ಯಶ್ ಯಾವಾಗ ಬರ್ತಾರೆ? ಖುದ್ದು ಯಶ್ ಕೊಟ್ಟಿದ್ದಾರೆ ಉತ್ತರ

Toxic movie: ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆ ಎರಡು ಬಾರಿ ಮುಂದೂಡಲ್ಪಟ್ಟಿದೆ. ‘ಟಾಕ್ಸಿಕ್’ ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಖಾತ್ರಿಯೂ ಇಲ್ಲ. ಹೊಸ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಈಗ ಯಶ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಇದೀಗ ಇದೇ ವಿಷಯವಾಗಿ ಜಾಹೀರಾತೊಂದು ಬಿಡುಗಡೆ ಆಗಿದ್ದು, ಎಲ್ಲರೂ ‘ಯಶ್ ಎಲ್ಲಿ?’ ‘ಯಶ್ ಯಾವಾಗ ಬರ್ತಾರೆ’ ಎಂದು ಹುಡುಕಾಡುತ್ತಿದ್ದಾರೆ. ಅದಕ್ಕೆ ಸ್ವತಃ ಯಶ್ ಉತ್ತರ ಕೊಟ್ಟಿದ್ದಾರೆ.

ಯಶ್ ಯಾವಾಗ ಬರ್ತಾರೆ? ಖುದ್ದು ಯಶ್ ಕೊಟ್ಟಿದ್ದಾರೆ ಉತ್ತರ
Yash Movie

Updated on: May 27, 2026 | 1:20 PM

ಯಶ್ (Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆ ಎರಡು ಬಾರಿ ಮುಂದೂಡಲ್ಪಟ್ಟಿದೆ. ‘ಟಾಕ್ಸಿಕ್’ ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಖಾತ್ರಿಯೂ ಇಲ್ಲ. ಹೊಸ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಈಗ ಯಶ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಇದೀಗ ಇದೇ ವಿಷಯವಾಗಿ ಜಾಹೀರಾತೊಂದು ಬಿಡುಗಡೆ ಆಗಿದ್ದು, ಎಲ್ಲರೂ ‘ಯಶ್ ಎಲ್ಲಿ?’ ‘ಯಶ್ ಯಾವಾಗ ಬರ್ತಾರೆ’ ಎಂದು ಹುಡುಕಾಡುತ್ತಿದ್ದಾರೆ. ಅದಕ್ಕೆ ಸ್ವತಃ ಯಶ್ ಉತ್ತರ ಕೊಟ್ಟಿದ್ದಾರೆ.

ಇದೀಗ ‘ಟಾಕ್ಸಿಕ್’ಗೆ ಸಂಬಂಧಿಸಿದ ಜಾಹೀರಾತೊಂದು ಬಿಡುಗಡೆ ಆಗಿದ್ದು, ಜಾಹೀರಾತಿನಲ್ಲಿ ತೋರಿಸಿರುವಂತೆ ಯುವಕರು ‘ಯಶ್ ಯಾವಾಗ ಬರ್ತಾರೆ?’, ‘ಟಾಕ್ಸಿಕ್ ಯಾವಾಗ ಬರುತ್ತೆ’ ಎಂದು ಕೇಳುತ್ತಿದ್ದಾರೆ. ನ್ಯೂಸ್ ಚಾನೆಲ್​​ಗಳಲ್ಲೂ ‘ಯಶ್ ಯಾವಾಗ ಬರ್ತಾರೆ’ ಎಂಬುದೇ ಪ್ರಶ್ನೆ. ಇದಕ್ಕೆ ಖುದ್ದು ಯಶ್ ಉತ್ತರ ಕೊಟ್ಟಿದ್ದು, ‘ಟಾಕ್ಸಿಕ್’ ಬರುತ್ತೆ, ಅದೂ ಧಮಾಕ ಮಾಡಿಕೊಂಡು ಬರುತ್ತೆ, ಆದರೆ ಸ್ವಲ್ಪ ಕಾಯಿರಿ’ ಎಂದಿದ್ದಾರೆ. ಆದರೆ ಯಶ್ ಮಾತ್ರ ನಾಳೆಯೇ ಬರುತ್ತಿದ್ದಾರೆ. ಬಿಜಿಎಂಐ (ಬ್ಯಾಟಲ್​​ಗ್ರೌಂಡ್ ಮೊಬೈಲ್ ಇಂಡಿಯಾ) ಮೂಲಕ.

‘ಟಾಕ್ಸಿಕ್’ ಇದೀಗ ಭಾರತದ ಬಲು ಜನಪ್ರಿಯ ಆನ್​​ಲೈನ್ ಗೇಮ್ ಆಗಿರುವ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಆಗಿದ್ದು, ಬಿಜಿಎಂಐನ ‘ಟಾಕ್ಸಿಕ್’ ವರ್ಷನ್ ಇದೀಗ ಡೌನ್​​ಲೊಡ್​​ಗೆ ಲಭ್ಯವಿದೆ. ಈ ಹೊಸ ಗೇಮ್​​ನಲ್ಲಿ ‘ಟಾಕ್ಸಿಕ್’ ಸಿನಿಮಾನಲ್ಲಿ ಬಳಸಿದ ಆಯುಧಗಳು ಸಿಗಲಿವೆ. ಜೊತೆಗೆ ಯಶ್ ಅವರ ಧ್ವನಿಯೂ ಸಹ ಗೇಮ್​​ನಲ್ಲಿ ಇರಲಿದೆ. ‘ಟಾಕ್ಸಿಕ್’ ಚಲನಚಿತ್ರದ ಥೀಮ್ ಆಧಾರಿತ ವಿಶೇಷ ಸ್ಕಿನ್‌ಗಳು ಮತ್ತು ಔಟ್‌ಫಿಟ್‌ಗಳು ಲಭ್ಯವಿರಲಿವೆ. ಯಶ್ ಅವರ ವಿಶಿಷ್ಟ ಶೈಲಿಯ ಹೇರ್‌ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಗೇಮ್‌ನಲ್ಲಿ ಅಳವಡಿಸಲಾಗಿದೆಯಂತೆ.

ಈ ಹಿಂದಿನ ಅಪ್‌ಡೇಟ್‌ಗಳಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಶಾರುಖ್ ಖಾನ್ ಅವರ ಧ್ವನಿ ಕೇಳುತ್ತಿತ್ತು. ಹೊಸ ಆವೃತ್ತಿಯಲ್ಲಿ ಯಶ್ ಅವರ ಖಡಕ್ ಧ್ವನಿ ಸಹ ಇರಲಿದೆ. ‘ಎನಿಮೀಸ್ ಅಹೆಡ್’, ‘ಫಾಲೋ ಮಿ’ ಇನ್ನಿತರೆ ಗೇಮ್ ಕಮಾಂಡ್​​ಗಳು ಯಶ್ ಅವರ ಖಡಕ್ ಧ್ವನಿಯಲ್ಲಿ ಕೇಳಬಹುದಾಗಿದೆ. ಯಶ್ ಅಭಿಮಾನಿಗಳಿಗಂತೂ ಇದು ಹಬ್ಬವೇ ಸರಿ. ಬಿಜಿಎಂಐ ಹೊಸ ಅಪ್​​ಡೇಟ್​​ನ ಗೇಮ್ ಆಡುವವರು ವಿಶೇಷ ‘ಟಾಕ್ಸಿಕ್’ ಕ್ರೇಟ್‌ಗಳನ್ನು ಅನ್‌ಲಾಕ್ ಮಾಡಬಹುದು. ಇದರಲ್ಲಿ ಚಿತ್ರದ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ರೀತಿಯ ಗನ್‌ ಸ್ಕಿನ್‌ಗಳು ಮತ್ತು ಡ್ರೆಸ್‌ಗಳು ಇರಲಿವೆ. ಗೇಮ್​ ಜೊತೆಗೆ ಯಶ್ ಅವರ ಸಹಯೋಗವನ್ನು ಸೆಲೆಬ್ರೇಟ್ ಮಾಡಲು ಗೇಮ್‌ನಲ್ಲಿ ಸಣ್ಣ ಪುಟ್ಟ ಮಿಷನ್‌ಗಳನ್ನು ನೀಡಲಾಗುತ್ತದೆ. ಈ ಮಿಷನ್‌ಗಳನ್ನು ಪೂರ್ಣಗೊಳಿಸಿದರೆ ಉಚಿತವಾಗಿ ಯಶ್ ಸಂಬಂಧಿತ ರಿವಾರ್ಡ್‌ಗಳನ್ನು ಪಡೆಯಬಹುದಾಗಿರುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us