Year Ender 2022: ಪೂರ್ಣಗೊಳ್ಳುತ್ತಿದೆ 2022: ಈ ವರ್ಷ ಭಾರತ ಚಿತ್ರರಂಗದಲ್ಲಿ ಗೆಲುವು ಕಂಡ ಚಿತ್ರಗಳಿವು

ಈ ವರ್ಷ ಕನ್ನಡ ಚಿತ್ರರಂಗ ಬಂಗಾರದ ಬೆಳೆ ತೆಗೆದಿದೆ. ಬಾಲಿವುಡ್​​ನಲ್ಲಿ ಈ ವರ್ಷ ಗೆದ್ದಿದ್ದು ಕೆಲವೇ ಕೆಲವು ಚಿತ್ರಗಳು ಮಾತ್ರ. ಕನ್ನಡದಲ್ಲಿ ಈ ವರ್ಷ ಸಾವಿರಾರು ಕೋಟಿ ಬಿಸ್ನೆಸ್ ಮಾಡಿದ ಸಿನಿಮಾ ಕೂಡ ಇದೆ.

Year Ender 2022: ಪೂರ್ಣಗೊಳ್ಳುತ್ತಿದೆ 2022: ಈ ವರ್ಷ ಭಾರತ ಚಿತ್ರರಂಗದಲ್ಲಿ ಗೆಲುವು ಕಂಡ ಚಿತ್ರಗಳಿವು
Year Ender 2022
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 24, 2022 | 3:43 PM

2022 ಪೂರ್ಣಗೊಳ್ಳುತ್ತಿದೆ. ಈ ವರ್ಷ ಕನ್ನಡ ಚಿತ್ರರಂಗ ಬಂಗಾರದ ಬೆಳೆ ತೆಗೆದಿದೆ. ಬಾಲಿವುಡ್​​ನಲ್ಲಿ ಈ ವರ್ಷ ಗೆದ್ದಿದ್ದು ಕೆಲವೇ ಕೆಲವು ಚಿತ್ರಗಳು ಮಾತ್ರ. ಕನ್ನಡದಲ್ಲಿ ಈ ವರ್ಷ ಸಾವಿರಾರು ಕೋಟಿ ಬಿಸ್ನೆಸ್ ಮಾಡಿದ ಸಿನಿಮಾ ಕೂಡ ಇದೆ. ಆ ಬಗ್ಗೆ ಇಲ್ಲಿದೆ ವಿವರ

‘ಕೆಜಿಎಫ್ 2’

ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ಮಾಡಿದ ದಾಖಲೆಗಳ ಸಂಖ್ಯೆ ತುಂಬಾನೇ ದೊಡ್ಡದು. ಈ ಸಿನಿಮಾ 1400 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದೆ. ಬಾಲಿವುಡ್​ನಲ್ಲೇ ಈ ಸಿನಿಮಾ 430 ಕೋಟಿ ಬಾಚಿಕೊಂಡಿದೆ ಎಂಬುದು ವಿಶೇಷ. ಈ ಚಿತ್ರದಿಂದ ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿದೆ.

‘777 ಚಾರ್ಲಿ’

ರಕ್ಷಿತ್ ಶೆಟ್ಟಿ ನಟನೆಯ ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ನಿರ್ಮಾಪಕರಾಗಿ ರಕ್ಷಿತ್ ಶೆಟ್ಟಿ ಗೆದ್ದು ಬೀಗಿದ್ದಾರೆ. ಪ್ರಾಣಿ ಪ್ರಿಯರು ಇಷ್ಟಪಟ್ಟು ಈ ಸಿನಿಮಾ ನೋಡಿದ್ದಾರೆ.

‘ಜೇಮ್ಸ್​’

ಪುನೀತ್ ರಾಜ್​ಕುಮಾರ್ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇದು. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ಬಿಸ್ನೆಸ್ ಮಾಡಿದೆ ಎನ್ನಲಾಗಿದೆ. ಈ ಚಿತ್ರವನ್ನು ಪ್ರೇಕ್ಷಕರು ಭಾವುಕರಾಗಿ ಕಣ್ತುಂಬಿಕೊಂಡರು.

‘ವಿಕ್ರಾಂತ್ ರೋಣ’

ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂತು. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಈ ವರ್ಷದ ಹಿಟ್ ಸಾಲಿನಲ್ಲಿದೆ. ಈ ಚಿತ್ರದಿಂದ ಸುದೀಪ್ ಗೆಲುವು ಕಂಡಿದ್ದಾರೆ.

‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಯಾರೂ ಊಹಿಸದ ರೀತಿಯಲ್ಲಿ ಕಮಾಯಿ ಮಾಡಿದೆ. ಕೇವಲ 15 ಕೋಟಿ ಬಜೆಟ್​ನಲ್ಲಿ ರೆಡಿ ಆದ ಈ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್​​​ಗೆ ಒಳ್ಳೆಯ ಲಾಭ ಆಗಿದೆ.

‘ಆರ್​ಆರ್​ಆರ್​’

ರಾಜಮೌಳಿ ನಿರ್ದೇಶನದ ಜ್ಯೂ.ಎನ್​ಟಿಆರ್​, ರಾಮ್ ಚರಣ್​, ಆಲಿಯಾ ಭಟ್​, ಅಜಯ್ ದೇವಗನ್ ಮೊದಲಾದವರು ನಟಿಸಿದ ‘ಆರ್​ಆರ್​ಆರ್​’ ಸಿನಿಮಾ ಕೂಡ ಹಲವು ದಾಖಲೆ ಬರೆದಿವೆ. ಈ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಲಿದೆ ಎಂಬ ಊಹೆ ಎಲ್ಲರಿಗೂ ಇತ್ತು. ಆದರೆ, ಇಷ್ಟುದೊಡ್ಡ ಮಟ್ಟದ ಗಳಿಕೆ ಮಾಡುತ್ತದೆ ಎಂಬ ಅಂದಾಜು ಇರಲಿಲ್ಲ.

‘ಬ್ರಹ್ಮಾಸ್ತ್ರ’

ರಣಬೀರ್ ಕಪೂರ್, ಅಮಿತಾಭ್ ಬಚ್ಚನ್​, ಶಾರುಖ್ ಖಾನ್​ ಮೊದಲಾದವರು ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾ ಸೂಪರ್ ಹಿಟ್ ಆಯಿತು. ಬಾಲಿವುಡ್​ನಲ್ಲಿ ಗೆಲುವು ಕಂಡ ಕೆಲವೇ ಕೆಲವು ಸಿನಿಮಾಗಳಲ್ಲಿ ಈ ಚಿತ್ರ ಕೂಡ ಇದೆ. ಈ ಸಿನಿಮಾ ನೂರಾರು ಕೋಟಿ ಬಿಸ್ನೆಸ್ ಮಾಡಿದೆ.

‘ಭೂಲ್​ ಭುಲಯ್ಯ 2’

‘ಭೂಲ್​ ಭುಲಯ್ಯ’ ಚಿತ್ರದ ಸೀಕ್ವೆಲ್ ಆಗಿ ‘ಭೂಲ್​ ಭುಲಯ್ಯ 2’ ಸಿನಿಮಾ ಗೆದ್ದು ಬೀಗಿದೆ. ಈ ಚಿತ್ರದಿಂದ ಕಾರ್ತಿಕ್ ಆರ್ಯನ್ ಅವರು ಗೆಲುವು ಕಂಡಿದ್ದಾರೆ ಈ ಚಿತ್ರದಿಂದ ಸೊರಗಿದ ಬಾಲಿವುಡ್​ ಬಾಕ್ಸ್​ ಆಫೀಸ್​ಗೆ ಮೈಲೇಜ್ ಸಿಕ್ಕಿತ್ತು.

‘ಪೊನ್ನಿಯನ್ ಸೆಲ್ವನ್​ 1’

ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್​ 1’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಕಾರ್ತಿ, ಐಶ್ವರ್ಯಾ ರೈ ಮೊದಲಾದವರು ನಟಿಸಿದ್ದರು.

‘ವಿಕ್ರಮ್​’

ಕಮಲ್ ಹಾಸನ್​, ಫಹಾದ್ ಫಾಸಿಲ್, ವಿಜಯ್ ಸೇತುಪತಿ, ಸೂರ್ಯ ನಟನೆಯ ‘ವಿಕ್ರಮ್’ ಸಿನಿಮಾ ಈ ವರ್ಷ ದೊಡ್ಡ ಮಟ್ಟದ ಗೆಲುವು ಕಂಡಿದೆ. ಈ ಚಿತ್ರದಿಂದ ಕಮಲ್ ಹಾಸನ್ ಅವರು ನಿರ್ಮಾಪಕರಾಗಿ ಗೆಲುವು ಕಂಡಿದ್ದಾರೆ.

ಇದನ್ನೂ ಓದಿ: ಆಸ್ಕರ್ ರೇಸ್​ಗೆ ‘ಕಾಂತಾರ’, ಸಿನಿಮಾಗೆ ಪ್ರೀಕ್ವೆಲ್​; ವಿಜಯ್ ಕಿರಗಂದೂರು ಕೊಟ್ರು ಬಿಗ್​​ ಅಪ್​ಡೇಟ್

ಇದಲ್ಲದೆ, ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’, ಅಜಯ್ ದೇವಗನ್ ನಟನೆಯ ‘ದೃಶ್ಯಂ 2’, ತೆಲುಗಿನ ‘ಕಾರ್ತಿಕೇಯಾ 2’, ಸಮಂತಾ ನಟನೆಯ ‘ಯಶೋದಾ’, ‘ಸೀತಾ ರಾಮಂ’, ‘ಮೇಜರ್​’, ಕನ್ನಡದ ‘ಗಂಧದ ಗುಡಿ’, ‘ಓಲ್ಡ್ ಮಾಂಕ್​’, ‘ಗುರು ಶಿಷ್ಯರು’, ‘ಗಾಳಿಪಟ 2’ ಮೊದಲಾದ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ