‘ಅಮ್ಮನ ಕೊನೆ ಆಸೆ ಈಡೇರಿಸಲಾಗಲಿಲ್ಲ’; ‘ಮ್ಯಾಕ್ಸ್’ ವೇದಿಕೆ ಮೇಲೆ ಸುದೀಪ್ ಭಾವುಕ

‘ಮ್ಯಾಕ್ಸ್’ ಸಿನಿಮಾದ ಶೂಟ್ ಮುಗಿದು ಬಹಳ ಸಮಯ ಕಳೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ವಿಳಂಬ ಆಗಿತ್ತು. ಈ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.

‘ಅಮ್ಮನ ಕೊನೆ ಆಸೆ ಈಡೇರಿಸಲಾಗಲಿಲ್ಲ’; ‘ಮ್ಯಾಕ್ಸ್’ ವೇದಿಕೆ ಮೇಲೆ ಸುದೀಪ್ ಭಾವುಕ
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Dec 02, 2024 | 2:54 PM

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಡಿಸೆಂಬರ್ 25ರಂದು ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ರಿಲಿಸ್​ಗೂ ಮೊದಲು ಸುದೀಪ್ ಹಾಗೂ ತಂಡ ಸುದ್ದಿಗೋಷ್ಠಿ ನಡೆಸಿದೆ. ಈ ಸುದ್ದಿಗೋಷ್ಠಿ ವೇಳೆ ಸುದೀಪ್ ಅವರು ಅಮ್ಮನ ನೆನಪಿಸಿಕೊಂಡಿದ್ದಾರೆ. ಅಮ್ಮನ ಕೊನೆಯ ಆಸೆ ಈಡೇರಿಸಲಾಗಲಿಲ್ಲ ಎಂಬ ಕೊರಗಿನ ಬಗ್ಗೆ ಹೇಳಿಕೊಂಡಿದ್ದಾರೆ.

‘ಮ್ಯಾಕ್ಸ್’ ಸಿನಿಮಾದ ಶೂಟ್ ಮುಗಿದು ಬಹಳ ಸಮಯ ಕಳೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ವಿಳಂಬ ಆಗಿತ್ತು. ಈ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ. ತಾಯಿಗೆ ಮ್ಯಾಕ್ಸ್ ನೋಡುವ ಆಸೆ ಇತ್ತು ಎಂದಿದ್ದಾರೆ ಸುದೀಪ್.

‘ನನ್ನ ತಾಯಿಗೆ ಮ್ಯಾಕ್ಸ್ ನೋಡಬೇಕು ಎನ್ನುವ ಆಸೆ ಇತ್ತು. ಸಿನಿಮಾ ಮುಗ್ದಿದೆ ಹಾಕೋ ಎಂದು ಕೇಳಿದ್ದರು. ನನಗೆ ಆ ಕೊರಗು ಈಗಲೂ ಇದೆ’ ಎಂದಿದ್ದಾರೆ ಸುದೀಪ್. ಈ ಚಿತ್ರದ ಸುದ್ದಿಗೋಷ್ಠಿಯನ್ನು ಅದ್ದೂರಿಯಾಗಿ ಮಾಡುವ ಆಲೋಚನೆ ನಿರ್ಮಾಪಕರಿಗೆ ಇತ್ತು. ಆದರೆ, ಸುದೀಪ್ ಅವರು ಇದಕ್ಕೆ ಸಮ್ಮತಿ ಕೊಡಲಿಲ್ಲ. ‘ನಿರ್ಮಾಪಕರು ದೊಡ್ಡದಾಗಿ ಸುದ್ದಿಗೋಷ್ಠಿ ಮಾಡೋಣ ಎಂದರು. ಆದರೆ ನಾನೇ ಬೇಡ ಎಂದೆ. ಮುಂದಿನ ಬಾರಿ ದೊಡ್ಡದಾಗಿ ಮಾಡಿ ಎಂದೆ. ಸಿನಿಮಾದಲ್ಲಿ ನನ್ನ ತಾಯಿ ಅವರದ್ದೇ ಫಸ್ಟ್ ಕಾರ್ಡ್ ಆಗಿರುತ್ತದೆ. ನಾನು ಹೀಗಾಗುತ್ತದೆ ಎಂದು ಅಂದುಕೊಂಡಿರಲಿಲ್ಲ’ ಎಂದಿದ್ದಾರೆ ಸುದೀಪ್.

ತಾಯಿ ಬದುಕಿದ್ದಾಗ ‘ಮ್ಯಾಕ್ಸ್’ ಚಿತ್ರದ ಕೆಲವು ಚಿಕ್ಕ ಕ್ಲಿಪ್​ಗಳನ್ನು ತೋರಿಸಿದ್ದೇನೆ’ ಎಂದು ಸುದೀಪ್ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ. ಅಕ್ಟೋಬರ್ 20ರಂದು ಸುದೀಪ್ ತಾಯಿ ಸರೋಜಾ ನಿಧನರಾಗಿದ್ದರು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜಯನಗರದ ಅಪೋಲೊ ಆಸ್ಪತ್ರೆಗೆ ಸುದೀಪ್ ಅವರ ತಾಯಿಯನ್ನು ದಾಖಲಿಸಲಾಗಿತ್ತು.

ಇದನ್ನೂ ಓದಿ: ಶೋಭಾ ಕಣ್ಣಿಗೆ ಬಟ್ಟೆ; ಹನುಮಂತ ಫಸ್ಟ್​ ನೈಟ್ ಬೆಡ್​ನ ವಿವರಣೆ ಕೊಟ್ಟ ಪರಿಗೆ ಸುದೀಪ್ ಸುಸ್ತು

ತಾಯಿ ನಿಧನದ ಬಳಿಕ ಸುದೀಪ್ ಅವರು ಡಲ್ ಆಗಿದ್ದರು. ಅವರು ಒಂದು ವಾರ ಬಿಗ್ ಬಾಸ್ ನಿರೂಪಣೆಗೂ ಬ್ರೇಕ್ ಕೊಟ್ಟಿದ್ದರು. ಆ ಬಳಿಕ ಮರಳಿ ಅವರು ಕೆಲಸಕ್ಕೆ ಮರಳಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ವೇದಿಕೆ ಮೇಲೂ ತಾಯಿ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ