ಯೋಗರಾಜ್ ಭಟ್ (Yogaraj Bhat) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಸಿನಿಮಾ ಪ್ರಮೋಷನ್ಗೆ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಈಗ ಅವರು ‘ಗರಡಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಬಾರಿ ಅವರು ಸಿನಿಮಾ ಪ್ರಮೋಷನ್ಗೆ ಹೊಸ ಪ್ರಯತ್ನ ಮಾಡಿದ್ದಾರೆ. ‘ಭಟ್ರು ವಾಣಿ’ ಹೆಸರಿನ ಇ-ಪೇಪರ್ ರಿಲೀಸ್ ಮಾಡಿದ್ದಾರೆ! ಪೇಪರ್ನಲ್ಲಿ ಸಿನಿಮಾ ಬಗ್ಗೆ ವಿವರ ಇದೆ.
‘ಗರಡಿ’ ಚಿತ್ರ ಬಿಸಿ ಪಾಟೀಲ್ ಬ್ಯಾನರ್ ಮೂಲಕ ಮೂಡಿ ಬರುತ್ತಿದೆ. ನವೆಂಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ನವೆಂಬರ್ 1ರಂದು ರಾಣಿಬೆನ್ನೂರಿನಲ್ಲಿ ದರ್ಶನ್ ಅವರು ಈ ಚಿತ್ರದ ಟ್ರೇಲರ್ನ ರಿಲೀಸ್ ಮಾಡಲಿದ್ದಾರೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಒಡೆತನದ ಕೆರಾಡಿ ಸ್ಟುಡಿಯೋ ಪ್ರಮೋಷನ್ ಮಾಡಲಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ‘ಭಟ್ರು ವಾಣಿ’ಯಲ್ಲಿ ಬರೆಯಲಾಗಿದೆ.
‘ಗರಡಿ’ ಸಿನಿಮಾದಲ್ಲಿ ಪೈಲ್ವಾನ್ ಓರ್ವನ ಬರ್ಬರ ಹತ್ಯೆ ನಡೆದಿರುತ್ತದೆ. ಈ ಪ್ರಕರಣ ಹೋದಂತೆ ಜಟಿಲ ಆಗುತ್ತದೆ. ಈ ಬಗ್ಗೆ ಪೇಪರ್ನಲ್ಲಿ ಬರೆಯಲಾಗಿದೆ. ಸದ್ಯ ‘ಗರಡಿ’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈಗಾಗಲೇ ‘ಗರಡಿ’ ಸಿನಿಮಾದ ಹಾಡುಗಳು ಹಿಟ್ ಆಗಿವೆ. ‘ಹೊಡಿರೆಲೆ ಹಲಗಿ..’ ಹಾಡು ಸದ್ದು ಮಾಡಿದೆ. ಯೋಗರಾಜ್ ಭಟ್ ಅವರು ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಹಾಡು ಮೂಡಿ ಬಂದಿದೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್ಗಳಲ್ಲಿ ಇಡೀ ಹಾಡನ್ನು ಶೂಟ್ ಮಾಡಲಾಗಿದೆ. ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ
‘ಸೌಮ್ಯ ಫಿಲ್ಮ್ಸ್’ ಮತ್ತು ‘ಕೌರವ ಪ್ರೊಡಕ್ಷನ್ ಹೌಸ್’ ಅಡಿಯಲ್ಲಿ ‘ಗರಡಿ’ ಸಿನಿಮಾ ನಿರ್ಮಾಣ ಆಗಿದೆ. ಬಿಸಿ ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಈ ಸಿನಿಮಾ ನಿರ್ಮಿಸಿದ್ದಾರೆ. ಸೂರ್ಯ, ಸೋನಲ್ ಮಾಂಥೆರೋ, ಬಿಸಿ ಪಾಟೀಲ್, ಪೃಥ್ವಿ ಶಾಮನೂರು, ಧರ್ಮಣ್ಣ ಕಡೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Sun, 22 October 23