣ್ಣಿಗಾಗಿ ಕಿತ್ತಾಟ ನಡೆಯುತ್ತದೆ. ‘ನಂಗೆ ಬಾಳೆ ಹಣ್ಣು’ ಎಂದು ಸಾಕಷ್ಟು ಜನ ಕಿತ್ತಾಟ ನಡೆಸುತ್ತಾ ಇರುತ್ತಾರೆ. ಸುತ್ತಲೂ ನೋಡಿದರೆ ಇಡೀ ಜಗತ್ತು ನಾಶ ಆಗುವ ಹಂತಕ್ಕೆ ಬಂದಿರುತ್ತದೆ. ಜಾತಿ ವಿಚಾರ ಎಂಬುದು ಯಾವ ಹಂತಕ್ಕೆ ಹೋಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ‘ಜಾತಿ ಮುದ್ರೆ ಕಡ್ಡಾಯ’ ಎಂಬುದು ವಾರ್ತೆಯಲ್ಲಿ ಬರುತ್ತಿರುತ್ತದೆ.

ಹೀಗಿರುವಾಗಲೇ ಉಪೇಂದ್ರ ಅವರ ಎಂಟ್ರಿ ಆಗುತ್ತದೆ. ದೊಡ್ಡದಾದ ಕಾರ್​ನಲ್ಲಿ ಉಪೇಂದ್ರ ಆಗಮಿಸುತ್ತಾರೆ. ಆದರೆ, ಉಪೇಂದ್ರ ವಿರುದ್ಧ ಅನೇಕರು ಘೋಷಣೆ ಕೂಗುತ್ತಾರೆ. ಅವರ ಮೇಲೆ ಗುಂಡಿನ ದಾಳಿ ನಡೆಸೋ ಉಪೇಂದ್ರ, ‘ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ’ ಎನ್ನುತ್ತಾರೆ.

ಇದನ್ನೂ ಓದಿ: ಉಪೇಂದ್ರ ಗುರು, ನಾನು ಶಿಷ್ಯ: ಯುಐ, ಮ್ಯಾಕ್ಸ್ ಕ್ಲ್ಯಾಶ್ ಬಗ್ಗೆ ಸುದೀಪ್ ಸ್ಪಷ್ಟನೆ

‘ಯುಐ’ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ ಎಂದು ತಂಡ ಹೇಳಿತ್ತು. ಆದರೆ, ಅದಾದ ಕೆಲವೇ ದಿನಕ್ಕೆ ‘ಮ್ಯಾಕ್ಸ್’ ಸಿನಿಮಾ ಬರುತ್ತಿರುವುದರಿಂದ ಈ ಚಿತ್ರದ ರಿಲೀಸ್ ವಿಳಂಬ ಆಗಲಿದೆಯೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಆದರೆ, ಹಾಗಾಗುತ್ತಿಲ್ಲ. ‘ಯುಐ’ ಅಂದುಕೊಂಡಂತೆ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ.

‘ಯುಐ’ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ರೀಶ್ಮಾ ನಾಣಯ್ಯ, ಇಂದ್ರಜಿತ್ ಲಂಕೇಶ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಜಿ.ಮನೋಹರನ್, ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:47 am, Mon, 2 December 24