ರಾಜ್​ಕುಮಾರ್​ಗೆ ಗಾಜನೂರಿನ ಬಗ್ಗೆ ಪ್ರೀತಿ ಮೂಡಲು ಕಾರಣ ಆಗಿದ್ದು ಆ ಒಂದು ಅಂಶ

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದುವುದಕ್ಕೂ ಮೊದಲು ‘ಗಂಧದಗುಡಿ’ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದರು. ಇದರಲ್ಲಿ ಅವರು ಕಾಣಿಸಿಕೊಂಡಿದ್ದರು ಕೂಡ. ಇದರ ಶೂಟಿಂಗ್ ಗಾಜನೂರಿನಲ್ಲೂ ನಡೆದಿತ್ತು. ಈ ವೇಳೆ ಗಾಜನೂರಿನ ವಿಶೇಷತೆಗಳನ್ನು ಪುನೀತ್ ಅವರು ವಿವರಿಸಿದ್ದರು.

ರಾಜ್​ಕುಮಾರ್​ಗೆ ಗಾಜನೂರಿನ ಬಗ್ಗೆ ಪ್ರೀತಿ ಮೂಡಲು ಕಾರಣ ಆಗಿದ್ದು ಆ ಒಂದು ಅಂಶ
ಗಾಜನೂರಿನ ರಾಜ್​ಕುಮಾರ್ ಮನೆ
Follow us
ರಾಜೇಶ್ ದುಗ್ಗುಮನೆ
|

Updated on: Aug 04, 2024 | 9:50 AM

ಅದು 2000ನೇ ಇಸ್ವಿಯ ಜುಲೈ 30. ವರನಟ ಡಾ. ರಾಜ್​ಕುಮಾರ್ ಅವರು ಗಾಜನೂರಿನಲ್ಲಿ ಇದ್ದರು. ಅದು ಅವರ ಹುಟ್ಟೂರು. ಅತಿಯಾಗಿ ಪ್ರೀತಿಸಿದ ಊರು. ಅಲ್ಲಿಯೇ ಅವರು ವೀರಪ್ಪನ್ ಅವರಿಂದ ಅಪಹರಣಕ್ಕೆ ಒಳಗಾದರು. 10-12 ಮಂದಿ ಅವರನ್ನು ಕಿಡ್ನಾಪ್ ಮಾಡಿದರು. ತಿಥಿ ಪ್ರಕಾರ ಭೀಮನ ಅಮವಾಸ್ಯೆಯಂದೇ (ಇಂದು ಆಗಸ್ಟ್ 4 ಭೀಮನ ಅಮವಾಸ್ಯೆ) ಅವರು ಅಪಹರಣಕ್ಕೆ ಒಳಗಾಗಿದ್ದರು. ಈ ಘಟನೆ ನಡೆದು 24 ವರ್ಷಗಳು ಪೂರ್ಣಗೊಂಡಿವೆ. ರಾಜ್​ಕುಮಾರ್ ಅವರಿಗೆ ಗಾಜನೂರು ಯಾಕೆ ಅಷ್ಟು ವಿಶೇಷವಾಗಿತ್ತು ಎಂಬುದನ್ನು ಪುನೀತ್ ಹೇಳಿಕೊಂಡಿದ್ದರು.

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದುವುದಕ್ಕೂ ಮೊದಲು ‘ಗಂಧದಗುಡಿ’ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದರು. ಇದರಲ್ಲಿ ಅವರು ಕಾಣಿಸಿಕೊಂಡಿದ್ದರು ಕೂಡ. ಇದರ ಶೂಟಿಂಗ್ ಗಾಜನೂರಿನಲ್ಲೂ ನಡೆದಿತ್ತು. ಈ ವೇಳೆ ಗಾಜನೂರಿನ ವಿಶೇಷತೆಗಳನ್ನು ಪುನೀತ್ ಅವರು ವಿವರಿಸಿದ್ದರು. ರಾಜ್​ಕುಮಾರ್​ಗೆ ಪ್ರಕೃತಿ ಪರಿಚಯ ಆದ ಜಾಗ ಗಾಜನೂರು. ಈ ಕಾರಣಕ್ಕೆ ಅವರು ಈ ಊರನ್ನು ಸಾಕಷ್ಟು ಇಷ್ಟಪಡುತ್ತಿದ್ದರಂತೆ.

‘ತಂದೆ ಗಾಜನೂರು, ತಾಯಿ ಸಾಲಿಗ್ರಾಮದವರು. ಇಬ್ಬರೂ ಬಂದಿದ್ದು ರೈತಾಪಿ ಹಿನ್ನೆಲೆಯಿಂದ. ಅವರು ಬೆಳೆದಿದ್ದು ಅದೇ ರೀತಿ ಇತ್ತು. ಊರು ಎಂದರೆ ಅಪ್ಪಾಜಿಗೆ ಸಖತ್ ಇಷ್ಟ. ಪ್ರತಿ ವರ್ಷ ನಮ್ಮನ್ನು ಇಲ್ಲಿ 2 ತಿಂಗಳು ಇರಿಸುತ್ತಿದ್ದರು. ಆ ದಿನಗಳು ತುಂಬಾ ಚೆನ್ನಾಗಿ ಇರುತ್ತಿತ್ತು. ನಮಗೆ ಅದು ಪಾಠ ಆಗಿದೆ. ನಮಗೆ ಸಾಕಷ್ಟು ಪ್ರೀತಿ ಕೊಟ್ಟ ಊರು ಇದು’ ಎಂದಿದ್ದರು ಪುನೀತ್.

ಗಾಜನೂರಿಗೆ ಬಂದಾಗ ರಾಜ್​ಕುಮಾರ್ ಯಾವಾಗಲೂ ಭೇಟಿ ಕೊಡುತ್ತಾ ಇದ್ದಿದ್ದು ಅಲ್ಲಿರೋ ಆಲದ ಮರಕ್ಕೆ. ಅವರು ಮರದ ಕೆಳೆಗೆ ಬಂದು ಕೂರುವುದನ್ನು ಇಷ್ಟಪಡುತ್ತಿದ್ದರು. ‘250 ವರ್ಷ ಹಿಂದಿನ ಮರ ಇದು. ತಂದೆಯವರ ಅತೀ ಪ್ರೀತಿಯ ಮರ. ಬಂದಾಗ ಅರ್ಧ ಮುಕ್ಕಾಲು ಗಂಟೆ ಧ್ಯಾನ ಮಾಡಿ ಹೋಗುತ್ತಿದ್ದರು. ಊಟ ತರಿಸಿಕೊಟ್ಟರೆ ಇಲ್ಲೇ ಮಾಡುತ್ತಿದ್ದರು’ ಎಂದಿದ್ದರು ಪುನೀತ್.

ಇದನ್ನೂ ಓದಿ: ‘ನಿಮ್ಮಲ್ಲಿ ಸತ್ಯ ಇದೆ, ಅದಕ್ಕೆ ನಾನು ಬದುಕಿದೆ’; ‘ಗಂಧದಗುಡಿ’ ಫೈರಿಂಗ್ ಬಗ್ಗೆ ರಾಜ್​ಕುಮಾರ್ ಹೀಗೆ ಹೇಳಿದ್ದರು

ರಾಜ್​ಕುಮಾರ್ ಜನಿಸಿದ ಮನೆ ಈಗಲೂ ಗಾಜನೂರಿನಲ್ಲಿ ಹಾಗೆಯೇ ಇದೆ. ಗಾಜನೂರು ಎಂದರೆ ರಾಜ್​ಕುಮಾರ್​ಗೆ ತುಂಬಾ ಪ್ರೀತಿ. ಹುಟ್ಟಿದ ಊರು ಎಂಬುದು ಒಂದು ಕಾರಣವಾದರೆ ಅಲ್ಲಿಯವರು ಮಾಡುತ್ತಿದ್ದ ಕೃಷಿ ಹಾಗೂ ಅಲ್ಲಿನ ಪ್ರಕೃತಿ ರಾಜ್​ಕುಮಾರ್ ಅವರನ್ನು ಅತಿಯಾಗಿ ಆಕರ್ಷಿಸಿತ್ತು.

ಬೇಸರದ ವಿಚಾರ ಎಂದರೆ ರಾಜ್​ಕುಮಾರ್ ಕಿಡ್ನ್ಯಾಪ್ ಆಗಿದ್ದೂ ಇದೇ ಊರಿನಿಂದ. ಅವರನ್ನು ಗಾಜನೂರಿನಿಂದಲೇ ವೀರಪ್ಪನ್ ಅಪಹರಣ ಮಾಡಿದರು. 100ಕ್ಕೂ ಹೆಚ್ಚು ದಿನ ರಾಜ್​ಕುಮಾರ್ ಕಾಡಲ್ಲಿ ಕಳೆದರು ಎಂದರೆ ಅದಕ್ಕೆ ಕಾರಣ ಆಗಿದ್ದು ಕಾಡಿನ ಮೇಲಿನ ಪ್ರೀತಿ ಎಂದಿದ್ದರು ಪುನೀತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.