ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?

ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆ ಸೇರಿದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಮನೆಯಲ್ಲಿ ಜಾಲಿಯಾಗಿರೋದು. ಈಗ ಅವರ ಕನಸಲ್ಲಿ ರಾಜಕುಮಾರನೋರ್ವ ಬಂದು ಕಾಡುತ್ತಿದ್ದಾನೆ.

ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?
ಶುಭಾ ಫೂಂಜಾ
Edited By:

Updated on: Mar 20, 2021 | 10:51 AM

ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆ ಸೇರಿದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಮನೆಯಲ್ಲಿ ಜಾಲಿಯಾಗಿರೋದು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶುಭಾ ಹಾಯಾಗಿರುತ್ತಾರೆ. ಈಗ ಶುಭಾಗೆ ಮನೆಯಲ್ಲಿ ಸಮಸ್ಯೆ ಒಂದು ಕಾಡುತ್ತಿದೆ. ಕನಸಲ್ಲಿ ರಾಜಕುಮಾರನೋರ್ವ ಬಂದು ಕಾಡುತ್ತಿದ್ದಾನೆ! ಈ ಬಗ್ಗೆ ಅವರು ತುಂಬಾನೇ ತಲೆಕೆಡಿಸಿಕೊಂಡಿದ್ದಾರೆ. ಮನೆ ಮಂದಿ ಜತೆಗೆಲ್ಲ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಶುಭಾ ಅವರಿಗೆ ನಿತ್ಯ ಕನಸಲ್ಲಿ ಅವರನ್ನು ಮದುವೆ ಆಗುವ ಹುಡುಗ ಸುಮಂತ್​ ಬರುತ್ತಿದ್ದಾರಂತೆ. ಈ ಬಗ್ಗೆ ಹೇಳಿಕೊಂಡಿರುವ ಅವರು, ನನಗೆ ನಿನ್ನೆ ಒಂದು ಕನಸು ಬಿದ್ದಿತ್ತು. ಆ ಕನಸಲ್ಲಿ ಸುಮಂತ್​ ಬಂದಿದ್ದರು. ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದರು. ಮನೆಯಲ್ಲಿ ಅವರನ್ನು ಸುತ್ತಾಡಿಸಿದ್ದೆ. ಆದರೆ, ನೋಡಿದ್ರೆ ಒಂದೇ ಕ್ಷಣಕ್ಕೆ ಅದು ಹಳ್ಳಿ ಮನೆಯಾಗಿಬಿಟ್ಟಿತ್ತು. ಎಲ್ಲಾ ಸ್ಪರ್ಧಿಗಳು ಸಣ್ಣ ಸಣ್ಣ ಗೂಡಲ್ಲಿ ಅಡಗಿ ಕೂತಿದ್ದರು ಎಂದು ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಮಂಜು ಪಾವಗಡ, ನಾವು ಯಾರನ್ನು ಹೆಚ್ಚು ನೆನಪಿಸಿಕೊಳ್ಳುತ್ತೇವೋ ಅವರೇ ಕನಸಲ್ಲಿ ಬರುತ್ತಾರೆ ಎಂದಿದ್ದಾರೆ.

ಇದಾದ ಸ್ವಲ್ಪ ಹೊತ್ತಿನ ನಂತರ ಮತ್ತೆ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ ಶುಭಾ. ನನಗೆ ಸುಮಂತ್​ ಕೆಲ ದಿನಗಳಿಂದ ಕನಸಲ್ಲಿ ಬರುತ್ತಿದ್ದಾರೆ. ಆದರೆ, ಕನಸಲ್ಲಿ ಅವರನ್ನು ತಲುಪೋಕೆ ಸಾಧ್ಯವಾಗುತ್ತಿಲ್ಲ. ಏಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ ಶುಭಾ. ಅವರು ಆರಾಮಾಗೇ ಇರುತ್ತಾರೆ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿಕೊಂಡಿದ್ದಾರೆ.

ಹಾಗೆಲ್ಲ ಮುಟ್ಬೇಡಿ ಅಂದ್ರು ವೈಷ್ಣವಿ
ವೈಷ್ಣವಿ ಮನೆಯಲ್ಲಿ ತುಂಬಾನೇ ಸೈಲೈಂಟ್​. ಅವರು ಬೇರೆಯವರ ಮೇಲೆ ರೇಗಾಡಿದ ಉದಾಹರಣೆ ಕಡಿಮೆ. ಅವರು, ಯಾರ ತಂಟೆಗೂ ಹೋದವರಲ್ಲ. ಈ ವಿಚಾರ ವೀಕೆಂಡ್​ನಲ್ಲಿ ಕೂಡ ಚರ್ಚೆಗೆ ಕಾರಣವಾಗಿದ್ದಿದೆ. ಈ ಮಧ್ಯೆ, ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಯಾರಿಗೆ? ಏಕೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ 19ನೇ ದಿನ. ಎಲ್ಲರೂ ಬೆಳಗ್ಗೆ ಎದ್ದು ಅವರವರ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ಶುಭಾ ಪೂಂಜಾ ಹಾಗೂ ವೈಷ್ಣವಿ ಒಟ್ಟಾಗಿ ಮಾತನಾಡುತ್ತಿದ್ದರು. ವೈಷ್ಣವಿ ಆಗತಾನೇ ಸ್ನಾನ ಮಾಡಿ ಬಂದಿದ್ದರಿಂದ ಅವರಿಗೆ ತೊಂದರೆ ಕೊಡೋ ಕೆಲಸ ಮಾಡುತ್ತಿದ್ದರು. ಈ ಕೀಟಲೆ ಮುಂದುವರಿದೇ ಇತ್ತು. ವೈಷ್ಣವಿ ಸಮೀಪ ಸೈಲೆಂಟ್​ ಆಗಿ ಬಂದ ಶುಭಾ ತುಂಬಾನೇ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ವರ್ಕೌಟ್​ ಆಗಲೇ ಇಲ್ಲ. ಏಕೆಂದರೆ, ವೈಷ್ಣವಿ ಅವರಿಗೆ ಅದು ತಾಗಲೇ ಇಲ್ಲ. ಆಗ, ವೈಷ್ಣವಿ ಹೀಗೆ ಮುಟ್ತಾ ಇದ್ರೆ ಕಚ್ಚಿ ಬಿಡುತ್ತೇನೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರ ಮುಚ್ಚಿಟ್ಟಿದ್ದ ವಿಶೇಷ ಪ್ರತಿಭೆಯನ್ನು ಹೊರ ಹಾಕಿದ ಶಮಂತ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us