‘ಗುಂಟೂರು ಖಾರಂ’ ಸಿನಿಮಾ ನೋಡಲಿರುವ ಶಾರುಖ್​ ಖಾನ್​; ಮಹೇಶ್​ ಬಾಬು ಫ್ಯಾನ್ಸ್​ಗೆ ಖುಷಿ

ಶಾರುಖ್​ ಖಾನ್​ ಮತ್ತು ಮಹೇಶ್​ ಬಾಬು ನಡುವೆ ಸ್ನೇಹ ಇದೆ. ಆ ಕಾರಣದಿಂದ ಶಾರುಖ್​ ಖಾನ್​ ಅವರು ‘ಗುಂಟೂರು ಖಾರಂ’ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಶಾರುಖ್​ ಖಾನ್​ ಅವರು ಈ ಸಿನಿಮಾ ಬಗ್ಗೆ ಟ್ವೀಟ್​ ಮಾಡಿರುವುದು ಮಹೇಶ್ ಬಾಬು ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಗುಂಟೂರು ಖಾರಂ’ ಸಿನಿಮಾ ನೋಡಲಿರುವ ಶಾರುಖ್​ ಖಾನ್​; ಮಹೇಶ್​ ಬಾಬು ಫ್ಯಾನ್ಸ್​ಗೆ ಖುಷಿ
ಶಾರುಖ್​ ಖಾನ್​, ಮಹೇಶ್​ ಬಾಬು

Updated on: Jan 14, 2024 | 7:16 AM

ಟಾಲಿವುಡ್​ ‘ಪ್ರಿನ್ಸ್​’ ಮಹೇಶ್​ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ ಸಿನಿಮಾ ತೆರೆಕಂಡಿದೆ. ಈ ಚಿತ್ರದಲ್ಲಿ ಮಹೇಶ್​ ಬಾಬುಗೆ ಜೊತೆಯಾಗಿ ಶ್ರೀಲೀಲಾ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್​ ಕಾತರದಿಂದ ಕಾದಿದ್ದರು. ಜನವರಿ 12ರಂದು ಬಿಡುಗಡೆಯಾದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಈಗ ಶಾರುಖ್​ ಖಾನ್​ (Shah Rukh Khan) ಕೂಡ ಈ ಸಿನಿಮಾ ವೀಕ್ಷಿಸಲು ಆಸಕ್ತಿ ತೋರಿಸಿದ್ದಾರೆ. ಶಾರುಖ್​ ಖಾನ್​ ಮತ್ತು ಮಹೇಶ್​ ಬಾಬು ನಡುವೆ ಸ್ನೇಹ ಇದೆ. ಆ ಕಾರಣದಿಂದ ಶಾರುಖ್​ ಖಾನ್​ ಅವರು ‘ಗುಂಟೂರು ಖಾರಂ’ (Guntur Kaaram) ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಶಾರುಖ್​ ಖಾನ್​ ಅವರು ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಗೆಳೆಯ ಮಹೇಶ್​ ಬಾಬು ಅವರೇ.. ಗುಂಟೂರು ಖಾರಂ ನೋಡಲು ಕಾದಿದ್ದೇನೆ. ಮಾಸ್​, ಆ್ಯಕ್ಷನ್​, ಎಮೋಷನ್​ ಪಯಣದ ರೀತಿ ಇದೆ. ಬೆಂಕಿ..’ ಎಂದು ಶಾರುಖ್​ ಖಾನ್​ ಬರೆದುಕೊಂಡಿದ್ದಾರೆ. ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಸ್ಟಾರ್​ ನಟರ ಸಿನಿಮಾಗಳು ಪರಸ್ಪರ ಪೈಪೋಟಿಗೆ ಬಿದ್ದಿವೆ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ಸ್ಪರ್ಧೆ ಜೋರಾಗಿದೆ. ಅವುಗಳ ನಡುವೆ ‘ಗುಂಟೂರು ಖಾರಂ’ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಶಾರುಖ್​ ಖಾನ್​ ಅವರು ಈ ಸಿನಿಮಾ ಬಗ್ಗೆ ಟ್ವೀಟ್​ ಮಾಡಿರುವುದು ಮಹೇಶ್ ಬಾಬು ಅಭಿಮಾನಿಗಳಿಗೆ ಖುಷಿ ಆಗಿದೆ.

ಇದನ್ನೂ ಓದಿ: ‘ನಾನು ಕೆಟ್ಟ ವ್ಯಕ್ತಿಯ ಪಾತ್ರ ಮಾಡಿದರೆ..’; ‘ಅನಿಮಲ್​’ ಚಿತ್ರಕ್ಕೆ ಕುಟುಕಿದ್ರಾ ಶಾರುಖ್​ ಖಾನ್​?

ಈ ಹಿಂದೆ ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಬಿಡುಗಡೆ ಆದಾಗ ಮಹೇಶ್​ ಬಾಬು ಅವರು ಟ್ವೀಟ್​ ಮಾಡಿದ್ದರು. ‘ಜವಾನ್​ ಒಂದು ಬ್ಲಾಕ್​ ಬಸ್ಟರ್​ ಸಿನಿಮಾ. ನಿರ್ದೇಶಕ ಅಟ್ಲಿ ಅವರು ಕಿಂಗ್​ ಜೊತೆ ಸೇರಿಕೊಂಡು ಕಿಂಗ್​ ಸೈಜ್​ ಸಿನಿಮಾ ನೀಡಿದ್ದಾರೆ. ಇದು ಅವರ ವೃತ್ತಿಜೀವನದ ಬೆಸ್ಟ್​ ಆ್ಯಕ್ಷನ್​ ಸಿನಿಮಾ. ಶಾರುಖ್​ ಖಾನ್​ ಅವರಿಗೆ ಯಾರೂ ಸಾಟಿ ಇಲ್ಲ’ ಎಂದು ಅವರು ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:  ‘ಗುಂಟೂರು ಖಾರಂ’, ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’; ರೇಟಿಂಗ್​ನಲ್ಲಿ ಗೆದ್ದವರು ಯಾರು?

‘ಗುಂಟೂರು ಖಾರಂ’ ಸಿನಿಮಾಗೆ ತ್ರಿವಿಕ್ರಂ ಶ್ರೀನಿವಾಸ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ 94 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ದಾಖಲೆ ಬರೆದಿದೆ ಎಂದು ಸ್ವತಃ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ಥಮನ್​ ಸಂಗೀತ ನೀಡಿದ್ದಾರೆ. ಮಹೇಶ್ ಬಾಬು, ಶ್ರೀಲೀಲಾ ಜೊತೆ ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣನ್​ ಮುಂತಾದವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us