ಮಹೇಶ್ ಬಾಬು ಕಾರಣಕ್ಕೆ ಶಾಲೆ ಬಂಕ್ ಮಾಡ್ತಾರೆ ಸಿತಾರಾ

ಸಿತಾರಾ ಘಟ್ಟಮನೇನಿ ಅವರ ಇತ್ತೀಚಿನ ಸಂದರ್ಶನ ವೈರಲ್ ಆಗಿದೆ. ಅದರಲ್ಲಿ, ತಮ್ಮ ತಂದೆ ಮಹೇಶ್ ಬಾಬು ಅವರು ತಮ್ಮ ಶಾಲೆಗೆ ಬಂಕ್ ಮಾಡಲು ಅನುಮತಿಸುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಮಹೇಶ್ ಬಾಬು ಮತ್ತು ಸಿತಾರಾ ನಡುವಿನ ಬಲವಾದ ಬಾಂಡಿಂಗ್ ಅನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ಮಹೇಶ್ ಬಾಬು ಕಾರಣಕ್ಕೆ ಶಾಲೆ ಬಂಕ್ ಮಾಡ್ತಾರೆ ಸಿತಾರಾ
ಮಹೇಶ್ ಬಾಬು-ಸಿತಾರಾ
Edited By:

Updated on: Apr 04, 2025 | 8:15 AM

ಸಿತಾರಾ ಘಟ್ಟಮನೇನಿಗೆ (Sitara Ghattamaneni) ಈಗಿನ್ನು 12 ವರ್ಷ ವಯಸ್ಸು. ಆಗಲೇ ಅವರು ಸುದ್ದಿಯಲ್ಲಿ ಇದ್ದಾರೆ. ಖ್ಯಾತ ಟಾಲಿವುಡ್ ನಟ ಮಹೇಶ್ ಬಾಬು ಮಗಳು ಎನ್ನುವ ಕಾರಣಕ್ಕೆ ಅನೇಕರ ಗಮನ ಅವರ ಮೇಲೆ ಇದೆ. ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡಿದ್ದೂ ಇದೆ. ಈಗ ಸಿತಾರಾ ಅವರ ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸ್ಕೂಲ್​ನ ಬಂಕ್ ಮಾಡಲು ತಂದೆ ಮಹೇಶ್ ಬಾಬು ಕಾರಣ ಎಂದು ವಿವರಿಸಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಸ್ಕೂಲ್ ಬಂಕ್ ಮಾಡಲು ಮಹೇಶ್ ಬಾಬು ಏಕೆ ಬೆಂಬಲಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

ಮಹೇಶ್ ಬಾಬು ಹಾಗೂ ಸಿತಾರಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಅವರಿಬ್ಬರೂ ಅಪ್ಪ-ಮಗಳು ಎಂಬ ರೀತಿಯಲ್ಲಿ ಇಲ್ಲ. ಇವರು ಹಳೆಯ ಕಾಲದ ಗೆಳೆಯರೇನೋ ಅನಿಸುತ್ತದೆ. ಈ ಕಾರಣಕ್ಕೆ ಅನೇಕ ಜಾಹೀರಾತುಗಳು ಮಹೇಶ್ ಬಾಬು ಹಾಗೂ ಸಿತಾರಾನ ಒಟ್ಟಿಗೆ ತಂದಿವೆ. ಇತ್ತೀಚೆಗೆ ಬಟ್ಟೆ ಬ್ರ್ಯಾಂಡ್ ಒಂದು ಇವರಿಬ್ಬರನ್ನು ಇಟ್ಟುಕೊಂಡು ಜಾಹೀರಾತು ಮಾಡಿತ್ತು. ಈಗ ತಂದೆ ಬಗ್ಗೆ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ
‘ಬಜರಂಗಿ ಭಾಯಿಜಾನ್’ ಆಫರ್ ಮೊದಲು ಹೋಗಿದ್ದು ಆಮಿರ್ ಬಳಿ
48ನೇ ವಯಸ್ಸಿಗೆ ತಂದೆಯಾದ ಖ್ಯಾತ ಹಾಸ್ಯ ನಟ; ಕಲಾವಿದನ ಬಾಳಲ್ಲಿ ಖುಷಿಯೋ ಖುಷಿ
ದೇವರ 2 ಚಿತ್ರದ ಶೂಟ್​ಗೆ ರೆಡಿ ಆಯ್ತು ಕುಮಟಾ; ಸಿದ್ಧವಾಗ್ತಿದೆ ಬೃಹತ್ ಸೆಟ್
ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವೇ ಹಾಳಾಯಿತು


‘ಅಮ್ಮಾ ತುಂಬಾನೇ ಸ್ಟ್ರಿಕ್ಟ್. ಅಪ್ಪ ಪ್ಯಾಂಪರ್ ಮಾಡ್ತಾರೆ. ರೂಲ್ಸ್ ಬ್ರೇಕ್ ಮಾಡಲು ಬಿಡ್ತಾರೆ. ನಾನು ಸ್ಕೂಲ್ ಬಂಕ್ ಮಾಡಲು ಕಾರಣ ಅಪ್ಪ. ಕೆಲಸ ಇಲ್ಲದಾಗ ಮನೆಯಲ್ಲೇ ಇರಲು ಕೋರುತ್ತಾರೆ. ನಾನು ಸ್ಕೂಲ್​ಗೆ ಬಂಕ್ ಮಾಡಿ ಮನೆಯಲ್ಲೇ ಇರುತ್ತೇನೆ. ನಾವಿಬ್ಬರೂ ಸಮಯ ಕಳೆಯುತ್ತೇವೆ’ ಎಂದು ಹೇಳಿದ್ದಾರೆ ಅವರು.

ಇದನ್ನೂ ಓದಿ: ಸಿತಾರಾ ಘಟ್ಟಮನೇನಿ ಸಿನಿಮಾ ರಂಗಕ್ಕೆ ಕಾಲಿಡೋದು ಯಾವಾಗ? ಉತ್ತರಿಸಿದ ತಾಯಿ ನಮ್ರತಾ 

ಸಿತಾರಾ ಇನ್ನೂ ಶಿಕ್ಷಣ ಪಡೆಯುತ್ತಾ ಇದ್ದಾರೆ. ಈ ಕಾರಣಕ್ಕೆ ಅವರು ಇಷ್ಟು ಬೇಗ ನಟನೆಗೆ ಬರುವುದಿಲ್ಲ ಎಂದು ತಾಯಿ ನಮ್ರತಾ ಹೇಳಿದ್ದರು. ‘ಮಗಳಿಗೆ ಇನ್ನೂ 12 ವರ್ಷ. ಆ ಬಗ್ಗೆ (ನಟನೆಗೆ ಕಾಲಿಡೋ ಬಗ್ಗೆ) ಯೋಚಿಸೋದಕ್ಕೆ ಇನ್ನೂ ಸಮಯ ಇದೆ’ ಎಂದು ನಮ್ರತಾ ವಿವರಿಸಿದ್ದರು. ಸಿತಾರಾ ಹಲವು ಜ್ಯುವೆಲರಿ ಜಾಹೀರಾತಲ್ಲಿ ನಟಿಸಿದ್ದಾರೆ. ಇದೂ ಅಲ್ಲದೆ, ಅವರ ‘ಸರ್ಕಾರು ವಾರಿ ಪಾಟ’ ಸಿನಿಮಾದ ಪ್ರೋಮೋ ಶೂಟ್​ನಲ್ಲಿ ಭಾಗಿ ಆಗಿದ್ದರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರೆ ಯಶಸ್ವಿ ನಟಿ ಆಗೋದು ಪಕ್ಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.