ರಿಷಬ್ ಶೆಟ್ಟಿ(Rishab Shetty) ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಚಿತ್ರವನ್ನು ನೋಡಿ ಬಾಲಿವುಡ್ ಮಂದಿ ಕೂಡ ಕೊಂಡಾಡುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾದ ಕ್ರೇಜ್ ಬಾಲಿವುಡ್ ಬೆಲ್ಟ್ನಲ್ಲಿ ಹೆಚ್ಚುತ್ತಲೇ ಇದೆ. ಅನೇಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಹಲವರು ಈ ಚಿತ್ರದ ಬಗ್ಗೆ ಪಾಸಿಟಿವ್ ಮಾತುಗಳನ್ನು ಆಡಿದ್ದಾರೆ. ಕಂಗನಾ ರಣಾವತ್ ಸೇರಿ ಅನೇಕರು ಈ ಚಿತ್ರಕ್ಕೆ ಭೇಷ್ ಎಂದಿದ್ದಾರೆ. ಈ ಬಾರಿ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಸರದಿ. ಅವರು ಈ ಚಿತ್ರವನ್ನು ನೋಡಿ ಥ್ರಿಲ್ ಆಗಿದ್ದಾರೆ. ಅವರು ತಮ್ಮ ವಿಮರ್ಶೆಯನ್ನು ತಿಳಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಈ ವರ್ಷ ತೆರೆಗೆ ಬಂತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ವಿವೇಕ್ ಅಗ್ನಿಹೋತ್ರಿ. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರದಿಂದ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರು ‘ಕಾಂತಾರ’ ಚಿತ್ರವನ್ನು ನೋಡಿ ಹೊಗಳಿದ್ದು, ರಿಷಬ್ ಶೆಟ್ಟಿಯ ಬೆನ್ನು ತಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
‘ನಾನು ಕಾಂತಾರ ಸಿನಿಮಾ ನೋಡಿ ಬಂದೆ. ಇದೊಂದು ಅದ್ಭುತ ಅನುಭವ. ಈ ರೀತಿಯ ಚಿತ್ರವನ್ನು ನೀವು ನೋಡಿರುವುದಿಲ್ಲ. ನಾನಂತೂ ಈ ರೀತಿಯ ಸಿನಿಮಾವನ್ನು ನೋಡಿರಲಿಲ್ಲ. ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್. ರಿಷಬ್ ನೀವು ಅದ್ಭುತ ಕೆಲಸ ಮಾಡಿದ್ದೀರಿ. ನಾನು ನಿಮಗೆ ಕರೆ ಮಾಡಿ ಮಾತನಾಡುತ್ತೇನೆ. ನನ್ನ ಅನುಭವವನ್ನು ಹಂಚಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಕಲೆ, ಜಾನಪದ ವಿಚಾರಗಳು ಸಿನಿಮಾದಲ್ಲಿ ಅಡಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ನಿಮ್ಮ ಬಳಿ ಇರುವುದು ಅದೆಂಥಹ ಎನರ್ಜಿ. ನಾನು ಈ ವರೆಗೆ ನೋಡಿಲ್ಲ. ರಿಷಬ್ ಶೆಟ್ಟಿ ಮಾಡಿದ ಮಾಸ್ಟರ್ಪೀಸ್. ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ಅವರು ಹೇಳಿದ್ದಾರೆ.
Just finished watching @shetty_rishab ’s masterpiece #Kantara. In one word it’s just WOW! Amazing experience. Watch it as soon as possible. pic.twitter.com/ArftfvgEPq
— Vivek Ranjan Agnihotri (@vivekagnihotri) October 22, 2022
ಇದನ್ನೂ ಓದಿ: Kantara: ಕುಟುಂಬ ಸಮೇತ ‘ಕಾಂತಾರ’ ನೋಡಲಿರುವ ವೀರೇಂದ್ರ ಹೆಗ್ಗಡೆ; ಮುಖ್ಯವಾಗಲಿದೆ ಇವರ ಅಭಿಪ್ರಾಯ
This is a golden period for Indian cinema. A revolution is taking place. Old establishment is being destroyed. A new, fresh, rooted cinema is evolving. New stars are the storytellers. Please support and encourage this revolution. pic.twitter.com/2ufYlbBhBH
— Vivek Ranjan Agnihotri (@vivekagnihotri) October 22, 2022
ನಂತರ ಮತ್ತೊಂದು ಟ್ವೀಟ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ಹಾಗೂ ‘ಕಾಂತಾರ’ ಚಿತ್ರದ ಪೋಸ್ಟರ್ ಅನ್ನು ಜೋಡಿಸಿ ಟ್ವೀಟ್ ಮಾಡಿದ್ದಾರೆ. ಈ ಫೋಟೋಗೆ ‘ಭಾರತ ಚಿತ್ರರಂಗಕ್ಕೆ ಬಂಗಾರದ ಯುಗ. ಕ್ರಾಂತಿ ಆಗುತ್ತಿದೆ. ಹಳೆಯ ಎಸ್ಟಾಬ್ಲಿಶ್ಮೆಂಟ್ಗಳು ನಾಶವಾಗುತ್ತಿದೆ. ಹೊಸ ಮಾದರಿಯ ಸಿನಿಮಾಗಳು ಬರುತ್ತಿವೆ. ಈ ಕ್ರಾಂತಿಯನ್ನು ಬೆಂಬಲಿಸಿ’ ಎಂದು ಅವರು ಕೋರಿದ್ದಾರೆ.
Published On - 2:17 pm, Sun, 23 October 22