ನಟೇಶ್ ಮತ್ತು ವಿಜಯ್ ತಾರಾಗಣದ ಹೊಸ ಸಿನಿಮಾ ‘ಕುರ್ಕ’; ಗಣೇಶ್ ಹೆಗಡೆ ನಿರ್ದೇಶನ
ನಟೇಶ್ ಹೆಗಡೆ ಹಾಗೂ ವಿಜಯ್ ರಾಘವೇಂದ್ರ ನಟನೆಯ ಮುಂದಿನ ಚಿತ್ರಕ್ಕೆ ‘ಕುರ್ಕ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಗಣೇಶ್ ಹೆಗಡೆ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವು ಅನುಭವಿ ಕಲಾವಿದರ ದಂಡನ್ನು ಒಳಗೊಂಡಿದ್ದು, ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ನಟನಾಗಿ, ನಿರ್ದೇಶಕನಾಗಿ ನಟೇಶ್ ಹೆಗಡೆ (Natesh Hegde) ಜನಪ್ರಿಯತೆ ಪಡೆದಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಪೆದ್ರೊ’ ಹಾಗೂ ‘ವಾಘಚಿಪಾಣಿ’ ಸಿನಿಮಾಗಳು ಈಗಾಗಲೇ ಸಿನಿಮೋತ್ಸವಗಳಲ್ಲಿ ಮೆಚ್ಚುಗೆ ಪಡೆದಿವೆ. ಈಗ ಅವರು ಮೊದಲ ಬಾರಿಗೆ ನಿರ್ಮಾಣಕ್ಕೆ ಇಳಿದಿದ್ದಾರೆ. ಗಣೇಶ್ ಹೆಗಡೆ ಜೊತೆ ಸೇರಿ ಅವರು ‘ಕುರ್ಕ’ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ ವಿಜಯ್ ರಾಘವೇಂದ್ರ ಹಾಗೂ ನಟೇಶ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜನೆ ಇರಲಿದೆ ಅನ್ನೋದು ವಿಶೇಷ.
ನಟೇಶ್ ಅವರ ಸಿನಿಮಾಗಳ ಶೀರ್ಷಿಕೆಗಳು ತುಂಬಾನೇ ಭಿನ್ನವಾಗಿ ಇರುತ್ತವೆ. ಈಗ ಅವರು ಇಟ್ಟಿರೋ ‘ಕುರ್ಕ’ ಶೀರ್ಷಿಕೆಯೂ ಗಮನ ಸೆಳೆಯುವಂತಿದೆ. ಈ ಚಿತ್ರದಲ್ಲಿ ಅನುಭವಿ ಕಲಾವಿದರ ದಂಡೇ ಇದೆ. ಹಲವು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬರುತ್ತಿರುವ ವಿಜಯ್ ರಾಘವೇಂದ್ರ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು, ‘ಪೆದ್ರೊ’ ಹಾಗೂ ‘ವಾಘಚಿಪಾಣಿ’ ಹಾಗೂ ಮಲಯಾಳಂನ ‘ರೈಫಲ್ ಹೌಸ್’ ಚಿತ್ರದಲ್ಲಿ ನಟಿಸಿದ ಅನುಭವ ನಟೇಶ್ಗೆ ಇದೆ. ಹಿರಿಯ ನಟ ಅವಿನಾಶ್, ನಟಿ ಅನುಪಮಾ ಗೌಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅನುಪಮಾ ಗೌಡ, ಜಹಾಂಗೀರ್ ಎಂಎಸ್, ಜಿಬಿ ಭರತ್, ಸಿಂಧು ಹೇರೂರ್, ನಾಗರಾಜ್ ಹೆಗಡೆ, ಶ್ವೇತಾ ದೇಸಾಯಿ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ಸಿನಿಮೋತ್ಸವಗಳಲ್ಲಿ ‘ವಾಘಚಿಪಾಣಿ’ ಯಶಸ್ಸು; ನಿರ್ದೇಶಕ ನಟೇಶ್ ಹೆಗಡೆ ಮನದಾಳದ ಮಾತು
ಗಣೇಶ್ ಹೆಗಡೆ ಅವರು ಈ ಮೊದಲು ‘ನೀಲಿ ಹಕ್ಕಿ’ ಹೆಸರಿನ ಸಿನಿಮಾ ಮಾಡಿದ್ದರು. ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಅವರು ಈ ಸಿನಿಮಾದ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದ ಕಥೆ ಕೂಡ ಅವರದ್ದೇ. ಉದ್ಯಮಿ, ಸಮಾಜ ಸೇವಕ ಡಾ. ರೇವಣ್ಣ ಅವರ ‘ಅಘೋರ್ ಮೋಷನ್ ಪಿಕ್ಚರ್ಸ್’ ಹಾಗೂ ನಟೇಶ್ ಹೆಗಡೆ ಮತ್ತು ಗಣೇಶ್ ಹೆಗಡೆ ಅವರ ‘ಫಾಕ್ಸ್ ಆ್ಯಂಡ್ ಫ್ರೆಂಡ್ಸ್’ ನಿರ್ಮಾಣ ಸಂಸ್ಥೆ ಒಟ್ಟಾಗಿ ‘ಕುರ್ಕ’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಕುರ್ಕ ಚಿತ್ರದ ಪೋಸ್ಟರ್ ಗಮನ ಸೆಳೆಯುತ್ತಿದೆ.

ಸಿನಿಮಾ ನಿರ್ಮಾಪಕರು
View this post on Instagram
ಕನ್ನಡದ ಖ್ಯಾತ ಸಂಗೀತ ಸಂಯೋಜಕ ಚರಣ್ ರಾಜ್ ಅವರು ‘ಕುರ್ಕ’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಶ್ರೇಯಾಂಕ್ ನಂಜಪ್ಪ ಸೌಂಡ್ ಡಿಸೈನ್ ಮಾಡಲಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣ, ನಟೇಶ್ ಹೆಗಡೆ ಸಂಕಲನ, ಜಗದೀಪ್ ಕಲಾವನ ಎಸ್ಎಫ್ಎಕ್ಸ್ ಮೇಕಪ್ ಮಾಡಲಿದ್ದಾರೆ. ವೀರೇಶ್ ಪುಟಾಣಿ ಎಕ್ಸಿಕ್ಯುಟಿವ್ ಪ್ರೊಡ್ಸೂರ್ ಆಗಿದ್ದು, TMEfx ಕಡೆಯಿಂದ ವಿಎಫ್ಎಕ್ಸ್ ಕೆಲಸ ನಡೆಯಲಿದೆ. ಈಗಾಗಲೇ ಶೂಟ್ ಪೂರ್ಣಗೊಂಡಿದ್ದು, ವಿಎಫ್ಎಕ್ಸ್ ಕೆಲಸಗಳು ನಡೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Wed, 30 April 25








