Yash: ಬಾಲಿವುಡ್​ನಲ್ಲಿ ನಂಬರ್ ಒನ್ ಹೀರೋ ಪಟ್ಟ ಗಿಟ್ಟಿಸಿಕೊಂಡ ಯಶ್

ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ‘ಕೆಜಿಎಫ್ 2’ ಸದ್ದು ಮಾಡಿದೆ. ಈ ಸಿನಿಮಾ 1250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ಮಾಡಿದ ದಾಖಲೆಗಳು ಹಲವು. ಬಾಲಿವುಡ್ ಮಂದಿ ಕೂಡ ಮಾಡಲಾರದ ದಾಖಲೆಗಳನ್ನು ಈ ಸಿನಿಮಾ ಮಾಡಿದೆ.

Yash: ಬಾಲಿವುಡ್​ನಲ್ಲಿ ನಂಬರ್ ಒನ್ ಹೀರೋ ಪಟ್ಟ ಗಿಟ್ಟಿಸಿಕೊಂಡ ಯಶ್
ಯಶ್
Edited By:

Updated on: Aug 26, 2022 | 4:17 PM

ಹಿಂದಿ ಚಿತ್ರರಂಗದಲ್ಲಿ ಸದ್ಯ ಪರಭಾಷೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ದಕ್ಷಿಣದ ಹಲವು ಸಿನಿಮಾಗಳು ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಕಂಡಿವೆ. ಇದರಿಂದ ಅಲ್ಲಿಯವರಿಗೆ ಭಯ ಶುರುವಾಗಿದೆ. ಆದರೆ, ಇತ್ತೀಚೆಗೆ ತೆರೆಗೆ ಬಂದ ಯಾವ ಬಾಲಿವುಡ್ ಚಿತ್ರಗಳು ಕೂಡ ದೊಡ್ಡ ಮಟ್ಟದ ಗೆಲುವಿನ ನಗೆ ಬೀರಿಲ್ಲ. ಕೆಲವರು ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಬಾಲಿವುಡ್​ನ ಸ್ಟಾರ್ ನಟ ಶಾಹಿದ್ ಕಪೂರ್ (Shahid Kapoor) ಅವರು ಯಶ್​ಗೆ (Yash) ಬಾಲಿವುಡ್​ನ ನಂಬರ್ ಒನ್ ಹೀರೋ ಪಟ್ಟ ನೀಡಿದ್ದಾರೆ.

ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ‘ಕೆಜಿಎಫ್ 2’ ಸದ್ದು ಮಾಡಿದೆ. ಈ ಸಿನಿಮಾ 1250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ಮಾಡಿದ ದಾಖಲೆಗಳು ಹಲವು. ಬಾಲಿವುಡ್ ಮಂದಿ ಕೂಡ ಮಾಡಲಾರದ ದಾಖಲೆಗಳನ್ನು ಈ ಸಿನಿಮಾ ಮಾಡಿದೆ. ಮೊದಲ ದಿನವೇ 53 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲುಗಿಸಿದ್ದು ಯಶ್ ಸಿನಿಮಾದ ಹೆಚ್ಚುಗಾರಿಕೆ. ಯಶ್ ಜನಪ್ರಿಯತೆ ಎಷ್ಟಿದೆ ಎಂಬುದು ಪದೇಪದೇ ಸಾಬೀತಾಗುತ್ತಲೇ ಇದೆ.

ಇತ್ತೀಚೆಗೆ ಶಾಹಿದ್ ಕಪೂರ್ ಅವರು ‘ಕಾಫಿ ವಿತ್ ಕರಣ್ ಸೀಸನ್ 7’ಗೆ ಅತಿಥಿಯಾಗಿ ಆಗಮಿಸಿದ್ದರು. ಅವರ ಜತೆ ಕಿಯಾರಾ ಅಡ್ವಾಣಿ ಕೂಡ ಇದ್ದರು. ಕರಣ್ ಜೋಹರ್ ಅವರು ಈ ಶೋ ನಡೆಸಿಕೊಟ್ಟಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಕರಣ್ ಕೇಳಿದ ಒಂದು ಪ್ರಶ್ನೆಗೆ ಶಾಹಿದ್ ಕಪೂರ್ ಅಚ್ಚರಿಯ ಉತ್ತರ ನೀಡಿದ್ದಾರೆ.

ಇದನ್ನೂ ಓದಿ
Rangi Taranga Remake: ಹಿಂದಿಗೆ ರಿಮೇಕ್​ ಆಗಲಿದೆ ಕನ್ನಡದ ‘ರಂಗಿತರಂಗ’; ಬಿ-ಟೌನ್​ ಸ್ಟಾರ್​ ನಟನಿಗೆ ಅನೂಪ್​ ಭಂಡಾರಿ ನಿರ್ದೇಶನ?
Jersey Movie: ರಿಮೇಕ್​ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್​ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?
Jersy Box Office Collection: ‘ಕೆಜಿಎಫ್ ಚಾಪ್ಟರ್ 2’ 9ನೇ ದಿನ ಗಳಿಸಿದ ಅರ್ಧದಷ್ಟೂ ಕಲೆಕ್ಷನ್ ಮಾಡದ ಜೆರ್ಸಿ; ಇಲ್ಲಿದೆ ಲೆಕ್ಕಾಚಾರ
ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’

‘ಬಾಲಿವುಡ್​ನ ನಂಬರ್ ಒನ್ ಹೀರೋಯಿನ್ ಹಾಗೂ ಹೀರೋ ಯಾರು’ ಎಂದು ಕರಣ್ ಜೋಹರ್ ಕೇಳಿದರು. ಇದಕ್ಕೆ ಶಾಹಿದ್ ಕಪೂರ್ ಒಂದು ಕ್ಷಣವೂ ಯೋಚಿಸದೆ ಉತ್ತರ ನೀಡಿದ್ದಾರೆ. ‘ನಂಬರ್ ಒನ್ ಹೀರೋಯಿನ್ ಕಿಯಾರಾ. ನಂಬರ್ ಒನ್ ಹೀರೋ ರಾಕಿ ಭಾಯ್’ ಎಂದರು ಅವರು. ‘ರಾಕಿ ಭಾಯ್ ಎಂದರೆ ಯಶ್ ಅಲ್ಲವೇ’ ಎಂದು ಕರಣ್ ಕೇಳಿದರು. ಇದಕ್ಕೆ ಹೌದು ಎನ್ನುವ ಉತ್ತರ ಶಾಹಿದ್ ಕಪೂರ್ ಕಡೆಯಿಂದ ಬಂತು.

ಇದನ್ನೂ ಓದಿ: ಆ್ಯಟಿಟ್ಯೂಡ್ ತೋರಿಸಿದ ಜಯಶ್ರೀಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್​ಗೆ ಮತ್ತಷ್ಟು ಹತ್ತಿರ

ಬಾಲಿವುಡ್​ನ ನಂಬರ್ ಒನ್ ಹೀರೋ ಯಶ್ ಎಂಬುದನ್ನು ಓರ್ವ ಬಾಲಿವುಡ್​ ಸ್ಟಾರ್ ನಟ ಘೋಷಣೆ ಮಾಡಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಶಾಹಿದ್ ಅವರು ಮಾತನಾಡಿದ ಈ ಕ್ಲಿಪ್ ಸಾಕಷ್ಟು ವೈರಲ್ ಆಗುತ್ತಿದೆ.