ಯಶ್-ಸುದೀಪ್ ಬಿಗಿದಪ್ಪುಗೆ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸ್ಯಾಂಡಲ್​ವುಡ್

|

Updated on: Dec 24, 2024 | 8:56 AM

ಯಶ್ ಮತ್ತು ಸುದೀಪ್ ಅವರು ಉಪೇಂದ್ರ ಅವರ ‘UI’ ಸಿನಿಮಾದ ಸೆಲೆಬ್ರಿಟಿ ಶೋದಲ್ಲಿ ಭಾಗವಹಿಸಿದ್ದರು. ಇಬ್ಬರೂ ಪರಸ್ಪರ ತಬ್ಬಿಕೊಂಡು ಶುಭಾಶಯ ಹೇಳಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಕನ್ನಡ ಚಿತ್ರರಂಗದ ಏಕತೆಯ ಸಂಕೇತವೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯು ಅಭಿಮಾನಿಗಳಲ್ಲಿ ಸಂತೋಷವನ್ನು ತಂದಿದೆ.

ಯಶ್-ಸುದೀಪ್ ಬಿಗಿದಪ್ಪುಗೆ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸ್ಯಾಂಡಲ್​ವುಡ್
ಯಶ್-ಸುದೀಪ್
Follow us on

ಯಶ್ ಹಾಗೂ ಸುದೀಪ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಇಬ್ಬರಿಗೂ ಪರಭಾಷೆಯಲ್ಲಿ ಬೇಡಿಕೆ ಇದೆ. ಆದಾಗ್ಯೂ ಕನ್ನಡ ಸಿನಿಮಾಗಳನ್ನು ಬೆಳೆಸುವ ಕೆಲಸ ಇವರಿಂದ ಆಗುತ್ತಿದೆ. ಇವರು ಮುಖಾಮುಖಿ ಆಗಿದ್ದು ತುಂಬಾನೇ ಕಡಿಮೆ. ಈಗ ಅಂಥದ್ದೊಂದು ಅಪರೂಪದ ಘಟನೆಗೆ ಸ್ಯಾಂಡಲ್​ವುಡ್ ಸಾಕ್ಷಿ ಆಯಿತು. ಇಬ್ಬರೂ ಪರಸ್ಪರ ತಬ್ಬಿಕೊಂಡು ಶುಭಾಶಯ ಹೇಳಿಕೊಂಡರು. ಈ ಅಪರೂಪದ ಫೋಟೋ ವೈರಲ್ ಆಗಿದೆ.

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಸದ್ಯ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಸೋಮವಾರ (ಡಿಸೆಂಬರ್ 24) ಚಿತ್ರದ ಸೆಲೆಬ್ರಿಟಿ ಶೋ ಬೆಂಗಳೂರಿನ ಒರಾಯನ್ ಮಾಲ್​ನ ಪಿವಿಆರ್​ನಲ್ಲಿ ನಡೆದಿದೆ. ಹಾಗಂತ ಇದು ಸಾಮಾನ್ಯ ಸೆಲೆಬ್ರಿಟಿ ಶೋ ಆಗಿರಲಿಲ್ಲ. ಇಲ್ಲಿ ಬಂದವರೆಲ್ಲರೂ ದಿಗ್ಗಜರೇ ಆಗಿದ್ದರು. ಯಶ್, ಸುದೀಪ್ ಸೇರಿದಂತೆ ಅನೇಕರು ಸಿನಿಮಾ ವೀಕ್ಷಿಸಿದ್ದಾರೆ.

ಈ ಸೆಲೆಬ್ರಿಟಿ ಶೋ ವೇಳೆ ಸುದೀಪ್ ಹಾಗೂ ಯಶ್ ಪರಸ್ಪರ ತಬ್ಬಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಇಬ್ಬರು ಪರಸ್ಪರ ಮಾತನಾಡುತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿದೆ.

ಯಶ್ ಹಾಗೂ ಸುದೀಪ್ ಇಬ್ಬರೂ ಉಪೇಂದ್ರ ಅವರ ದೊಡ್ಡ ಅಭಿಮಾನಿಗಳು. ಉಪೇಂದ್ರ ಸಿನಿಮಾಗಳನ್ನು ನೋಡಿ ಬೆಳೆದವರು. ಇವರಿಗೆ ‘ಯುಐ’ ಚಿತ್ರವನ್ನು ಒಟ್ಟಾಗಿ ವೀಕ್ಷಿಸಿಸುವ ಅವಕಾಶ ಸಿಕ್ಕಿದೆ. ಕನ್ನಡ ಚಿತ್ರರಂಗ ಮತ್ತೆ ಒಂದಾಗುತ್ತಿದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ‘ಬೇಕು ಅಂತ ಜಗಳ ಮಾಡ್ತಾರೆ, ಜೋಡಿ ಮಾಡ್ಕೊಂಡು ಹೈಲೈಟ್ ಆಗ್ತಾರೆ’; ಬಿಗ್ ಬಾಸ್ ಹೊಸ ಸೀಸನ್​ಗಳ ಬಗ್ಗೆ ಸುದೀಪ್ ಬೇಸರ

ಈ ಮೊದಲು ಸುದೀಪ್ ಅವರು ಯಶ್ ಬಗ್ಗೆ ಕೇಳಿದ್ದಾಗ ಮೆಚ್ಚುಗೆಯ ಮಾತನ್ನು ಆಡಿದ್ದರು. ಯಶ್ ಅವರು ಸಿನಿಮಾ ರಂಗ ಬಿಟ್ಟು ಮತ್ಯಾವರಂಗ ಆಯ್ಕೆ ಮಾಡಿಕೊಂಡರೆ ಉತ್ತಮ ಎಂದು ಸುದೀಪ್​ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ಯಶ್ ಅವರು ಚಿತ್ರರಂಗದಲ್ಲೇ ಇರಬೇಕು ಎಂದಿದ್ದರು. ಅವರು ಯಾವದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಕ್ರಾಂತಿ ತರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.