AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ​ಸೇನ್ ಪ್ರತಿಕ್ರಿಯೆ

 ಸಾಯಿ ರಾಜೇಶ್​ಗೂ ನಟ ವಿಶ್ವಕ್ ಸೇನ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಇಬ್ಬರೂ ಪರೋಕ್ಷವಾಗಿ ತಿರುಗೇಟು ಕೊಟ್ಟುಕೊಳ್ಳುತ್ತಿದ್ದಾರೆ.

‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ​ಸೇನ್ ಪ್ರತಿಕ್ರಿಯೆ
ಬೇಬಿ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Jul 27, 2023 | 7:12 AM

Share

ಆನಂದ್ ದೇವರಕೊಂಡ ನಟನೆಯ ‘ಬೇಬಿ’ ಸಿನಿಮಾ (Baby Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಮೂಲಕ ಸಾಯಿ ರಾಜೇಶ್ ಅವರು ಗೆದ್ದು ಬೀಗಿದ್ದಾರೆ. ಈಗ  ಸಾಯಿ ರಾಜೇಶ್​ಗೂ ನಟ ವಿಶ್ವಕ್ ಸೇನ್ (Vishwak Sen) ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಇಬ್ಬರೂ ಪರೋಕ್ಷವಾಗಿ ತಿರುಗೇಟು ಕೊಟ್ಟುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಏನಿದು ವಿವಾದ? ಯಾರಿಂದ ಈ ವಿವಾದ ಶುರುವಾಯಿತು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಬೇಬಿ’ ಸಿನಿಮಾ ಸಕ್ಸಸ್ ಬಳಿಕ ಮಾತನಾಡಿದ್ದ ರಾಜೇಶ್, ‘ನಾನು ಕಥೆ ಹೇಳುತ್ತೇನೆ ಎಂದಾಗ ಯುವ ಹೀರೋ ನಿರಾಕರಿಸಿದ್ದರು’ ಎಂದು ಹೇಳಿಕೊಂಡಿದ್ದರು. ಇದು ವಿಶ್ವಕ್ ಸೇನ್ ಬಗ್ಗೆ ಆಡಿದ ಮಾತು ಎಂಬುದು ಅನೇಕರಿಗೆ ಗೊತ್ತಾಗಿತ್ತು. ಈ ವೇಳೆ ಟ್ವೀಟ್ ಮಾಡಿದ್ದ ವಿಶ್ವಕ್​, ‘ನೋ ಎಂದರೆ ನೋ. ಇದು ಪುರುಷರಿಗೂ ಅನ್ವಯ ಆಗುತ್ತದೆ. ಶಾಂತವಾಗಿರೋಣ ಮತ್ತು ಕೂಗುವುದನ್ನು ತಡೆಯೋಣ. ರಿಲ್ಯಾಕ್ಸ್ ಆಗೋಣ’ ಎಂದು ಬರೆದುಕೊಂಡಿದ್ದರು.

ಸಾಯಿ ರಾಜೇಶ್ ಕೂಡ ಟ್ವೀಟ್ ಮಾಡಿ, ‘ನಾನು ನಿಮ್ಮ ಟ್ವೀಟ್​ಗಳನ್ನು ಓದುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.  ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ವಿಶ್ವಕ್ ಸೇನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾವು ಏನು ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ಇದ್ದಾಗ ನಾವು ಇತರರ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಒಂದು ಗಂಟೆ ಕಥೆ ಕೇಳಿ ಆ ಬಳಿಕ ಇಲ್ಲ ಎಂದು ಹೇಳಲು ನನಗೆ ಇಷ್ಟವಿರಲಿಲ್ಲ. ಅದು ನನ್ನ ವೈಯಕ್ತಿಕ ಆಯ್ಕೆ. ಕೆಲವರು ಇದರ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದಾರೆ.  ನಿರೂಪಣೆಯನ್ನು ಕೇಳಲಿಲ್ಲ ಎಂದು ಟೀಕಿಸಲು ಪ್ರಾರಂಭಿಸಿದ್ದಾರೆ’ ಎಂದು ಪರೋಕ್ಷವಾಗಿ ಸಾಯಿ ರಾಜೇಶ್​ಗೆ ತಿರುಗೇಟು ನೀಡಿದ್ದಾರೆ ವಿಶ್ವಕ್​.

ಇದನ್ನೂ ಓದಿ: ವಿವಾದದಲ್ಲಿ ಅರ್ಜುನ್ ಸರ್ಜಾ ಸಿನಿಮಾ; ತಿರುಗೇಟು ಕೊಟ್ಟ ವಿಶ್ವಕ್ ಸೇನ್; ಹೊಸ ಹೀರೋಗೆ ಮಣೆ?

‘ಎಲ್ಲರನ್ನು ಸಂತೋಷಪಡಿಸಲು ನಾನು ಬಿರಿಯಾನಿ ಅಲ್ಲ. ಸಿನಿಮಾ ಹಿಟ್​ ಆದರೆ ಬೇರೆಯವರನ್ನು ಟೀಕಿಸುವ ಬದಲು ಸಕ್ಸಸ್​​ನ ಸಂಭ್ರಮಿಸಬೇಕು. ಒಂದು ಸಿನಿಮಾ ಯಶಸ್ವಿಯಾದರೆ ಇಂಡಸ್ಟ್ರಿಯಲ್ಲಿ ಎಲ್ಲರೂ ಖುಷಿ ಪಡುತ್ತಾರೆ. ಚಿತ್ರದ ಟ್ರೇಲರ್ ನೋಡಿದ ನಂತರ ಖುಷಿಪಟ್ಟವರಲ್ಲಿ ನಾನೂ ಒಬ್ಬ’ ಎಂದು ಹೇಳುವ ಮೂಲಕ ಅವರು ಯಾವುದೇ ಬೇಸರ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಾಯಿ ರಾಜೇಶ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ