
ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ನಟಿ ತ್ರಿಷಾ (Trisha) ಅವರು ವಿಜಯ್ ಕುಟುಂಬದ ಜೊತೆ ಕಾಣಿಸಿಕೊಂಡಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಅನೇಕರು ತ್ರಿಷಾ ಅವರನ್ನು ಗುರಿಯಾಗಿಸಿ ಟ್ರೋಲ್ ಮಾಡುತ್ತಿದ್ದಾರೆ. ಈ ಹಂತದಲ್ಲಿ ನಟಿ ಸಂಜನಾ ಗಲ್ರಾನಿ ಅವರು ತ್ರಿಷಾ ಪರವಾಗಿ ಧ್ವನಿ ಎತ್ತಿದ್ದಾರೆ. ‘ವಿಜಯ್ ಅವರ ರಾಜಕೀಯ ಕೆಲಸಗಳ ಬಗ್ಗೆ ಮಾತನಾಡಿ’ ಎಂದು ಸಂಜನಾ ಗರಂ ಆಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಭಾಗವಹಿಸಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ತ್ರಿಷಾಗೆ ಸೆಲ್ಯೂಟ್ ಮಾಡಿದ ರೀತಿಯ ಫೋಟೋ ವೈರಲ್ ಆಗಿತ್ತು. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಮತ್ತು ಚರ್ಚೆಗೆ ಕಾರಣವಾಗಿದೆ.
ಈ ವಿಚಾರವಾಗಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಸಂಜನಾ ಗಲ್ರಾನಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
‘ಧೈರ್ಯವಿದ್ದರೆ ವಿಜಯ್ ಅವರ ರಾಜಕೀಯ ಆಡಳಿತದ ಬಗ್ಗೆ ವಿಮರ್ಶೆ ಮಾಡಿ. ಅನಗತ್ಯವಾಗಿ ಒಬ್ಬ ಮಹಿಳೆಯನ್ನು ಮಧ್ಯೆ ಎಳೆದು ತರಬೇಡಿ’ ಎಂದು ಅವರು ಖಾರವಾಗಿ ಹೇಳಿದ್ದಾರೆ.
‘ತ್ರಿಷಾ ಚಿತ್ರರಂಗದಲ್ಲಿ ತಮ್ಮದೇ ಆದ ಯಶಸ್ಸು ಕಂಡಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ ಸೂಕ್ತ ಗೌರವ ನೀಡಬೇಕು. ಅವರ ವೈಯಕ್ತಿಕ ಜೀವನದ ನಿರ್ಧಾರಗಳನ್ನು ಜಡ್ಜ್ ಮಾಡುವುದು ತಪ್ಪು. ವಿಜಯ್ ಅವರ ರಾಜಕೀಯ ಸಾಧನೆಗಳು ಮತ್ತು ಲೋಪಗಳ ಬಗ್ಗೆ ಮಾತನಾಡಿ’ ಎಂದು ಸಂಜನಾ ಸವಾಲು ಹಾಕಿದ್ದಾರೆ.
‘ಖಾಸಗಿ ಜೀವನದ ವಿಷಯಗಳನ್ನು ರಾಜಕೀಯದೊಂದಿಗೆ ಬೆರೆಸುವುದು ತಪ್ಪು. ರಾಜಕೀಯವಾಗಿ ಎದುರಿಸಲು ಸಾಧ್ಯವಾಗದಿದ್ದಾಗ ಮಹಿಳೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ರೀತಿಯ ಟ್ರೋಲ್ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಖಂಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಆಡಳಿತಾರೂಢ ಡಿಎಂಕೆ ಪಕ್ಷವು ವಿಜಯ್ ನಡವಳಿಕೆಯನ್ನು ಟೀಕಿಸಿದೆ. ಮುರಸೋಲಿ ಪತ್ರಿಕೆಯಲ್ಲಿ ವಿಜಯ್ ಅವರ ನಡೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಆದರೆ ಸಂಜನಾ ಗಲ್ರಾನಿ ಸಂಪೂರ್ಣವಾಗಿ ತ್ರಿಷಾ ಬೆಂಬಲಕ್ಕೆ ನಿಂತಿದ್ದಾರೆ.
ಇದನ್ನೂ ಓದಿ: ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ
ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿಯನ್ನು ಹಿಂಪಡೆದ ಬೆನ್ನಲ್ಲೇ ಈ ಘಟನೆ ನಡೆದಿದೆ. ತ್ರಿಷಾ ಮತ್ತು ವಿಜಯ್ ಸಂಬಂಧದ ಬಗ್ಗೆ ಹಲವು ಗಾಸಿಪ್‌ಗಳು ಹರಿದಾಡುತ್ತಿವೆ. ಆದರೆ ಸಂಜನಾ ಈ ಎಲ್ಲಾ ಟ್ರೋಲ್‌ಗಳಿಗೆ ಸೂಕ್ತ ಉತ್ತರ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Fri, 21 August 26