ಒಂದೇ ದಿನ ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ; ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ

ಸೆಪ್ಟೆಂಬರ್ 18ರಂದು ಕನ್ನಡ ಚಿತ್ರರಂಗದ ಮೂವರು ದಿಗ್ಗಜ ನಟರಾದ ವಿಷ್ಣುವರ್ಧನ್, ಉಪೇಂದ್ರ ಮತ್ತು ಶ್ರುತಿ ಅವರ ಹುಟ್ಟುಹಬ್ಬ. ವಿಷ್ಣುವರ್ಧನ್ ಅವರಿಗೆ ಸಿಕ್ಕ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ, ಉಪೇಂದ್ರ ಅವರ ಹೊಸ ಚಿತ್ರಗಳ ಘೋಷಣೆ ಈ ಹುಟ್ಟುಹಬ್ಬವನ್ನು ವಿಶೇಷವಾಗಿಸಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಒಂದೇ ದಿನ ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ; ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ
ವಿಷ್ಣು,ಉಪ್ಪಿ, ಶ್ರುತಿ

Updated on: Sep 18, 2025 | 7:11 AM

ಚಿತ್ರರಂಗದ ಸೆಲೆಬ್ರಿಟಿಗಳ ಬರ್ತ್​ಡೇ ಎಂದರೆ ಸಿನಿ ಪ್ರಿಯರಿಗೆ ಅದೇನೋ ಸಂಭ್ರಮ. ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ಗಳನ್ನು ಹಾಕಿ ಸಂಭ್ರಮಿಸುತ್ತಾರೆ. ಹೀಗಿರುವಾಗ ಒಂದೇ ದಿನ ಮೂರು ಸೆಲೆಬ್ರಿಟಿಗಳ ಬರ್ತ್​ಡೇ ಬಂದು ಬಿಟ್ಟರೆ? ಕನ್ನಡ ಚಿತ್ರರಂಗದ ಖ್ಯಾತ ನಾಮರಾದ ವಿಷ್ಣುವರ್ಧನ್ (Vishnuvardhan), ಉಪೇಂದ್ರ ಹಾಗೂ ಶ್ರುತಿ ಅವರ ಜನ್ಮದಿನ ಒಂದೇ ದಿನ ಅನ್ನೋದು ವಿಶೇಷ. ಸೆಪ್ಟೆಂಬರ್ 18ರಂದು ಈ ಮೂರು ಸೆಲೆಬ್ರಿಟಿಗಳಿಗೆ ಜನ್ಮದಿನ. ಈ ವೇಳೆ ಫ್ಯಾನ್ಸ್ ಹಾಗೂ ಚಿತ್ರರಂಗದವರು ಈ ಸೆಲೆಬ್ರಿಟಿಗಳಿಗೆ ಬರ್ತ್​ಡೇ ವಿಶ್ ತಿಳಿಸುತ್ತಾ ಇದ್ದಾರೆ.

ವಿಷ್ಣುವರ್ಧನ್

ವಿಷ್ಣುವರ್ಧನ್ ಅವರು ‘ನಾಗರಹಾವು’ ಸಿನಿಮಾ ಮೂಲಕ ಫೇಮಸ್ ಆದವರು. ಅವರು ಜನಿಸಿದ್ದು 1950ರಲ್ಲಿ. ಅವರು ಇಂದು ಬದುಕಿದ್ದರೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ನಮ್ಮನ್ನು ಅಗಲಿ ಹಲವು ವರ್ಷಗಳು ಕಳೆದಿವೆ. ಈ ಬಾರಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರಿಂದ ಅಭಿಮಾನಿಗಳ ಪಾಲಿಗೆ ಈ ಬರ್ತ್​ಡೇ ವಿಶೇಷ. ಆದರೆ, ಅವರ ಸಮಾಧಿ ಇರೋ ಅಭಿನವ ಸ್ಟುಡಿಯೋಗೆ ಹೋಗಲು ಅವಕಾಶ ಇಲ್ಲ ಎಂಬುದು ಫ್ಯಾನ್ಸ್ ಪಾಲಿಗೆ ಬೇಸರ ಸಂಗತಿ. ಆದರೆ, ಕೆಂಗೇರಿ ಬಳಿ ಹೊಸ ಸ್ಮಾರಕ ನಿರ್ಮಾಣ ಆಗಲಿದ್ದು, ಅದರ ನೀಲನಕ್ಷೆ ಸಿದ್ಧವಾಗಲಿದೆ.

ಉಪೇಂದ್ರ

ಕನ್ನಡದಲ್ಲಿ ಹಲವು ಭಿನ್ನ ಸಿನಿಮಾಗಳನ್ನು ನೀಡಿ ಹೊಸ ರೀತಿಯಲ್ಲಿ ಆಲೋಚಿಸುವಂತೆ ಮಾಡಿದವರು ಉಪೇಂದ್ರ. ಅವರು 57ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ನಿರ್ದೇಶನದ ‘ಶ್’, ‘ಎ’, ‘ಉಪೇಂದ್ರ’, ‘ತರ್ಲೆ ನನ್ಮಗ’ ಸಿನಿಮಾಗಳು ಸಾಕಷ್ಟು ಮೆಚ್ಚುಗೆ ಪಡೆದಿವೆ. ಅವರ ಬರ್ತ್​ಡೇನ ಫ್ಯಾನ್ಸ್​ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾಗಳ ಘೋಷಣೆ ಕೂಡ ಆಗುತ್ತಿದೆ.

ಇದನ್ನೂ ಓದಿ
ಊಟದ ವಿಚಾರದಲ್ಲಿ ಸಖತ್ ಮೂಡಿ ಆಗಿದ್ದ ವಿಷ್ಣುವರ್ಧನ್
‘ಪ್ರಿಯಾಂಕಾ ಗಂಭೀರ ಅಫೇರ್ ಹೊಂದಿದ್ದು ನಿಜ’; ನಿರ್ದೇಶಕನ ದೊಡ್ಡ ಹೇಳಿಕೆ
ಒಟಿಟಿಗೆ ಬಂದರೂ ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಸು ಫ್ರಮ್ ಸೋ’
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಇದನ್ನೂ ಓದಿ: ಆತ್ಮೀಯ ಗೆಳೆಯರಾಗಿದ್ದ ವಿಷ್ಣುವರ್ಧನ್-ರಾಜೇಂದ್ರ ಸಿಂಗ್ ಬಾಬು ದೂರಾಗಿದ್ದೇಕೆ?

ಶ್ರುತಿ

ಕನ್ನಡ ಚಿತ್ರರಂಗದ ಮತ್ತೋರ್ವ ಹಿರಿಯ ನಟಿ ಶ್ರುತಿ ಅವರಿಗೆ ಇಂದು ಹುಟ್ಟುಹಬ್ಬದ. ಅವರು 50ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರ 1990ರಲ್ಲಿ ರಿಲೀಸ್ ಆಯಿತು. ಆಗ  ಪ್ರಿಯದರ್ಶಿನಿ ಎಂದು ಅವರನ್ನು ಕರೆಯಲಾಗುತ್ತಿತ್ತು. ಅದೇ ವರ್ಷ ‘ಶ್ರುತಿ’ ಹೆಸರಿನ ಸಿನಿಮಾ ರಿಲೀಸ್ ಆಯಿತು ಈ ಸಿನಿಮಾದಲ್ಲಿ ಅವರು ಶ್ರುತಿ ಹೆಸರಿನ ಪಾತ್ರ ಮಾಡಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ಚಿತ್ರರಂಗದಲ್ಲಿ ಶ್ರುತಿ ಎಂದೇ ಫೇಮಸ್ ಆದರು. ಈಗ ಅವರು, ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.