‘ಮೇಘನಾ ಮಾತ್ರವಲ್ಲ, ನನ್ನ ಮನಸ್ಸಲ್ಲಿ ಯಾರಿಗೂ ಜಾಗ ಇಲ್ಲ’; ಎರಡನೇ ಮದುವೆ ಬಗ್ಗೆ ವಿಜಯ್ ರಾಘವೇಂದ್ರ ಸ್ಪಷ್ಟ ಮಾತು

ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ನಿಧನದ ಬಳಿಕ ಮರುಮದುವೆ ಸುದ್ದಿಗಳನ್ನು ನಿರಾಕರಿಸಿದ್ದಾರೆ. ಮೇಘನಾ ರಾಜ್ ಅವರೊಂದಿಗಿನ ಅವರ ಸ್ನೇಹವನ್ನು ತಿರುಚಿ ಹಬ್ಬಿಸಲಾದ ಸುಳ್ಳು ಸುದ್ದಿಗಳಿಂದ ಅವರಿಗೆ ಬೇಸರವಾಗಿದೆ. ಈ ಸುದ್ದಿಗಳಿಂದ ಅವರ ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.

‘ಮೇಘನಾ ಮಾತ್ರವಲ್ಲ, ನನ್ನ ಮನಸ್ಸಲ್ಲಿ ಯಾರಿಗೂ ಜಾಗ ಇಲ್ಲ’; ಎರಡನೇ ಮದುವೆ ಬಗ್ಗೆ ವಿಜಯ್ ರಾಘವೇಂದ್ರ ಸ್ಪಷ್ಟ ಮಾತು
ಮೇಘನಾ-ವಿಜಯ್

Updated on: Jul 17, 2025 | 8:56 AM

‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ (Vijay Raghavendra) ಅವರು ಪತ್ನಿಯನ್ನು ಕಳೆದುಕೊಂಡಿದ್ದಾರೆ. ಸ್ಪಂದನಾ ಅವರು 2023ರ ಆಗಸ್ಟ್​ನಲ್ಲಿ ಥೈಲ್ಯಾಂಡ್​ನ ಬ್ಯಾಂಕಾಕ್​ನಲ್ಲಿ ನಿಧನ ಹೊಂದಿದರು. ಇದಾದ ಬಳಿಕ ಅವರ ಎರಡನೇ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಅವರ ಹೆಸರು ಹೆಚ್ಚು ತಳುಕು ಹಾಕಿಕೊಂಡಿದ್ದು ಮೇಘನಾ ರಾಜ್ ಜೊತೆ. ಈ ವಿಚಾರಗಳ ಬಗ್ಗೆ ವಿಜಯ್ ರಾಘವೇಂದ್ರ ಅವರು ಒಲ್ಲದ ಮನಸ್ಸಿನಿಂದ ಸ್ಪಷ್ಟೀಕರಣ ನೀಡಿದ್ದಾರೆ.

ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಮೇಘನಾ ಅವರ ಪತಿ ಚಿರಂಜೀವಿ ಸರ್ಜಾ ಈ ಮೊದಲು ನಿಧನ ಹೊಂದಿದ್ದರು. ಈ ಕಾರಣದಿಂದಲೇ ಕೆಲ ಫ್ಯಾನ್ಸ್ ಇವರಿಬ್ಬರೂ ಮದುವೆ ಆದರೆ ಚೆನ್ನಾಗಿರುತ್ತದೆ ಎಂದುಕೊಂಡರು. ಕೆಲ ಯೂಟ್ಯೂಬರ್​ಗಳು ಕೆಳ ಹಂತಕ್ಕೆ ಹೋಗಿ ಮೇಘನಾ ಹಾಗೂ ವಿಜಯ್ ವಿವಾಹ ಆಗುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಈ ವಿಚಾರ ವಿಜಯ್​ಗೆ ಬೇಸರ ಮೂಡಿಸಿದೆ. ಅವರು ಎರಡನೇ ಮದುವೆ ಆಲೋನೆಯೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ
ನಯನತಾರ ಜೊತೆ ಚಿರಂಜೀವಿ ರೊಮ್ಯಾನ್ಸ್ ; 29 ವರ್ಷ ವಯಸ್ಸಿನ ಅಂತರ
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 
ಪವನ್ ಕಲ್ಯಾಣ್ ಚಿತ್ರ ‘ಹರಿ ಹರ ವೀರ ಮಲ್ಲು’ಗೆ ಶುರುವಾಗಿದೆ ಕರ್ನಾಟಕದ ಭಯ
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

ವಿಜಯ್ ಆಡಿದ ಮಾತು..

‘ಫಸ್ಟ್​ ಡೇ ಫಸ್ಟ್ ಶೋ’ ಯೂಟ್ಯೂಬ್ ಚಾನೆಲ್​ಗೆ ಮಾತನಾಡಿದ ವಿಜಯ್, ‘ಸ್ಪಷ್ಟೀಕರಣ ಕೊಡಲು ಹಿಂಸೆ ಆಗುತ್ತದೆ, ಕೋಪವೂ ಬರುತ್ತದೆ. ಇವರು ಇನ್ನು ಮುಂದೆ ಹೇಗೆ ಇರುತ್ತಾರೋ ಎಂಬ ಕಾಳಜಿಯಲ್ಲಿ ಪ್ರೀತಿ ತೋರಿಸುತ್ತಾರೆ. ಇದು ಸುದ್ದಿ ಆಗಿ ಹಬ್ಬಿದಾಗ ಕುಟುಂಬಗಳ ಮೇಲೆ ಪ್ರಭಾವ ಬೀರುತ್ತದೆ. ನನಗೆ ಮಗ ಇದ್ದಾನೆ. ನಾನು ಎರಡನೇ ಮದುವೆ ಬಗ್ಗೆ ಮಾತನಾಡಲ್ಲ. ಅದರ ಹಿಂದೆ ಯಾವುದೇ ಸತ್ಯ ಇಲ್ಲ. ಮೇಘನಾ ಆಗಲಿ, ಇನ್ಯಾರದ್ದೇ ಹೆಸರು ಇರಲಿ ಅದು ನಡೆಯೋದಿಲ್ಲ. ನನ್ನ ಬದಕಲ್ಲಿ ಇನ್ನೊಬ್ಬರನ್ನು ಬರಮಾಡಿಕೊಳ್ಳೋದು ಆಗದ ಕೆಲಸ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ವೀರಗಾಸೆ ವೇಷದಲ್ಲಿ ವಿಜಯ್ ರಾಘವೇಂದ್ರ: ‘ರುದ್ರಾಭಿಷೇಕಂ’ ಅದ್ಧೂರಿ ಕ್ಲೈಮ್ಯಾಕ್ಸ್

ಸ್ಪಂದನಾ ನಿಧನ ಹೊಂದಿದಾಗ ವಿಜಯ್ ಅವರು ಸಾಕಷ್ಟು ಬೇಸರಗೊಂಡರು. ಆ ಬಳಿಕ ಅವರು ನಿಧಾನವಾಗಿ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇವುಗಳ ಮಧ್ಯೆಯೂ ಈ ರೀತಿಯ ಸುದ್ದಿಗಳು ಬಂದಾಗ ಅವರಿಗೆ ಬೇಸರ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:46 am, Thu, 17 July 25