ಯಶ್ ತಾಯಿ ನಿರ್ಮಾಣದ ಮೊದಲ ಸಿನಿಮಾ ಪೋಸ್ಟರ್ ರಿಲೀಸ್

Yash mother: ಪ್ಯಾನ್ ಇಂಡಿಯಾ ನಟ ಯಶ್, ನಟರಾಗಿರುವ ಜೊತೆಗೆ ನಿರ್ಮಾಪಕರೂ ಹೌದು, ತಮ್ಮ ಮಾನ್​ಸ್ಟರ್ ಮೈಂಡ್ಸ್ ನಿರ್ಮಾಣ ಸಂಸ್ಥೆಯ ಮೂಲಕ ಕೆಲ ದೊಡ್ಡ ಬಜೆಟ್ ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಇದೀಗ ಯಶ್ ಅವರ ತಾಯಿ ಪುಷ್ಪ ಅವರು ಸಹ ಸಿನಿಮಾ ನಿರ್ಮಾಣ ಆರಂಭಿಸಿದ್ದಾರೆ. ನಿರ್ಮಾಣ ಸಂಸ್ಥೆಗೆ ಪಿಎ ಪ್ರೊಡಕ್ಷನ್ ಹೌಸ್ ಎಂದು ಹೆಸರಿಡಲಾಗಿದೆ.

ಯಶ್ ತಾಯಿ ನಿರ್ಮಾಣದ ಮೊದಲ ಸಿನಿಮಾ ಪೋಸ್ಟರ್ ರಿಲೀಸ್
Yash

Updated on: Apr 30, 2025 | 11:48 AM

ರಾಕಿಂಗ್ ಸ್ಟಾರ್ ಯಶ್ (Yash) ಈಗ ಪ್ಯಾನ್ ಇಂಡಿಯಾ ನಟ, ‘ಟಾಕ್ಸಿಕ್’ (Toxic) ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ನಟರೂ ಆಗಲಿದ್ದಾರೆ. ಯಶ್ ನಟರಾಗಿರುವ ಜೊತೆಗೆ ನಿರ್ಮಾಪಕರೂ ಹೌದು. ತಮ್ಮ ‘ಮಾನ್ಸ್ಟರ್ ಮೈಂಡ್ಸ್’ ನಿರ್ಮಾಣ ಸಂಸ್ಥೆಯ ಮೂಲಕ ಕೆಲ ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಇದೀಗ ಯಶ್ ಅವರ ಪೋಷಕರು ಸಹ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ವಿಶೇಷವಾಗಿ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಹೊಸದೊಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದು. ಅದಕ್ಕೆ ಪಿಎ ಪ್ರೊಡಕ್ಷನ್ಸ್ (PA Productions) ಎಂದು ಹೆಸರಿಟ್ಟಿದ್ದಾರೆ. P ಅಂದ್ರೆ ಪುಷ್ಪ A ಅಂದ್ರೆ ಅರುಣ್ ಕುಮಾರ್ ಎಂದರ್ಥವಂತೆ. ಯಶ್ ಅಪ್ಪ ಮತ್ತು ಅಮ್ಮನ ಹೆಸರು ಇರೋ ಈ ಪ್ರೊಡಕ್ಷನ್ ಹೌಸ್‌ ಮೂಲಕ ಚೊಚ್ಚಲ ಚಿತ್ರ ನಿರ್ಮಾಣವಾಗುತ್ತಿದೆ. ಅಕ್ಷಯ ತೃತೀಯ ದಿನವಾದ ಇಂದು ಚಿತ್ರತಂಡ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ಪಿಎ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾಕ್ಕೆ ‘ಕೊತ್ತಲವಾಡಿ’ ಎಂಬ ಹೆಸರಿಡಲಾಗಿದೆ. ಶ್ರೀರಾಜ್ ಎಂಬುವವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.. ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿ ಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಇದು ಅವರಿಗೆ ಮೊದಲ ಸಿನಿಮಾ.

ಯಶ್ ಪೋಷಕರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾನಲ್ಲಿ ನಟ ಪೃಥ್ವಿ ಅಂಬರ್ ನಾಯಕ. ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗರಂತಹ ಅನುಭವಿ ತಾರಾಬಳಗ ಈ ಸಿನಿಮಾದಲ್ಲಿದೆ. ಇಲ್ಲಿಯವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ‘ಕೊತ್ತಲವಾಡಿ’ ಸಿನಿಮಾದಲ್ಲಿ ಮಾಸ್ ಅವತಾರ ಎತ್ತಿದ್ದಾರೆ. ಸಿನಿಮಾದ ಪೋಸ್ಟರ್​ನಲ್ಲಿ ಸಖತ್ ಮಾಸ್ ಆಗಿಯೇ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ; ಹೊಸ ಬ್ಯಾನರ್ ಶುರು?

PA ಪ್ರೊಡಕ್ಷನ್ಸ್ ಪ್ರಮುಖ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಅದರಂತೆ ಕೊತ್ತಲವಾಡಿ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಯುವ ನಿರ್ದೇಶಕರ ಜೊತೆಗೆ ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಹೊಸಬರೇ.

ಹಳ್ಳಿ ಹಿನ್ನೆಲೆ ಉಳ್ಳ ಈ ಕಥೆಯಲ್ಲಿ ಪೃಥ್ವಿ ಅಂಬರ್ ಆಕ್ಷನ್ ಹೀರೋ ಆಗಿ ನಟಿಸುತ್ತಿದ್ದಾರೆ. ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಹಾಗೂ ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಕೊತ್ತಲವಾಡಿ ಸಿನಿಮಾಗೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:45 am, Wed, 30 April 25