‘ಸರ್ಕಾರು ವಾರಿ ಪಾಟ’ ಟ್ರೇಲರ್​ನಲ್ಲಿ ಆ್ಯಕ್ಷನ್ ಮೂಲಕ ಮಿಂಚಿದ ಮಹೇಶ್ ಬಾಬು; ಚಿತ್ರದ ಕಥೆ ಏನು?

‘ಸರ್ಕಾರು ವಾರಿ ಪಾಟ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರು ಸಖತ್ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಸರ್ಕಾರು ವಾರಿ ಪಾಟ’ ಟ್ರೇಲರ್​ನಲ್ಲಿ ಆ್ಯಕ್ಷನ್ ಮೂಲಕ ಮಿಂಚಿದ ಮಹೇಶ್ ಬಾಬು; ಚಿತ್ರದ ಕಥೆ ಏನು?
ಮಹೇಶ್ ಬಾಬು
Edited By:

Updated on: May 02, 2022 | 5:02 PM

ಮಹೇಶ್ ಬಾಬು (Mahesh Babu) ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಮಹೇಶ್ ಬಾಬು ಅವರು ಸಖತ್ ಆ್ಯಕ್ಷನ್​ ಮೆರೆಯಲಿದ್ದಾರೆ ಎನ್ನುವ ಸೂಚನೆ ಈ ಮೊದಲೇ ಸಿಕ್ಕಿತ್ತು. ಇಂದು (ಮೇ 2) ರಿಲೀಸ್ ಆದ ಟ್ರೇಲರ್​ನಲ್ಲಿ ಸಿನಿಮಾದ ಝಲಕ್ ಸಿಕ್ಕಿದೆ. ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಆ್ಯಕ್ಷನ್ ದೃಶ್ಯಗಳ ಸಮ್ಮಿಲನದೊಂದಿಗೆ ‘ಸರ್ಕಾರು ವಾರಿ ಪಾಟ’ ಟ್ರೇಲರ್ (Sarkaru Vaari Paata) ಮೂಡಿ ಬಂದಿದೆ. ಈ ಟ್ರೇಲರ್​ನಿಂದ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ.

‘ಸರ್ಕಾರು ವಾರಿ ಪಾಟ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರು ಸಖತ್ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ನೀವು ನನ್ನ ಪ್ರೇಮವನ್ನು ದೋಚಬಹುದು, ನೀವು ನನ್ನ ಫ್ರೆಂಡ್​ಶಿಪ್​ ಕೂಡ ದೋಚಬಹುದು. ಆದರೆ, ನೀವು ನನ್ನ ಹಣವನ್ನು ಮಾತ್ರ ಕದಿಯಲು ಸಾಧ್ಯವಿಲ್ಲ’ ಎಂಬ ಡೈಲಾಗ್​ ಟ್ರೇಲರ್​ನಲ್ಲಿ ಹೈಲೈಟ್ ಆಗಿದೆ.

ಇದು ಒಂದು ಮುಖವಾದರೆ, ಮತ್ತೊಂದು ಶೇಡ್​ನಲ್ಲಿ ಅವರು ಸಖತ್ ರೊಮ್ಯಾಂಟಿಕ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಕತ್ತಿನಲ್ಲಿ ಅವರು ಹಾಕಿಸಿಕೊಂಡ ಒಂದು ರೂಪಾಯಿ ನಾಣ್ಯದ ಟ್ಯಾಟೂ ಸಖತ್ ಗಮನ ಸೆಳೆಯುತ್ತಿದೆ. ಹೀರೋ ದುಡ್ಡಿಗಾಗಿ ಏನೂ ಮಾಡೋಕೂ ರೆಡಿ ಇರುತ್ತಾನೆ ಎಂಬುದನ್ನು ಫ್ಯಾನ್ಸ್ ಊಹಿಸುತ್ತಿದ್ದಾರೆ. ಇದೇ ಚಿತ್ರದ ಕಥೆ ಏಂದು ಹೇಳಲಾಗುತ್ತಿದೆ. ಇನ್ನು, ಚಿತ್ರದಲ್ಲಿ ಎಮೋಷನ್ಸ್​ಗೂ ಆದ್ಯತೆ ನೀಡಲಾಗಿದೆ ಎಂಬ ಸೂಚನೆ ಸಿಕ್ಕಿದೆ.

ತೆಲುಗು ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಬ್ಯಾನರ್​ ಮೂಲಕ ‘ಸರ್ಕಾರು ವಾರಿ ಪಾಟ’ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಪರಶುರಾಮ್​ ನಿರ್ದೇಶನ ಮಾಡಿದ್ದಾರೆ. ಮಹೇಶ್​ ಬಾಬು ಅವರಿಗೆ ಜೋಡಿಯಾಗಿ ಖ್ಯಾತ ನಟಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ. ಈಗಾಗಲೇ ‘ಕಲಾವತಿ..’ ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರೀ ಕಂಡು ಫ್ಯಾನ್ಸ್​ ವಾವ್​ ಎಂದಿದ್ದಾರೆ. ಕೀರ್ತಿ ಸುರೇಶ್ ಅವರಿಗೂ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ದೊಡ್ಡ ಓಪನಿಂಗ್​ ಸಿಗುವ ನಿರೀಕ್ಷೆ ಇದೆ. ಎಸ್​. ತಮನ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. (Source)

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: ‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು

ಬಿಡುಗಡೆಗೂ ಮುನ್ನವೇ ಲೀಕ್​ ಆಯ್ತು ಮಹೇಶ್​ ಬಾಬು ಹೊಸ ಸಿನಿಮಾದ ದೃಶ್ಯಗಳು; ಫ್ಯಾನ್ಸ್​ ಗರಂ

Published On - 4:36 pm, Mon, 2 May 22