ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona) ಒಳ್ಳೆಯ ಓಪನಿಂಗ್ ಕಂಡಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರು ಹೇಳಿದ ಮಿಸ್ಟರಿ ಕಥೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ಇಂದು (ಜುಲೈ 29) ಸೇರಿ ಮುಂದಿನ ಮೂರು ದಿನಗಳ ಕಾಲ ಸಿನಿಮಾ ಉತ್ತಮ ಕಲೆಕ್ಷನ್ ಮಾಡಲಿದೆ.
ಜುಲೈ 28ರಂದು ‘ವಿಕ್ರಾಂತ್ ರೋಣ’ ಸಿನಿಮಾ ವಿಶ್ವಾದ್ಯಂತ ನಾನಾ ಭಾಷೆಗಳಲ್ಲಿ ರಿಲೀಸ್ ಆಯಿತು. ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಆದರೆ, ತೆಲುಗು, ತಮಿಳು ಹಾಗೂ ಹಿಂದಿ ಭಾಷಿಕ ಭಾಗದಿಂದಲೂ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಆಗಿದೆ. ಅಮೆರಿಕ, ದುಬೈ ಮೊದಲಾದ ಕಡೆಗಳಲ್ಲೂ ‘ವಿಕ್ರಾಂತ್ ರೋಣ’ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 35 ಕೋಟಿ ರೂಪಾಯಿ ಎಂದು ಚಿತ್ರತಂಡದ ಮೂಲಗಳು ಹೇಳಿವೆ. ಚಿತ್ರದಿಂದ ಅಧಿಕೃತ ಲೆಕ್ಕ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಚಿತ್ರತಂಡದ ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ಅಬ್ಬರಿಸಿದೆ. ಕರ್ನಾಟಕದಲ್ಲಿ ಮೊದಲ ದಿನ 16 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಟಾಲಿವುಡ್ನಲ್ಲಿ 4.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಫಿಲ್ಮ್ಸ್ ಈ ಚಿತ್ರದ ಹಂಚಿಕೆ ಜವಾಬ್ದಾರಿ ತೆಗೆದುಕೊಂಡಿದೆ. ಈ ಕಾರಣಕ್ಕೆ ಉತ್ತರ ಭಾಗದಲ್ಲಿ ಸಿನಿಮಾಗೆ ಸಾಕಷ್ಟು ಮೈಲೇಜ್ ಸಿಕ್ಕಿದೆ. ಬಾಲಿವುಡ್ ಅಂಗಳದಿಂದ ಈ ಚಿತ್ರಕ್ಕೆ 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ವಿಕ್ರಾಂತ್ ರೋಣ ಚಿತ್ರಕ್ಕೆ ಎಲ್ಲೆಲ್ಲಿ ಎಷ್ಟೆಷ್ಟು ರೇಟಿಂಗ್? ಇಲ್ಲಿದೆ ಪೂರ್ಣ ವಿವರ
ಕೇರಳದಲ್ಲಿ ಈ ಚಿತ್ರ 1 ಕೋಟಿ ರೂಪಾಯಿ ಬಾಚಿಕೊಂಡಿದೆ. ತಮಿಳಿನಿಂದ ಈ ಸಿನಿಮಾಗೆ 2.5 ಕೋಟಿ ರೂಪಾಯಿ ಬಂದಿದೆ. ವಿದೇಶದಲ್ಲಿ ‘ವಿಕ್ರಾಂತ್ ರೋಣ’ ಚಿತ್ರ 30 ದೇಶಗಳಲ್ಲಿ ಬಿಡುಗಡೆ ಆಗಿತ್ತು. ಈ 30 ದೇಶಗಳಿಂದ ಸಿನಿಮಾ 7 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುತ್ತವೆ ಚಿತ್ರದ ಮೂಲಗಳು. ಒಟ್ಟಾರೆ ಸಿನಿಮಾದ ಕಲೆಕ್ಷನ್ 35 ಕೋಟಿ ರೂಪಾಯಿ ದಾಟಿದೆ. ಈ ಮೂಲಕ ಸಿನಿಮಾ ಅನೇಕ ದಾಖಲೆ ಬರೆದಿದೆ. ವೀಕೆಂಡ್ನಲ್ಲೂ ಚಿತ್ರ ಹಲವು ದಾಖಲೆ ಬರೆಯುವ ಸಾಧ್ಯತೆ ಇದೆ.
Published On - 2:35 pm, Fri, 29 July 22