ಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ಶಕ್ತಿ ಇದೆಯಾ? ದೆವ್ವ ಇದೆಯಾ? ಹೀಗೊಂದು ಚರ್ಚೆಯನ್ನು ಹುಟ್ಟು ಹಾಕುವ ಕೆಲಸವನ್ನು ಶಮಂತ್ ಹೇಳಿಕೆ ಮಾಡಿದೆ. ಎರಡನೇ ಇನ್ನಿಂಗ್ಸ್ನ ಮೊದಲ ದಿನ ನಡೆದ ಭಯಾನಕ ಅನುಭವದ ಬಗ್ಗೆ ಶಮಂತ್ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ರೂಂ ಇದೆ. ಈ ಕ್ಯಾಪ್ಟನ್ ರೂಂನಲ್ಲಿ ಐಷಾರಾಮಿ ವ್ಯವಸ್ಥೆ ಇದೆ. ಅಲ್ಲಿಯ ಬೆಡ್ ಕೂಡ ವಿಶೇಷವಾಗಿದೆ. ಮನೆಯ ಕ್ಯಾಪ್ಟನ್ಗೆ ಸಿಗುವ ವಿಶೇಷ ಸವಲತ್ತುಗಳಲ್ಲಿ ಇದು ಕೂಡ ಒಂದು. ಕ್ಯಾಪ್ಟನ್ ಆಗಲು ಬಯಸೋಕೆ ಇದು ಕೂಡ ಒಂದು ಕಾರಣ. ಆದರೆ, ಕ್ಯಾಪ್ಟನ್ ಆದಷ್ಟು ದಿನ ಶಮಂತ್ಗೆ ಅಲ್ಲಿ ನಿದ್ದೇಯೆ ಬಂದಿಲ್ಲವಂತೆ.
ಮೊದಲ ದಿನದಂದು ಶಮಂತ್ ಹಾಗೂ ಪ್ರಿಯಾಂಕಾ ಮಾತನಾಡಿಕೊಂಡರು. ‘ನಾನು ಬೆಡ್ರೂಂಗೆ ಹೋದೆ. ರಘು ಭೂತ-ಕೋಲ ಎಂದು ಏನೋ ಹೇಳುತ್ತಿದ್ದರು. ಆಗ ಕ್ಯಾಪ್ಟನ್ ರೂಂನಲ್ಲಿ ವಿಚಿತ್ರ ಆಕೃತಿಯೊಂದು ಹಾದು ಹೋಯ್ತು. ನಾನು ಐದು ನಿಮಿಷ ತಲೆಕೆಡಿಸಿಕೊಂಡೆ. ಆದರೆ, ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ನಿಮಗೇ ಮೊದಲು ಹೇಳುತ್ತಿದ್ದೇನೆ. ನಾನು ಪ್ರ್ಯಾಂಕ್ ಮಾಡ್ತಿಲ್ಲ. ಈ ವಿಚಾರದಲ್ಲಿ ಪ್ರ್ಯಾಂಕ್’ ಮಾಡಬಾರದು’ ಎಂದು ಪ್ರಿಯಾಂಕಾಗೆ ಶಮಂತ್ ಹೇಳಿದರು.
‘ನಾನು ಕ್ಯಾಪ್ಟನ್ ಆದಾಗ ನಿದ್ದೆಯೇ ಮಾಡಿಲ್ಲ. ಅಲ್ಲಿ ಮಲಗಿದವರಿಗೆ ಯಾರಿಗೂ ನಿದ್ದೆ ಬರಲ್ಲ. ಎರಡು ವಾರ ಅಲ್ಲಿ ಹೇಗೆ ಕಳೆದೆನೋ ಗೊತ್ತಿಲ್ಲ. ಜಾಸ್ತಿ ಹೊತ್ತು ಅದರ ಬಗ್ಗೆ ಮಾತನಾಡಬಾರದು’ ಎಂದು ಮಾತುಕತೆ ಮುಗಿಸಿದರು ಶಮಂತ್.
ನಂತರ ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಜತೆ ಶಮಂತ್ ಚರ್ಚೆ ಮಾಡಿದರು. ಚಕ್ರವರ್ತಿ ಕೆಲವು ಸಾಧ್ಯತೆಗಳ ಬಗ್ಗೆ ಹೇಳಿದರೂ ಶಮಂತ್ಗೆ ಆ ಹೇಳಿಕೆ ತೃಪ್ತಿ ನೀಡಿಲ್ಲ. ನಂತರ ಅವರು ತಲೆಕೆಡಿಸಿಕೊಂಡು, ಬಿಗ್ ಬಾಸ್ ಎದುರೂ ಅದನ್ನು ಹೇಳಿಕೊಂಡರು.
ಇದನ್ನೂ ಓದಿ: Divya Uruduga: ಕೊವಿಡ್ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್ ಬಾಸ್ ಮನೆಯಲ್ಲಿ ಭಾವುಕ ನುಡಿ
150 ಜೊತೆ ಬಟ್ಟೆಯೊಂದಿಗೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್ ರಿಯಾಕ್ಷನ್ ಹೇಗಿತ್ತು?
Published On - 9:59 am, Fri, 25 June 21