AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanjay Leela Bhansali: ಸಂಜಯ್ ಲೀಲಾ ಬನ್ಸಾಲಿಯ ಮೊದಲ ಮ್ಯೂಸಿಕ್​ ಆಲ್ಬಂ ‘ಸುಕೂನ್’ ಡಿ. 7ಕ್ಕೆ ಬಿಡುಗಡೆ

ಸಂಜಯ್​ ಲೀಲಾ ಬನ್ಸಾಲಿ ಅವರು ತಮ್ಮ ಮೊದಲ ಸಂಗೀತ ಆಲ್ಬಂನ್ನು ಹೊರತರುತ್ತಿದ್ದು, 'ಸುಕೂನ್' ಎಂದು ಶೀರ್ಷಿಕೆ ನೀಡಿದ್ದಾರೆ. ಡಿಸೆಂಬರ್ 7 ರಂದು ಬಿಡುಗಡೆ ಆಗಲಿದೆ.

Sanjay Leela Bhansali: ಸಂಜಯ್ ಲೀಲಾ ಬನ್ಸಾಲಿಯ ಮೊದಲ ಮ್ಯೂಸಿಕ್​ ಆಲ್ಬಂ 'ಸುಕೂನ್' ಡಿ. 7ಕ್ಕೆ ಬಿಡುಗಡೆ
ಸಂಜಯ್ ಲೀಲಾ ಬನ್ಸಾಲಿ
TV9 Web
| Edited By: |

Updated on: Dec 05, 2022 | 9:51 PM

Share

ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರು ಬಾಲಿವುಡ್​ನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ನಿರ್ದೇಶನದ ಜೊತೆ ಜೊತೆಗೆ ತಮ್ಮ ಚಿತ್ರಗಳನ್ನು ಇವರೇ ನಿರ್ಮಾಣ ಮಾಡುತ್ತಾರೆ. ಸಂಜಯ್​ ಲೀಲಾ ಬನ್ಸಾಲಿ ಅವರು ತಮ್ಮ ಚಿತ್ರದ ಶುರುವಿನಿಂದ ಹಿಡಿದು ಅದು ತೆರೆಕಂಡ ಮೇಲೂ ಅವರು ಸುದ್ದಿಯಲ್ಲಿರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಸಂಜಯ್​ ಲೀಲಾ ಬನ್ಸಾಲಿ ಕೇವಲ ನಿರ್ದೇಶನ, ನಿರ್ಮಾಣ ಮಾತ್ರವಲ್ಲದೆ, ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಸ್ವತಃ ಅವರೇ ಮಾಡುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ‘ಪದ್ಮಾವತ್​’, ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಗಳಿಗೆ ಇವರೆ ಸಂಗೀತ ಸಂಯೋಜನೆ ಮಾಡಿದ್ದರು. ಸದ್ಯ ಸಂಜಯ್​ ಲೀಲಾ ಬನ್ಸಾಲಿ ಅವರು ತಮ್ಮ ಮೊದಲ ಸಂಗೀತ ಆಲ್ಬಂನ್ನು ಹೊರತರುತ್ತಿದ್ದು, ‘ಸುಕೂನ್’ (Sukoon) ಎಂದು ಶೀರ್ಷಿಕೆ ನೀಡಿದ್ದಾರೆ. ಎಲ್ಲಾ ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಸೆಂಬರ್ 7 ರಂದು ಬಿಡುಗಡೆ ಮಾಡಲಾಗುವುದು ಎಂದು ಸಂಜಯ್​ ಲೀಲಾ ಬನ್ಸಾಲಿ ಅವರು ಸೋಮವಾರ (ಡಿ. 5) ಘೋಷಿಸಿದ್ದಾರೆ.

ಸಂಜಯ್​ ಲೀಲಾ ಬನ್ಸಾಲಿ ಅವರು 2010ರಲ್ಲಿ ಬಿಡುಗಡೆಯಾದ ‘ಗುಜಾರಿಶ್​’ ಚಿತ್ರದ ಮೂಲಕ ಸಂಗೀತ ಸಂಯೋಜಕರಾದರು. ಬಳಿಕ ಈ ವರ್ಷ ಆರಂಭದಲ್ಲಿ ತೆರೆಕಂಡ ನಟಿ ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಾಠಿಯಾವಾಡಿ’ಯನ್ನು ನಿರ್ದೇಶನ, ನಿರ್ಮಾಣದ ಜೊತೆಗೆ ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಒಂದಾದ ‘ಧೋಲಿಡಾ’ ಹಾಡು ಸಖತ್​ ಫೇಮಸ್​ ಆಗಿತ್ತು.

ಇದನ್ನೂ ಓದಿ: ವಿವಾದದಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ; ಕನ್ನಡದ ಖ್ಯಾತ ಗಾಯಕಿಗೆ ಅಪಮಾನ ಆರೋಪ

ತಮ್ಮ ಸಂಗೀತ ಆಲ್ಬಂ ‘ಸುಕೂನ್’ ಬಗ್ಗೆ ಸಂಜಯ್​ ಲೀಲಾ ಬನ್ಸಾಲಿ ಮಾತನಾಡಿದ್ದು, ‘ಎರಡು ವರ್ಷಗಳ ಕೋವಿಡ್​ನ ಆ ಕಷ್ಟದ ಸಂದರ್ಭದ ನಡುವೆ ಈ ಆಲ್ಬಂ ತಯಾರಿಸಲಾಗಿದೆ. ಸುಕೂನ್​​ನ್ನು ರಚಿಸುವಾಗ ನಾನು ಶಾಂತಿ, ಶಾಂತತೆ ಮತ್ತು ಪ್ರೀತಿಯನ್ನು ಕಂಡುಕೊಂಡೆ. ಕೇಳುವಾಗ ನೀವು ಕೂಡ ಅದೇ ರೀತಿ ಭಾಸ ಮಾಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಹೊಸ ಆಲ್ಬಂನಲ್ಲಿ ರಶೀದ್ ಖಾನ್, ಶ್ರೇಯಾ ಘೋಷಾಲ್, ಅರ್ಮಾನ್ ಮಲಿಕ್, ಪಾಪೋನ್, ಪ್ರತಿಭಾ ಬಾಘೆಲ್, ಶೈಲ್ ಹದಾ ಮತ್ತು ಮಧುಬಂತಿ ಬಾಗ್ಚಿಯಂತಹ ಕಲಾವಿದರು ಒಂಬತ್ತು ವಿಭಿನ್ನ ಹಾಡುಗಳನ್ನು ಹಾಡಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ ಅವರು ತಬಲಾ, ಕೊಳಲು, ಗಿಟಾರ್, ಸಾರಂಗಿ, ಸಿತಾರ್ ಮತ್ತು ಹಾರ್ಮೋನಿಯಂ ಸೇರಿದಂತೆ ಹಲವು ವಿಭಿನ್ನ ಸಂಗೀತ ವಾದ್ಯಗಳನ್ನು ತಮ್ಮ ಸಂಯೋಜನೆಯಲ್ಲಿ ಅಳವಡಿಸಿದ್ದಾರೆ.

ಇದನ್ನು ಓದಿ: ‘ಗಂಗೂಬಾಯಿ ಕಾಠಿಯಾವಾಡಿ’ ಒಟಿಟಿ ರಿಲೀಸ್​ ವಿಳಂಬ; ಇನ್ನೂ ಎಷ್ಟು ತಿಂಗಳು ಕಾಯಬೇಕು?

ಮ್ಯೂಸಿಕ್ ಲೇಬಲ್ ಸರೆಗಮ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ವಿಕ್ರಮ್ ಮೆಹ್ರಾ ಅವರು ಆಲ್ಬಂ ಕುರಿತು ಮಾತನಾಡಿದ್ದು, ‘ಪರಿಪೂರ್ಣತೆಗೆ ಮತ್ತೊಂದು ಹೆಸರು ಎಂದರೆ ಅದು ಸಂಜಯ್ ಲೀಲಾ ಬನ್ಸಾಲಿ. ಅದು ಮತ್ತೊಮ್ಮೆ ಅವರ ಶ್ರಮದ ಫಲವಾದ ಸುಕೂನ್ ಮೂಲಕ ಸ್ಪಷ್ಟವಾಗಿದೆ. ಇದು ಅತ್ಯುತ್ತಮ 9 ಗಾಯಕರು ಹಾಡಿರುವ ಆಲ್ಬಂ ಆಗಿದೆ’ ಎಂದು ಹೇಳಿದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.