ಹಾಲಿವುಡ್ ಸಂಸ್ಥೆಯೊಂದಿಗೆ ಯಶ್ ಮಾತುಕತೆ, ಹಾಕಿದ್ದಾರೆ ದೊಡ್ಡ ಪ್ಲ್ಯಾನ್
Yash: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಬಲು ಜೋರಿಂದ ನಡೆದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿ ಈಗ ಮುಂಬೈಗೆ ಚಿತ್ರತಂಡ ಶಿಫ್ಟ್ ಆಗಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಯಶ್, ಹಾಲಿವುಡ್ನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಭಾರಿ ದೊಡ್ಡ ಯೋಜನೆಯನ್ನೇ ಮಾಡಿದ್ದಾರೆ ನಟ ಯಶ್.
ನಟ ಯಶ್ ಇನ್ನು ಕೆಲವೇ ದಿನಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಸಹ ಅವರು ತಮ್ಮ ಹುಟ್ಟುಹಬ್ಬದಂದು ತಾವು ಕೆಲಸದಲ್ಲಿ ನಿರತರಾಗಿರುವುದಾಗಿ ಹೇಳಿದ್ದಾರೆ. ಅದರ ಅಗತ್ಯತೆಯೂ ಇದೆ. ಯಶ್ ಕೈಹಾಕಿರುವುದು ಸಾಮಾನ್ಯ ಕೆಲಸಕ್ಕಲ್ಲ. ಯಶ್, ತಮ್ಮ ‘ಟಾಕ್ಸಿಕ್’ ಸಿನಿಮಾವನ್ನು ಇತರೆ ಸಿನಿಮಾಗಳಂತೆ ಅಲ್ಲದೆ ಭಾರಿ ದೊಡ್ಡ ಮಟ್ಟದಲ್ಲಿ ಪ್ರೆಸೆಂಟ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಹಾಲಿವುಡ್ನ ಭಾರಿ ದೊಡ್ಡ ಸಂಸ್ಥೆಯೊಂದರೊಟ್ಟಿಗೆ ಮಾತುಕತೆ ಆರಂಭ ಮಾಡಿದ್ದಾರೆ.
1915 ರಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿರುವ ವಿಶ್ವದ ಹಳೆಯ ಮತ್ತು ಅತ್ಯುತ್ತಮ ಸ್ಟುಡಿಯೋಗಳಲ್ಲಿ ಒಂದಾಗಿರುವ 20ತ್ ಸೆಂಚುರಿ ಫಾಕ್ಸ್ ಜೊತೆಗೆ ಯಶ್ ಮಾತುಕತೆ ನಡೆಸಿದ್ದಾರೆ. ಹಾಗೆಂದು ಯಶ್ ಹೊಸ ಹಾಲಿವುಡ್ ಸಿನಿಮಾಕ್ಕಾಗಿ ಮಾತುಕತೆ ನಡೆಸಿಲ್ಲ ಬದಲಿಗೆ ತಮ್ಮ ‘ಟಾಕ್ಸಿಕ್’ ಸಿನಿಮಾಕ್ಕಾಗಿಯೇ 20ತ್ ಸೆಂಚುರಿ ಫಾಕ್ಸ್ ಸ್ಟುಡಿಯೋ ಜೊತೆ ಮಾತುಕತೆ ಆಡಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ತಮ್ಮ ಸಿನಿಮಾವನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ, ವಿದೇಶದಲ್ಲಿಯೂ ಭಾರಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಇದೇ ಕಾರಣಕ್ಕೆ ನಿರ್ಮಾಣ ಸಂಸ್ಥೆಯ ಜೊತೆಗೆ ವಿತರಣಾ ಸಂಸ್ಥೆಯೂ ಆಗಿರುವ 20ತ್ ಸೆಂಚುರಿ ಫಾಕ್ಸ್ ಜೊತೆ ಮಾತನಾಡುತ್ತಿದ್ದಾರೆ. ಚರ್ಚೆಗಳು ಅತ್ಯಂತ ಆರಂಭಿಕ ಹಂತಗಳಲ್ಲಿವೆ ಆದರೆ ಟಾಕ್ಸಿಕ್ ಅನ್ನು ಜಾಗತಿಕ ಯೋಜನೆಯಾಗಿ ಮಾಡುವ ಉದ್ದೇಶವಿದೆ. ಟಾಕ್ಸಿಕ್‌ನ ಕಥೆ-ಹೇಳುವ ಮಾದರಿ ಮತ್ತು ದೃಶ್ಯಗಳು ಅಂತರರಾಷ್ಟ್ರೀಯ ಮಟ್ಟದಲ್ಲಿವೆ. ಹಾಗಾಗಿ ‘ಟಾಕ್ಸಿಕ್’ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಬಿಡುಗಡೆ ಮಾಡಲು ಒಳ್ಳೆಯ ಪಾರ್ಟನರ್ ಅನ್ನು ಹುಡುಕುತ್ತಿದ್ದಾರೆ ಎಂದು ‘ಟಾಕ್ಸಿಕ್’ ಸಿನಿಮಾಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ಪಿಂಕ್ವಿಲ್ಲಾ ವರದಿ ಮಾಡಿದೆ.
ಇದನ್ನೂ ಓದಿ:ನವೀನ್ ಎಂದಿದ್ದ ಹೆಸರನ್ನು ಬದಲಿಸಿಕೊಂಡಿದ್ದೇಕೆ ಯಶ್? ಅದಕ್ಕಿದೆ ಮುಖ್ಯ ಕಾರಣ
‘ಟಾಕ್ಸಿಕ್’ ಸಿನಿಮಾ 2025ರ ಡಿಸೆಂಬರ್ಗೆ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಬಲು ಜೋರಾಗಿ ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈಗ ಮುಂಬೈನಲ್ಲಿ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸುತ್ತಿದ್ದಾರೆ. ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದು, ಕೆಲವು ಹಾಲಿವುಡ್ ತಂತ್ರಜ್ಞರು ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Tue, 31 December 24