‘ಉರಿ’ ನಿರ್ದೇಶಕನ ಆಫರ್ ರಿಜೆಕ್ಟ್ ಮಾಡಿದ ಯಶ್? ಸ್ಟಾರ್ ಹೀರೋ ಸಿಗದೆ ನಿಂತೋಯ್ತು ಸಿನಿಮಾ
ಯಶ್ ಹೆಸರು ಆದಿತ್ಯ ಧಾರ್ ಜೊತೆ ಸೇರಿಕೊಂಡಿದೆ. ‘ಇಮ್ಮಾರ್ಟಲ್ ಅಶ್ವತ್ಥಾಮ’ ಸೈನ್ಸ್ ಫಿಕ್ಷನ್ ಸಿನಿಮಾ ಆಗಿದ್ದು, ಯಶ್ ಕಾಲ್ಶೀಟ್ ಪಡೆಯಲು ಆದಿತ್ಯ ಧಾರ್ ವಿಫಲರಾಗಿದ್ದಾರೆ.
ಆದಿತ್ಯ ಧಾರ್ ಅವರು ‘ಇಮ್ಮಾರ್ಟಲ್ ಅಶ್ವತ್ಥಾಮ್’ ಸಿನಿಮಾ (Immortal Ashwatthama) ನಿರ್ದೇಶನ ಮಾಡಬೇಕಿತ್ತು. ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಹಂತದಲ್ಲೇ 30 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ವರದಿ ಆಗಿದೆ. ಈ ಮಧ್ಯೆ ಸಿನಿಮಾ ಹೀರೋಗಳ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ. ಈ ಚಿತ್ರವನ್ನು ಯಶ್ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ, ಅವರು ಸಿನಿಮಾ ಆಫರ್ನ ರಿಜೆಕ್ಟ್ ಮಾಡಿದರು ಎಂದು ವರದಿ ಆಗಿದೆ. ಇದು ಸೂಪರ್ ಹೀರೋ ಕಾನ್ಸೆಪ್ಟ್ನಲ್ಲಿ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಯಶ್ (Yash) ಅವರು ಸಿನಿಮಾ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಯಾವುದೇ ದೊಡ್ಡ ಹೀರೋ ಸಿಗದೆ ಸಿನಿಮಾ ನಿಂತೇ ಹೋಗಿದೆ.
ಯಶ್ ಅವರ 19ನೇ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ದೊಡ್ಡದೊಡ್ಡ ನಿರ್ದೇಶಕರ ಹೆಸರು ಯಶ್ ಜೊತೆ ತಳುಕು ಹಾಕಿಕೊಂಡಿದೆ. ಆದರೆ, ಯಾವ ವಿಚಾರವೂ ಅಧಿಕೃತವಾಗಿಲ್ಲ. ಈಗ ಯಶ್ ಹೆಸರು ಆದಿತ್ಯ ಧಾರ್ ಜೊತೆ ಸೇರಿಕೊಂಡಿದೆ. ‘ಇಮ್ಮಾರ್ಟಲ್ ಅಶ್ವತ್ಥಾಮ’ ಸೈನ್ಸ್ ಫಿಕ್ಷನ್ ಸಿನಿಮಾ ಆಗಿದ್ದು, ಯಶ್ ಕಾಲ್ಶೀಟ್ ಪಡೆಯಲು ಆದಿತ್ಯ ಧಾರ್ ವಿಫಲರಾಗಿದ್ದಾರೆ.
ಪಾತ್ರದ ಆಯ್ಕೆ ಹಾಗೂ ಇತರ ಕೆಲಸಕ್ಕಾಗಿ ಈಗಾಗಲೇ 30 ಕೋಟಿ ರೂಪಾಯಿ ಖರ್ಚಾಗಿದೆ. ಮೊದಲಿದ್ದ ನಿರ್ಮಾಪಕರು ಹಿಂದೆ ಸರಿದಿರುವುದರಿಂದ ಜಿಯೋ ಸ್ಟುಡಿಯೋಸ್ ಈ ಚಿತ್ರವನ್ನು ಕೈಗೆತ್ತಿಕೊಂಡಿತ್ತು. ಇದರ ಜೊತೆ ಜೊತೆಗೆ ಹೀರೋ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿತ್ತು. ವಿಕ್ಕಿ ಕೌಶಲ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಆದಿತ್ಯ ಧಾರ್ ಆಲೋಚನೆ ಆಗಿತ್ತು. ಆದರೆ, ನಿರ್ಮಾಣ ಸಂಸ್ಥೆ ಇದಕ್ಕೆ ಒಪ್ಪುತ್ತಿಲ್ಲ.
‘ಇಮ್ಮಾರ್ಟಲ್ ಅಶ್ವತ್ಥಾಮ್ ಬಿಗ್ ಬಜೆಟ್ ಸಿನಿಮಾ. ವಿಕ್ಕಿ ಕೌಶಲ್ಗೆ ದೊಡ್ಡ ಸ್ಟಾರ್ಡಂ ಇಲ್ಲ. ಹೀಗಾಗಿ, ನಷ್ಟ ಉಂಟಾದರೂ ಆಗಬಹುದು ಎಂಬುದು ನಿರ್ಮಾಣ ಸಂಸ್ಥೆಯ ಆಲೋಚನೆ. ಹೀಗಾಗಿ, ಆದಿತ್ಯ ಧಾರ್ ಅವರು ಜೂ.ಎನ್ಟಿಆರ್ ಅವರನ್ನು ಭೇಟಿ ಮಾಡಿದರು. ಅವರು ನೋ ಎಂದ ಬಳಿಕ ಯಶ್ ಬಳಿ ತೆರಳಿದರು. ಅವರೂ ನೋ ಎಂದರು. ರಣವೀರ್ ಸಿಂಗ್ ಅವರನ್ನು ಅಪ್ರೋಚ್ ಮಾಡಲಾಯಿತಾದರೂ ಅವರು ಇದರಲ್ಲಿ ನಟಿಸಲು ನಿರಾಕರಿಸಿದರು.
ಇದನ್ನೂ ಓದಿ: Alia Bhatt: ರಣಬೀರ್ ಬಿಟ್ಟು ರಣವೀರ್ ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ನಟಿ ಆಲಿಯಾ ಭಟ್
ಈ ಎಲ್ಲಾ ಕಾರಣಕ್ಕೆ ಜಿಯೋ ಸ್ಟುಡಿಯೋಸ್ ಸಿನಿಮಾನ ಕೈಬಿಡಲು ಆಲೋಚಿಸಿದೆ. ಈ ಚಿತ್ರದ ಬಜೆಟ್ 350 ಕೋಟಿ ರೂಪಾಯಿ ಮೀರಲಿದೆ. ಸಾಮಾನ್ಯ ಹೀರೋನ ಹಾಕಿಕೊಂಡು ದೊಡ್ಡ ನಷ್ಟ ಉಂಟು ಮಾಡಿಕೊಳ್ಳುವ ಬದಲು ಸಿನಿಮಾನ ಈಗಲೇ ಕೈಬಿಡೋದು ಒಳ್ಳೆಯದು ಎನ್ನುವ ನಿರ್ಧಾರಕ್ಕೆ ಜಿಯೋ ಸ್ಟುಡಿಯೋಸ್ ಬಂದಿದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ