ಒಂದೇ ಒಂದು ಪೋಸ್ಟರ್​ನಿಂದ ‘ಸರ್ಕಾರು ವಾರಿ ಪಾಟ’ ಟ್ರೇಲರ್​ ಬಗ್ಗೆ ಕೌತುಕ ಕೆರಳಿಸಿದ ಮಹೇಶ್​ ಬಾಬು

ಒಂದೇ ಒಂದು ಪೋಸ್ಟರ್​ನಿಂದ ‘ಸರ್ಕಾರು ವಾರಿ ಪಾಟ’ ಟ್ರೇಲರ್​ ಬಗ್ಗೆ ಕೌತುಕ ಕೆರಳಿಸಿದ ಮಹೇಶ್​ ಬಾಬು
ಮಹೇಶ್ ಬಾಬು

Sarkaru Vaari Paata Trailer: ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ಟ್ರೇಲರ್​ ಬಿಡುಗಡೆಗೆ ದಿನಾಂಕ ಫಿಕ್ಸ್​ ಆಗಿದೆ. ಮೇ 2ರಂದು ಟ್ರೇಲರ್ ರಿಲೀಸ್​ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

TV9kannada Web Team

| Edited By: Madan Kumar

Apr 30, 2022 | 3:45 PM

ಟಾಲಿವುಡ್​ ಸ್ಟಾರ್​ ನಟ ಮಹೇಶ್​ ಬಾಬು (Mahesh Babu) ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಅಭಿನಯಿಸಿರುವ ‘ಸರ್ಕಾರು ವಾರಿ ಪಾಟ’ ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ಭಾರಿ ಕೌತುಕ ಮೂಡಿದೆ. ಭರ್ಜರಿ ಆ್ಯಕ್ಷನ್​ ಸಿನಿಮಾಗಳ ಮೂಲಕ ಮನೆ ಮಾತಾದ ಮಹೇಶ್​ ಬಾಬು ಅವರು ಪ್ರತಿ ಸಿನಿಮಾದಲ್ಲಿಯೂ ನಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾರೆ. ಈ ಬಾರಿ ಅವರು ‘ಸರ್ಕಾರು ವಾರಿ ಪಾಟ’ (Sarkaru Vaari Paata) ಸಿನಿಮಾದಲ್ಲಿ ಯಾವ ಕಥೆ ಹೇಳಲಿದ್ದಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಮಹೇಶ್​ ಬಾಬು ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅವರ ಇಡೀ ಕುಟುಂಬವೇ ಬಣ್ಣದ ಲೋಕದಲ್ಲಿ ಪರಿಣತಿ ಹೊಂದಿದೆ. ಮಹೇಶ್​ ಬಾಬು ಒಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದರೆ ಅದರಲ್ಲಿ ಏನಾದರೊಂದು ವಿಶೇಷ ಇದ್ದೇ ಇರುತ್ತದೆ ಎಂಬುದು ಅಭಿಮಾನಿಗಳ ನಂಬಿಕೆ. ಆ ನಂಬಿಕೆಯ ಮೇರೆಗೆ ‘ಸರ್ಕಾರು ವಾರಿ ಪಾಟ’ ಸಿನಿಮಾದ ಬಿಡುಗಡೆಯನ್ನು ಜನರು ಎದುರು ನೋಡುತ್ತಿದ್ದಾರೆ. ಮೇ 12ರಂದು ಈ ಚಿತ್ರ ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಟ್ರೇಲರ್ (Sarkaru Vaari Paata Trailer)​ ಮೂಲಕ ನಿರೀಕ್ಷೆ ಹೆಚ್ಚಿಸುವ ಕೆಲಸ ಆಗಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಸರ್ಕಾರು ವಾರಿ ಪಾಟ’ ಸಿನಿಮಾ ತೆರೆ ಕಂಡಿರಬೇಕಿತ್ತು. ಕೊರೊನಾ ವೈರಸ್​ ಹಾವಳಿ, ಬೇರೆ ಸಿನಿಮಾಗಳ ನಡುವೆ ರಿಲೀಸ್​ ಡೇಟ್​ ಕ್ಲ್ಯಾಶ್​ ಸೇರಿದಂತೆ ಅನೇಕ ಕಾರಣಗಳಿಂದಾಗಿ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡುತ್ತಲೇ ಇತ್ತು. ಈಗ ಅಂತಿಮವಾಗಿ ಮೇ 12ರಂದು ಮಹೇಶ್​ ಬಾಬು ಅಭಿಮಾನಿಗಳು ‘ಸರ್ಕಾರು ವಾರಿ ಪಾಟ’ ಸಿನಿಮಾ ನೋಡಿ ಎಂಜಾಯ್​ ಮಾಡಲಿದ್ದಾರೆ.

ಈ ಸಿನಿಮಾದ ಟ್ರೇಲರ್​ ಬಿಡುಗಡೆಗೆ ದಿನಾಂಕ ಫಿಕ್ಸ್​ ಆಗಿದೆ. ಮೇ 2ರಂದು ಟ್ರೇಲರ್ ರಿಲೀಸ್​ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಸುದ್ದಿ ತಿಳಿಸುವ ಸಲುವಾಗಿ ಒಂದು ವಿಶೇಷ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಹೇಶ್​ ಬಾಬು ಅವರ ಲುಕ್​ ಗಮನ ಸೆಳೆಯುತ್ತಿದೆ. ಕೈಯಲ್ಲಿ ಹಲವಾರು ಬೀಗದ ಕೀ ಹಿಡಿದು, ಯುದ್ಧಕ್ಕೆ ಸಜ್ಜಾಗಿ ನಿಂತಿರುವ ಭಂಗಿಯಲ್ಲಿ ಅವರು ಪೋಸ್​ ನೀಡಿದ್ದಾರೆ. ಅವರ ಮುಖದಲ್ಲಿ ರೋಷ ಉಕ್ಕುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಟ್ರೇಲರ್​ ಬಗ್ಗೆ ಸಖತ್​ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಪೂರ್ತಿ ಸಿನಿಮಾದಲ್ಲಿ ಆ್ಯಕ್ಷನ್​ ದೃಶ್ಯಗಳು ಇನ್ನೆಷ್ಟು ಭರ್ಜರಿಯಾಗಿ ಇರಲಿವೆ ಎಂಬುದು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ತೆಲುಗು ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಬ್ಯಾನರ್​ ಮೂಲಕ ‘ಸರ್ಕಾರು ವಾರಿ ಪಾಟ’ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಪರಶುರಾಮ್​ ನಿರ್ದೇಶನ ಮಾಡಿದ್ದಾರೆ. ಮಹೇಶ್​ ಬಾಬು ಅವರಿಗೆ ಜೋಡಿಯಾಗಿ ಖ್ಯಾತ ನಟಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ. ಈಗಾಗಲೇ ‘ಕಲಾವತಿ..’ ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರೀ ಕಂಡು ಫ್ಯಾನ್ಸ್​ ವಾವ್​ ಎಂದಿದ್ದಾರೆ. ಕೀರ್ತಿ ಸುರೇಶ್ ಅವರಿಗೂ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ದೊಡ್ಡ ಓಪನಿಂಗ್​ ಸಿಗುವ ನಿರೀಕ್ಷೆ ಇದೆ. ಎಸ್​. ತಮನ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು

9ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಹೇಶ್​ ಬಾಬು ಮಗಳು ಸಿತಾರಾ; ಮಸ್ತ್ ಡ್ಯಾನ್ಸ್​

Follow us on

Related Stories

Most Read Stories

Click on your DTH Provider to Add TV9 Kannada