
ಯಶ್ (Yash) ಅವರ ತಂದೆಯ ಹೆಸರು ಅರುಣ್ ಕುಮಾರ್. ಯಾಯಿ ಹೆಸರು ಪುಷ್ಪಾ. ಇವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇವರು ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾಗಳ ನಿರ್ಮಾಣ ಕಾರ್ಯಕ್ಕೆ ಇಳಿದಿದ್ದಾರೆ. ಅರುಣ್ ಕುಮಾರ್ ಹಾಗೂ ಪುಷ್ಪಾ ಅವರ ಬಗ್ಗೆ ಯಶ್ ಈ ಮೊದಲು ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ಜನವರಿ 8 ಯಶ್ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಯಶ್ ಅವರು ತುಂಬಾನೇ ಕಷ್ಟಪಟ್ಟಿದ್ದರು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅದು ನಟನೆಗೆ ಬಂದಮೇಲೆ ಮಾತ್ರ. ಏಕೆಂದರೆ ಸಣ್ಣವರಿದ್ದಾಗ ಅವರಿಗೆ ಕಷ್ಟ ನೋಡಲು ಕುಟುಂಬದವರು ಅವಕಾಶ ನೀಡಿರಲೇ ಇಲ್ಲ. ಈ ಬಗ್ಗೆ ಹಲವು ವರ್ಷಗಳ ಹಿಂದೆ ಟಿವಿ9 ಕನ್ನಡದ ‘ನನ್ನ ಕಥೆ’ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
‘ನನ್ನ ತಂದೆ ತಾಯಿಗೆ ಕಷ್ಟ ಇದ್ದರೂ, ನಮಗೆ ಏನೂ ತೊಂದರೆ ಮಾಡಿಲ್ಲ. ಕಾನ್ಫಿಡೆನ್ಸ್ ನೀಡಿ ಬೆಳೆಸಿದ್ದರು. ನಾನು ಮೈಸೂರಿನ ಪಡವಾರಹಳ್ಳಿ ಎಂಬ ಏರಿಯಾದಲ್ಲಿ ಹುಟ್ಟಿ ಬೆಳೆದಿದ್ದೆ. ಪಾಶ್ ಏರಿಯಾ, ಹಳ್ಳಿಯ ವಾತಾವರಣನೂ ಇತ್ತು. ಎಲ್ಲಾ ರೀತಿಯ ವಾತಾವರಣ ನೋಡಿ ಬೆಳೆದಿದ್ದೆ’ ಎಂದರು ಯಶ್.
‘ನನ್ನ ತಂದೆ ತಾಯಿ ಶಿಕ್ಷಣಕ್ಕೆ ಕೊರತೆ ಮಾಡಿಲ್ಲ. ಡ್ರೈವರ್ ಮಕ್ಕಳಿಗೆ ಕಷ್ಟ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಬುದ್ಧಿ ಬಂದಮೇಲೆ ಬೇರೆ ಡ್ರೈವರ್ ಮಕ್ಕಳು ನೋಡಿದಾಗ ಕಷ್ಟ ಗೊತ್ತಾಯಿತು. ಮಹಾಜನ ಸ್ಕೂಲ್ನಲ್ಲಿ ನಾನು ಓದಿದ್ದೆ. ರಾಜಕಾರಣಿ, ಅಧಿಕಾರ ಮಕ್ಕಳು ಅಲ್ಲಿದ್ದರು’ ಎಂದಿದ್ದಾರೆ ಅವರು.
ಇದನ್ನೂ ಓದಿ: ಬರ್ತ್ಡೇಗೂ ಮೊದಲು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿದ ಯಶ್; ಇಲ್ಲಿವೆ ಚಿತ್ರಗಳು
‘ಸಣ್ಣ ವಯಸ್ಸಿನಲ್ಲಿ ನಾಟಕ ಮಾಡುತ್ತಿದ್ದೆ. ಅದು ನನಗೆ ಸ್ಫೂರ್ತಿ ಕೊಡ್ತು. ನಟನೆಗೆ ಸೇರಬೇಕು ಎಂದಿತ್ತು. ಸಿನಿಮಾದಲ್ಲಿ ರಾಜಕೀಯ ಇರುತ್ತದೆ ಎಂಬುದು ಗೊತ್ತಿತ್ತು. ಬೆಂಗಳೂರು ಎಂಬುದೇ ಗೊತ್ತಿಲ್ಲ. ಅಕೌಂಟ್ ನಂಗೆ ಇಷ್ಟ ಇರಲಿಲ್ಲ. ನಟನೆ ಬಗ್ಗೆ ಆಸಕ್ತಿ ಇತ್ತು’ ಎಂದಿದ್ದಾರೆ ಅವರು. ಧಾರಾವಾಹಿಗಳಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಸ್ಟಾರ್ ಹೀರೋ ಆಗಿದ್ದಾರೆ. ‘ಟಾಕ್ಸಿಕ್’ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.