ಸೈಮಾ 2023 (SIIMA 2023) ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಸೆಪ್ಟೆಂಬರ್ 15 ಹಾಗೂ 16ರಂದು ಅದ್ಧೂರಿಯಾಗಿ ನಡೆದಿದೆ. ಸೆಪ್ಟೆಂಬರ್ 15ರಂದು ಕನ್ನಡ, ತೆಲುಗು ಸಿನಿಮಾಗಳು, ನಟರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಕನ್ನಡದಲ್ಲಿ ಯಶ್ (Yash), ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸೇರಿದಂತೆ ಇನ್ನೂ ಹಲವು ಪ್ರಮುಖ ನಟ-ನಟಿಯರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 16ರಂದು ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಅತ್ಯುತ್ತಮ ನಟ-ನಟಿಯರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ತಮಿಳು ಚಿತ್ರರಂಗದಲ್ಲಿ ಈ ಬಾರಿ ಸೈಮಾ ಪ್ರಶಸ್ತಿ ಪಡೆದ ಸಿನಿಮಾ, ನಟರು, ತಂತ್ರಜ್ಞರ ಪಟ್ಟಿ ಇಲ್ಲಿದೆ.
ಅತ್ಯುತ್ತಮ ನಟ: ಕಮಲ್ ಹಾಸನ್ (ವಿಕ್ರಂ)
ಅತ್ಯುತ್ತಮ ನಟಿ: ತ್ರಿಷಾ ಕೃಷ್ಣನ್ (ಪೊನ್ನಿಯಿನ್ ಸೆಲ್ವನ್)
ಅತ್ಯುತ್ತಮ ಸಿನಿಮಾ: ಪೊನ್ನಿಯಿನ್ ಸೆಲ್ವನ್
ಅತ್ಯುತ್ತಮ ನಿರ್ದೇಶಕ: ಲೋಕೇಶ್ ಕನಗರಾಜ್ (ವಿಕ್ರಂ)
ಅತ್ಯುತ್ತಮ ಗಾಯಕ: ಕಮಲ್ ಹಾಸನ್ (ಪತ್ತಲ-ಪತ್ತಲ)
ಅತ್ಯುತ್ತಮ ಗಾಯಕಿ: ಜೋನಿತಾ ಗಾಂಧಿ (ಅರಬ್ ಕುತ್ತಿ-ಬೀಸ್ಟ್)
ಅತ್ಯುತ್ತಮ ಸಿನಿಮಾಟೊಗ್ರಾಫರ್: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್)
ಅತ್ಯುತ್ತಮ ವಿಲನ್: ಎಸ್ಜೆ ಸೂರ್ಯ (ಡಾನ್)
ಅತ್ಯುತ್ತಮ ಹೊಸ ನಟ: ಪ್ರದೀತ್ ರಂಗನಾಥನ್ (ಲವ್ ಟುಡೆ)
ಅತ್ಯುತ್ತಮ ಹೊಸ ನಿರ್ದೇಶಕ: ಮಾಧವನ್ (ರಾಕೆಟ್ರಿ)
ಅತ್ಯುತ್ತಮ ಹೊಸ ನಿರ್ಮಾಪಕ: ಗೌತಮ್ ರಾಮಚಂದ್ರನ್ (ಗಾರ್ಗಿ)
ಅತ್ಯುತ್ತಮ ಹೊಸ ನಟಿ: ಅದಿತಿ ಶಂಕರ್ (ವಿರುಮಾನ್)
ಅತ್ಯುತ್ತಮ ಸಂಗೀತ ನಿರ್ದೇಶಕ: ಅನಿರುದ್ಧ್ ರವಿಚಂದ್ರನ್ (ವಿಕ್ರಂ)
ಅತ್ಯುತ್ತಮ ನಟಿ (ಕ್ರಿಟಿಕ್ಸ್): ಕೀರ್ತಿ ಸುರೇಶ್ (ಸಾನಿ ಕೈದಂ)
ಅತ್ಯುತ್ತಮ ನಟ (ಕ್ರಿಟಿಕ್ಸ್): ಮಾಧವನ್ (ರಾಕೆಟ್ರಿ)
ಜೀವಮಾನ ಸಾಧನೆ: ಮಣಿರತ್ನಂ
ಅತ್ಯುತ್ತಮ ಕಲಾ ನಿರ್ದೇಶಕ: ತೋಟ ತರಣಿ (ಪೊನ್ನಿಯಿನ್ ಸೆಲ್ವನ್)
ಅತ್ಯುತ್ತಮ ಹಾಸ್ಯ ನಟ: ಯೋಗಿ ಬಾಬಿ (ಲವ್ ಟುಡೆ)
ಅತ್ಯುತ್ತಮ ಪೋಷಕ ನಟ: ಕಾಳಿ ವೆಂಕಟ್ (ಗಾರ್ಗಿ)
ಅತ್ಯುತ್ತಮ ಪೋಷಕ ನಟಿ: ವಾಸಂತಿ (ವಿಕ್ರಂ)
ಅತ್ಯುತ್ತಮ ಗೀತ ಸಾಹಿತಿ: ಇಳಾಂಗೋ ಕೃಷ್ಣನ್ (ಪೊನ್ನಿಯಿನ್ ಸೆಲ್ವನ್)
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ