AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಿಚರ್ಡ್ ಆ್ಯಂಟನಿ ನ್ಯೂಕ್ಲಿಯರ್ ಬಾಂಬ್ ತರ ಬರುತ್ತೆ’; ಬಿಗ್ ಅಪ್​​ಡೇಟ್ ಕೊಟ್ಟ ಅಜನೀಶ್ ಲೋಕನಾಥ್

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ರಿಚರ್ಡ್ ಆ್ಯಂಟನಿ’ ಕುರಿತು ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಭಾರಿ ಅಪ್‌ಡೇಟ್ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ತೆರೆಗೆ ಬಂದಾಗ ಕೇವಲ ಚಿತ್ರವಾಗಿರದೆ, 'ನ್ಯೂಕ್ಲಿಯರ್ ಬಾಂಬ್' ನಂತೆ ಧೂಳೆಬ್ಬಿಸಲಿದೆ ಎಂದು ಅಜನೀಶ್ ವಿಶ್ವಾಸ ವ್ಯಕ್ತಪಡಿಸಿದ್ದು, ಶೂಟಿಂಗ್ ಆರಂಭಕ್ಕೆ ಇಡೀ ಚಿತ್ರತಂಡ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

‘ರಿಚರ್ಡ್ ಆ್ಯಂಟನಿ ನ್ಯೂಕ್ಲಿಯರ್ ಬಾಂಬ್ ತರ ಬರುತ್ತೆ’; ಬಿಗ್ ಅಪ್​​ಡೇಟ್ ಕೊಟ್ಟ ಅಜನೀಶ್ ಲೋಕನಾಥ್
ರಕ್ಷಿತಾ
ರಾಜೇಶ್ ದುಗ್ಗುಮನೆ
|

Updated on: Jul 14, 2026 | 1:12 PM

Share

ಮುಖ್ಯಾಂಶಗಳು

  • ನ್ಯೂಕ್ಲಿಯರ್ ಬಾಂಬ್‌ನಂತೆ ಬರಲಿದ್ದಾನೆ ರಿಚ್ಚಿ
  • ಶೂಟಿಂಗ್ ಆರಂಭಕ್ಕೆ ಮಾತ್ರ ಬಾಕಿ
  • ರಕ್ಷಿತ್ ಸಿನಿಮಾ ಬಗ್ಗೆ ಅಜನೀಶ್ ಲೋಕನಾಥ್ ಭಾರಿ ಭರವಸೆ

ಸ್ಯಾಂಡಲ್‌ವುಡ್‌ನ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಿಗ್ ಬಜೆಟ್ ಸಿನಿಮಾ ‘ರಿಚರ್ಡ್​ ಆ್ಯಂಟನಿ’ ಮೇಲೆ ಇಡೀ ಕರುನಾಡಿಗೆ ಭಾರಿ ನಿರೀಕ್ಷೆಯಿದೆ. ಚಿತ್ರ ಘೋಷಣೆಯಾಗಿ ಕೆಲವು ವರ್ಷಗಳು ಕಳೆದಿದ್ದರೂ ಯಾವುದೇ ಪ್ರಮುಖ ಅಪ್​​ಡೇಟ್ ಸಿಗದೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ಚಿತ್ರದ ಸಂಗೀತ ನಿರ್ದೇಶಕರಾದ ಬಿ. ಅಜನೀಶ್ ಲೋಕನಾಥ್ (Ajaneesh Lokanath) ‘ರಿಚರ್ಡ್ ಆ್ಯಂಟನಿ’ ಬಗ್ಗೆ ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ.

ಎಲ್ಲರೂ ರೆಡಿ ಇದ್ದೀವಿ, ಶೂಟಿಂಗ್ ಆರಂಭವಾಗಬೇಕಿದೆ

ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಮೇಲೆ ಮಾತನಾಡಿದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಚಿತ್ರದ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಅತ್ಯಂತ ಉತ್ಸಾಹದಿಂದ ಉತ್ತರಿಸಿದ ಅವರು ಚಿತ್ರದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡರು. ‘ರಿಚರ್ಡ್ ಆ್ಯಂಟನಿ ಚಿತ್ರಕ್ಕೆ ನಾನು ರೆಡಿಯಾಗಿದ್ದೀನಿ, ರಕ್ಷಿತ್ ಶೆಟ್ಟಿ ಅವರು ಕೂಡ ರೆಡಿಯಾಗಿದ್ದಾರೆ. ಅಭಿಮಾನಿಗಳೂ ಸೇರಿದಂತೆ ಚಿತ್ರತಂಡದ ಪ್ರತಿಯೊಬ್ಬರೂ ಸಜ್ಜಾಗಿದ್ದಾರೆ. ಈಗ ಕೇವಲ ಶೂಟಿಂಗ್ ಆರಂಭವಾಗುವುದು ಒಂದೇ ಬಾಕಿ ಉಳಿದಿದೆ’ ಎಂದು ಅಜನೀಶ್ ಲೋಕನಾಥ್ ತಿಳಿಸಿದರು.

ಇದನ್ನೂ ಓದಿ: ‘ಕಾಂತಾರ’ ಹಾಡಿನ ಟ್ಯೂನ್ ಕದ್ದಿದ್ದು ಎಂದವರಿಗೆ ಉತ್ತರ ಕೊಟ್ಟ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್

‘ನ್ಯೂಕ್ಲಿಯರ್ ಬಾಂಬ್’ ನಂತೆ ಬರಲಿದ್ದಾನೆ ರಿಚ್ಚಿ

ಚಿತ್ರದ ಔಟ್‌ಪುಟ್ ಹಾಗೂ ಕಥೆಯ ಮೇಲಿರುವ ಭರವಸೆಯ ಬಗ್ಗೆ ಮಾತನಾಡುತ್ತಾ, ‘ನನಗೆ ಒಂದು ವಿಷಯದಲ್ಲಿ ಭಾರಿ ನಂಬಿಕೆಯಿದೆ. ರಿಚರ್ಡ್ ಆ್ಯಂಟನಿ ಸಿನಿಮಾ ತೆರೆಗೆ ಬಂದಾಗ ಅದು ಕೇವಲ ಸಿನಿಮಾವಾಗಿರದೆ ಒಂದು ನ್ಯೂಕ್ಲಿಯರ್ ಬಾಂಬ್ ತರಹ ಧೂಳೆಬ್ಬಿಸಲಿದೆ. ಅಂತಹ ಒಂದು ದೊಡ್ಡ ಬ್ಯಾಂಗ್ ಹಾಗೂ ಅದ್ಭುತ ಕಲ್ಪನೆಯೊಂದಿಗೆ ರಕ್ಷಿತ್ ಶೆಟ್ಟಿ ಅವರು ಬರಲಿದ್ದಾರೆ’ ಎಂದು ಅಜನೀಶ್ ಹೇಳಿದರು.

ಚಿತ್ರದ ಪ್ರತಿಯೊಬ್ಬ ತಂತ್ರಜ್ಞರು ‘ರಿಚರ್ಡ್​ ಆ್ಯಂಟನಿ’ ಸಿನಿಮಾಗಾಗಿ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದು, ಆ ಕ್ಷಣಕ್ಕಾಗಿ ತಾವು ಕೂಡ ಕೌಂಟ್‌ಡೌನ್ ಆರಂಭಿಸಿರುವುದಾಗಿ ಅವರು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಅತ್ಯಂತ ಯಶಸ್ವಿ ಚಿತ್ರ ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರಿದ ಭಾಗವಾಗಿ ಈ ‘ರಿಚರ್ಡ್ ಆ್ಯಂಟನಿ’ ಮೂಡಿಬರಲಿದೆ.’ರಿಚ್ಚಿ’ ಎಂಬ ಐಕಾನಿಕ್ ಪಾತ್ರದ ಮೇಲೆ ಕಥೆ ಸಾಗಲಿದೆ. ಅಜನೀಶ್ ಅವರ ಈ ಮಾತುಗಳು ಸದ್ಯ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು