AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಕಾ’ ಇತಿಹಾಸ ಸೃಷ್ಟಿಸಲಿದೆ: ವಿಎಫ್​​ಎಕ್ಸ್ ಮೇಲ್ವಿಚಾರಕ ಹೇಳಿದ್ದೇನು?

Allu Arjun movie: ಈಗಾಗಲೇ ಉತ್ತರ ಭಾರತದ ಕೆಲವು ವಿತರಕರು ಸಿನಿಮಾದ ಹಕ್ಕುಗಳಿಗಾಗಿ ನಿರ್ಮಾಣ ಸಂಸ್ಥೆಯನ್ನು ಎಡತಾಕುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಕುರಿತು ಒಂದು ಆಸಕ್ತಿಕರ ಅಪ್‌ಡೇಟ್ ಹೊರಬಿದ್ದಿದೆ. ‘ರಾಕಾ’ ಸಿನಿಮಾಕ್ಕಾಗಿ ಕೆಲಸ ಮಾಡಿರುವ ಎಸ್‌ಎಫ್‌ಎಕ್ಸ್ (SFX) ಮೇಲ್ವಿಚಾರಕರು, ಸಿನಿಮಾದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ರಾಕಾ’ ಇತಿಹಾಸ ಸೃಷ್ಟಿಸಲಿದೆ: ವಿಎಫ್​​ಎಕ್ಸ್ ಮೇಲ್ವಿಚಾರಕ ಹೇಳಿದ್ದೇನು?
Allu Arjun Raaka
ಮಂಜುನಾಥ ಸಿ.
|

Updated on:Apr 30, 2026 | 2:58 PM

Share

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಈಗಾಗಲೇ ಉತ್ತರ ಭಾರತದ ಕೆಲವು ವಿತರಕರು ಸಿನಿಮಾದ ಹಕ್ಕುಗಳಿಗಾಗಿ ನಿರ್ಮಾಣ ಸಂಸ್ಥೆಯನ್ನು ಎಡತಾಕುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಕುರಿತು ಒಂದು ಆಸಕ್ತಿಕರ ಅಪ್‌ಡೇಟ್ ಹೊರಬಿದ್ದಿದೆ. ‘ರಾಕಾ’ ಸಿನಿಮಾಕ್ಕಾಗಿ ಕೆಲಸ ಮಾಡಿರುವ ಎಸ್‌ಎಫ್‌ಎಕ್ಸ್ (SFX) ಮೇಲ್ವಿಚಾರಕರು, ಸಿನಿಮಾದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ರಾಕಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದಿರುವ ಎಸ್​​ಎಫ್​​ಎಕ್ಸ್ (ಸ್ಪೆಷಲ್ ಎಫೆಕ್ಸ್ಟ್) ತಂಡದ ಮೇಲ್ವಿಚಾರಕ. ಭಾರತದ ಇನ್ಯಾವ ಸಿನಿಮಾ ಸಹ ಮಾಡಿರದ ಗಳಿಕೆಯನ್ನು ಸಿನಿಮಾ ಮಾಡಲಿದೆ ಎಂದಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಇರುವ ಪ್ಯಾನ್ ಇಂಡಿಯಾ ಕ್ರೇಜ್ ಮತ್ತು ಅಟ್ಲೀ ಅವರ ಮಾಸ್ ದೃಶ್ಯಗಳನ್ನು ಸೆರೆಹಿಡಿಯುವ ಶೈಲಿ ಒಟ್ಟಿಗೆ ಸೇರಿ ಅದ್ಭುತವೇ ಸೃಷ್ಟಿ ಆಗುತ್ತಿದೆ. ಅದು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸುವುದು ಖಚಿತ ಎನ್ನಲಾಗುತ್ತಿದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುವಂತಹ ಅದ್ದೂರಿ ಬಿಡುಗಡೆಗೆ ಚಿತ್ರತಂಡ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ.

ವಿಶಾಲ್ ತ್ಯಾಜಿ ಎಂಬುವರು ‘ರಾಕಾ’ ಸಿನಿಮಾದ ಎಸ್​​ಎಫ್​ಎಕ್ಸ್ ಮೇಲ್ವಿಚಾರಕರಾಗಿದ್ದು, ಸಿನಿಮಾ ತಾಂತ್ರಿಕವಾಗಿ ಭಾರಿ ಶ್ರೀಮಂತವಾಗಿರಲಿದೆ ಎಂದಿದ್ದಾರೆ. ಈ ಸಿನಿಮಾವನ್ನು ಕೇವಲ ಭಾರತೀಯ ಮಟ್ಟಕ್ಕೆ ಸೀಮಿತಗೊಳಿಸದೆ, ಜಾಗತಿಕ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ಸ್ಪೆಷಲ್ ಎಫೆಕ್ಟ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದ್ದು, ಪ್ರೇಕ್ಷಕರಿಗೆ ಇದೊಂದು ವಿಷುಯಲ್ ಟ್ರೀಟ್ ಆಗಲಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ಹೈದರಾಬಾದ್‌ನಿಂದ ಮುಂಬೈಗೆ ಶಿಫ್ಟ್ ಆಗ್ತಾರಾ ಅಲ್ಲು ಅರ್ಜುನ್?

ಅಟ್ಲೀ ಅವರು ಈ ಹಿಂದೆ ಶಾರುಖ್ ಖಾನ್ ಅವರ ‘ಜವಾನ್’ ಮೂಲಕ ದೊಡ್ಡ ಯಶಸ್ಸು ಕಂಡಿದ್ದರು. ಈಗ ಅಲ್ಲು ಅರ್ಜುನ್ ಅವರಂತಹ ಸ್ಟೈಲಿಶ್ ಸ್ಟಾರ್ ಜೊತೆ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ‘ಪುಷ್ಪ’ ಚಿತ್ರದ ನಂತರ ಅಲ್ಲು ಅರ್ಜುನ್ ಅವರ ಮಾರುಕಟ್ಟೆ ಮೌಲ್ಯ ಹತ್ತು ಪಟ್ಟು ಹೆಚ್ಚಾಗಿದ್ದು, ‘ರಾಕಾ’ ಸಿನಿಮಾ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಹಿಟ್ ಆಗುವ ಮುನ್ಸೂಚನೆ ನೀಡುತ್ತಿದೆ.

ಎಸ್​​ಎಫ್​​ಎಕ್ಸ್ ಎಂದರೆ ಪೋಸ್ಟ್ ಪ್ರೊಡಕ್ಷನ್​​ಗೆ ಮುಂಚೆಯೇ ಸೆಟ್​ನಲ್ಲಿ ವಿಶೇಷ ಎಫೆಕ್ಟ್​​ಗಳನ್ನು ಸೃಷ್ಟಿಸುವುದಾಗಿರುತ್ತದೆ. ಬಾಂಬ್ ಬ್ಲಾಸ್ಟ್, ಭಿನ್ನ ರೀತಿಯ ದೃಶ್ಯ ಸಂಯೋಜನೆ, ವಿವಿಧ ಮುಖವಾಡಗಳ ಸೃಷ್ಟಿಸುವುದು, ಚಿತ್ರೀಕರಣಕ್ಕೆ ಬೇಕಾದ ಆಯುಧಗಳು ಮತ್ತು ಅವುಗಳನ್ನು ಹ್ಯಾಂಡಲ್ ಮಾಡುವುದು, ರೋಪಿಂಗ್ ಇನ್ನೂ ಹಲವನ್ನು ಈ ಎಸ್​​ಎಫ್​​ಎಕ್ಸ್ ತಂಡ ನೋಡಿಕೊಳ್ಳುತ್ತದೆ. ವಿಶಾಲ್ ತ್ಯಾಗಿ ಅವರು ಬಾಲಿವುಡ್ ಮಾತ್ರವಲ್ಲದೆ ದಕ್ಷಿಣದ ಹಲವಾರು ಸಿನಿಮಾಗಳಿಗೆ ಸ್ಪೆಷಲ್ ಎಫೆಕ್ಟ್ಸ್​​ಗಳನ್ನು ಮಾಡಿದ್ದಾರೆ. ರಜನೀಕಾಂತ್ ಇನ್ನೂ ಕೆಲವು ಹಿರಿಯ ನಟರ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದೀಗ ‘ರಾಕಾ’ ಸಿನಿಮಾನಲ್ಲೂ ಇವರೇ ಕೆಲಸ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Thu, 30 April 26

Follow Us