
‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ಸಂಪೂರ್ಣ ಗಮನ ಈಗ ‘ಟಾಕ್ಸಿಕ್’ ಸಿನಿಮಾದ ಮೇಲಿದೆ. ಅಭಿಮಾನಿಗಳು ಸಹ ಹಗಲು-ರಾತ್ರಿ ಇದೇ ಸಿನಿಮಾದ ಜಪ ಮಾಡುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಬಹು ದೊಡ್ಡ ಗೆಲುವಿನ ಬಳಿಕ ಯಶ್ ಒಪ್ಪಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ (Toxic Movie) ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಮಾಡಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಸೆಟ್ನಿಂದ ಕೆಲವು ಫೋಟೋಗಳು ಲೀಕ್ (Toxic Photo Leak) ಆಗಿವೆ.
ಯಶ್ ಅವರ ಗುರಿ ದೊಡ್ಡದಾಗಿದೆ. ಯಾವಾಗಲೂ ಅವರು ದೊಡ್ಡದಾಗಿ ಆಲೋಚನೆ ಮಾಡುತ್ತಾರೆ. ಅವರ ಮುಂದಿನ ನಡೆ ಹೇಗಿರಲಿದೆ ಎಂಬುದೇ ಎಲ್ಲರ ಕೌತುಕ. ‘ಕೆಜಿಎಫ್ 2’ ನಂತರ ‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಅವರು ಸಾಕಷ್ಟು ಸಮಯ ತೆಗೆದುಕೊಂಡರು. ಇದರ ಸಿದ್ಧತೆ ಜೋರಾಗಿ ನಡೆದಿತ್ತು. ಶೂಟಿಂಗ್ ಕೂಡ ಅಷ್ಟೇ ಕಾಳಜಿಯಿಂದ ನಡೆಯುತ್ತಿದೆ. ಪ್ರತಿಯೊಂದು ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ಶಾರುಖ್ ಖಾನ್? ನಡೆದಿದೆ ದೊಡ್ಡ ಪ್ಲ್ಯಾನ್
‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಯಶ್ ಜೊತೆ ಸಿನಿಮಾ ಮಾಡಲು ಪರಭಾಷೆಯ ದೊಡ್ಡ ದೊಡ್ಡ ಪ್ರೊಡಕ್ಷನ್ ಕಂಪನಿಗಳು, ಅನೇಕ ಸ್ಟಾರ್ ಡೈರೆಕ್ಟರ್ಗಳು ಮುಂದೆ ಬಂದರು. ಆದರೆ ಯಶ್ ಆಯ್ಕೆ ಬೇರೆಯೇ ಆಗಿತ್ತು. ‘ಕೆವಿಎನ್ ಪ್ರೊಡಕ್ಷನ್ಸ್’ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ ಜೊತೆ ಅವರು ಕೈ ಜೋಡಿಸಿದರು. ಸದ್ಯಕ್ಕೆ ಈ ಚಿತ್ರತಂಡದಿಂದ ಹೊರಬಂದಿರುವುದು ಟೈಟಲ್ ಟೀಸರ್ ಮಾತ್ರ. ಅಷ್ಟರಲ್ಲೇ ಭಾರಿ ಹೈಪ್ ಸೃಷ್ಟಿ ಆಗಿದೆ.
ಸದ್ಯ ‘ಟಾಕ್ಸಿಕ್’ ಶೂಟಿಂಗ್ ಸೆಟ್ನಿಂದ ಲೀಕ್ ಆಗಿರುವ ಫೋಟೋ ಮತ್ತು ವಿಡಿಯೋದಲ್ಲಿ ಹೆಚ್ಚೇನೂ ವಿಶೇಷತೆ ಇಲ್ಲ. ಆದರೂ ಯಶ್ ಅಭಿಮಾನಿಗಳು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹಬ್ಬ ಮಾಡುತ್ತಿದ್ದಾರೆ. ‘ನಾವು ದೊಡ್ಡ ಹಿಟ್ ನಿರೀಕ್ಷಿಸಿದ್ದೇವೆ. ತುಂಬ ಎಗ್ಸೈಟ್ ಆಗಿದ್ದೇವೆ’ ಎಂಬ ಕ್ಯಾಪ್ಷನ್ನೊಂದಿಗೆ ಯಶ್ ಅವರ ಫ್ಯಾನ್ ಪೇಜ್ನಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ.
ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ಕೂಡ ಯಶ್ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಇತ್ತೀಚೆಗೆ ರಾಧಿಕಾ ಪಂಡಿತ್ ಅವರು ಕೆಲವು ಫೋಟೋ ಹಂಚಿಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿಯ ಫೋಟೋವನ್ನು ಪುತ್ರಿ ಆಯ್ರಾ ಕ್ಲಿಕ್ಕಿಸಿದ್ದಾಳೆ. ‘ನನ್ನ ಹೊಸ ಪರ್ಸನಲ್ ಫೋಟೋಗ್ರಾಫರ್’ ಎಂದು ರಾಧಿಕಾ ಪಂಡಿತ್ ಅವರು ಇದಕ್ಕೆ ಕ್ಯಾಪ್ಷನ್ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.