AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದು ಯಶಸ್ಸಿನ ಬಳಿಕ ಆ ಹೀರೋಗೆ ಧಿಮಾಕು ಬಂದಿದೆ’: ಕಟುವಾಗಿ ಹೇಳಿದ ‘ಬಾಹುಬಲಿ’ ನಿರ್ಮಾಪಕ

Shobu Yarlagadda: ವಿವಾದಕ್ಕೆ ನಾಂದಿ ಹಾಡುವ ರೀತಿಯಲ್ಲಿ ಶೋಭು ಯರ್ಲಗಡ್ಡ ಟ್ವೀಟ್​ ಮಾಡಿದರು. ಅನೇಕರು ತಮ್ಮ ಮನಸ್ಸಿಗೆ ಬಂದಂತೆ ಕಮೆಂಟ್​ ಮಾಡಿದರು. ನಂತರ ಏನಾಯ್ತು?

‘ಒಂದು ಯಶಸ್ಸಿನ ಬಳಿಕ ಆ ಹೀರೋಗೆ ಧಿಮಾಕು ಬಂದಿದೆ’: ಕಟುವಾಗಿ ಹೇಳಿದ ‘ಬಾಹುಬಲಿ’ ನಿರ್ಮಾಪಕ
ಶೋಭು ಯರ್ಲಗಡ್ಡ
ಮದನ್​ ಕುಮಾರ್​
|

Updated on: Jul 31, 2023 | 8:54 PM

Share

ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜ. ಸೋತಾಗ ಕೆಲವರು ಕುಗ್ಗುತ್ತಾರೆ. ಗೆದ್ದಾಗ ಬೀಗುತ್ತಾರೆ. ಅದು ಕೂಡ ಸಹಜ. ಆದರೆ ಒಂದು ಯಶಸ್ಸು ಸಿಕ್ಕ ಮಾತ್ರಕ್ಕೆ ಅಹಂಕಾರ ತಲೆಗೆ ಏರಿಸಿಕೊಳ್ಳಬಾರದು. ಆ ರೀತಿ ವರ್ತಿಸಿದ ಓರ್ವ ಹೀರೋ ಬಗ್ಗೆ ಈಗ ಟಾಲಿವುಡ್​ (Tollywood) ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ದೊಡ್ಡ ಬಜೆಟ್​ನ ಸಿನಿಮಾಗಳು ನೆಲ ಕಚ್ಚುತ್ತಿರುವ ಈ ಕಾಲದಲ್ಲಿ ಸಣ್ಣ ಬಜೆಟ್​ನ ಕೆಲವು ಚಿತ್ರಗಳು ಗೆದ್ದಿವೆ. ಅಂಥ ಒಂದು ಸಿನಿಮಾದ ಹೀರೋಗೆ ಆ್ಯಟಿಟ್ಯೂಡ್​ ಬಂದಿದೆ ಎಂದು ‘ಬಾಹುಬಲಿ’ (Baahubali) ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ (Shobu Yarlagadda) ಅವರು ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದರು.

ಶೋಭು ಯರ್ಲಗಡ್ಡ ಕಾಂಟ್ರವರ್ಸಿ ಟ್ವೀಟ್​:

‘ಯಶಸ್ಸನ್ನು ತಲೆಗೆ ಏರಿಸಿಕೊಳ್ಳಬಹುದು ಅಥವಾ ಸರಿಯಾಗಿ ನಿಭಾಯಿಸಲೂಬಹುದು. ಇತ್ತೀಚೆಗೆ ಯಶಸ್ಸು ಪಡೆದ ಓರ್ವ ಉದಯೋನ್ಮುಖ ನಟ ಆ್ಯಟಿಟ್ಯೂಡ್​ ತೋರಿಸುತ್ತಿದ್ದೇನೆ. ಕಥೆ ಹೇಳಲು ಬಂದ ಹೊಸ ನಿರ್ದೇಶಕರಿಗೆ ಆತ ಕನಿಷ್ಠ ಗೌರವವನ್ನೂ ನೀಡಿಲ್ಲ. ಈ ವರ್ತನೆಯಿಂದ ತನ್ನ ವೃತ್ತಿಜೀವನಕ್ಕೆ ಒಳ್ಳೆಯದಾಗಲ್ಲ ಎಂಬುದು ಇಂದಲ್ಲ ನಾಳೆ ಅವನಿಗೆ ಅರ್ಥ ಆಗುತ್ತದೆ’ ಎಂದು ಶೋಭು ಯರ್ಲಗಡ್ಡ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: ‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ​ಸೇನ್ ಪ್ರತಿಕ್ರಿಯೆ

ಈ ಟ್ವೀಟ್​ನಲ್ಲಿ ಶೋಭು ಯರ್ಲಗಡ್ಡ ಅವರು ಯಾವುದೇ ನಟನ ಹೆಸರು ಪ್ರಸ್ತಾಪ ಮಾಡಿಲ್ಲ. ನಟ ವಿಶ್ವಕ್​ ಸೇನ್​ ಬಗ್ಗೆ ಅವರು ಹೇಳಿರಬಹುದು ಎಂದು ಕೆಲವರು ಊಹಿಸಿದರು. ಆದರೆ ಅವರು ತೀರಾ ಹೊಸ ನಟ ಅಲ್ಲ ಎಂಬ ಕಾರಣಕ್ಕೆ ಅವರ ಬಗ್ಗೆ ಹೇಳಿದ್ದಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು, ಕೆಲವೇ ದಿನಗಳ ಹಿಂದೆ ‘ಬೇಬಿ’ ಸಿನಿಮಾದ ಮೂಲಕ ಆನಂದ್​ ದೇವರಕೊಂಡ ಸಕ್ಸಸ್​ ಕಂಡಿದ್ದಾರೆ. ಅವರ ಬಗ್ಗೆ ಶೋಭು ಯರ್ಲಗಡ್ಡ ಅವರು ಟ್ವೀಟ್​ ಮಾಡಿರಬಹುದೇ ಎಂಬ ಅನುಮಾನ ಕೂಡ ಮೂಡಿದೆ.

ಇದನ್ನೂ ಓದಿ: Baby Movie Collection: ‘ಅರ್ಜುನ್​ ರೆಡ್ಡಿ’ ಚಿತ್ರದ ಲೈಫ್​ಟೈಮ್​ ಗಳಿಕೆ ಮೀರಿಸಿದ ‘ಬೇಬಿ’; ಅಣ್ಣನ ರೀತಿಯೇ ಮಿಂಚಿದ ಆನಂದ್​ ದೇವರಕೊಂಡ

ಆ ನಟ ಯಾರು ಎಂಬುದನ್ನು ಬಹಿರಂಗಪಡಿಸಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಅನೇಕರು ತಮ್ಮ ಮನಸ್ಸಿಗೆ ಬಂದಂತೆ ಕಮೆಂಟ್​ ಮಾಡಿದರು. ಇದು ದೊಡ್ಡ ವಿವಾದ ಆಗುವ ಸಾಧ್ಯತೆ ಇರುವ ಕಾರಣಕ್ಕೋ ಏನೋ ಶೋಭು ಯರ್ಲಗಡ್ಡ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದರು. ಅಷ್ಟುಹೊತ್ತಿಗಾಗಲೇ ಅದರ ಸ್ಕ್ರೀನ್​ ಶಾಟ್​ಗಳು ವೈರಲ್​ ಆದವು. ಅಂಥ ಆ್ಯಟಿಟ್ಯೂಡ್​ ತೋರಿಸಿದ ಉದಯೋನ್ಮುಖ ನಟ ಯಾರು ಎಂಬ ಪ್ರಶ್ನೆಯು ಸಿನಿಪ್ರಿಯರ ತಲೆಯಲ್ಲಿ ಈಗ ಕೊರೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು