ಅಪ್ಸರೆಯಂತೆ ಕಾಣಿಸುತ್ತಿದ್ದಾರೆ ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ
ಮಹೇಶ್ ಬಾಬು ಅವರ ಮಗಳು ಸಿತಾರಾ ಘಟ್ಟಮನೇನಿ ಅವರ ಇತ್ತೀಚಿನ ಕಾರ್ಯಕ್ರಮದಲ್ಲಿನ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ಮೋಡಿ ಮಾಡಿದ ಸಿತಾರಾ, ತಮ್ಮ ಯೂಟ್ಯೂಬ್ ಚಾನೆಲ್ ಮತ್ತು "ಸರ್ಕಾರು ವಾರಿ ಪಾಟ" ಚಿತ್ರದ ಪ್ರಮೋಷನ್ ಮೂಲಕ ಚಿತ್ರರಂಗದೊಂದಿಗೆ ಸಂಪರ್ಕ ಹೊಂದಿದ್ದಾರೆ.

ಮಹೇಶ್ ಬಾಬು (Mahesh Babu) ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಬಗ್ಗೆ ಇರುವಷ್ಟೇ ಕ್ರೇಜ್ ಅವರ ಮಕ್ಕಳ ಮೇಲೂ ಇದೆ. ಹೌದು ಗೌತಮ್ ಹಾಗೂ ಸಿತಾರಾ ಘಟ್ಟಮನೇನಿ ಅವರ ಬಗ್ಗೆಯೂ ಭರ್ಜರಿ ಕ್ರೇಜ್ ಸೃಷ್ಟಿ ಆಗಿದೆ. ಈಗ ಸಿತಾರಾ ಅವರು ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾರೆ. ಈ ವೇಳೆ ಅವರು ಅಪ್ಸರೆಯಂತೆ ಕಾಣಿಸಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.
ಸಿತಾರಾ ಅವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಪರೋಕ್ಷವಾಗಿ ಆ್ಯಕ್ಟೀವ್ ಆಗಿದ್ದಾರೆ. ಹೌದು, ಮಹೇಶ್ ಬಾಬು ಕಾರಣಕ್ಕೆ ಸಿತಾರಾಗೆ ಚಿತ್ರರಂಗದ ಜೊತೆ ಒಡನಾಟ ಬೆಳೆದಿದೆ. ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರಲ್ಲಿ ಹಲವು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ಇನ್ನು, ಸಿತಾರಾ ಅವರು ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನಲ್ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.
ಸಿತಾರಾ ಘಟ್ಟಮನೇನಿ ಅವರು ಇತ್ತೀಚೆಗೆ ತಾಯಿ ನಮ್ರತಾ ಜೊತೆ ಬ್ರ್ಯಾಂಡ್ ಪ್ರಮೋಷನ್ ಒಂದಕ್ಕೆ ಬಂದಿದ್ದಾರೆ. ಈ ವೇಳೆ ಅವರು ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಸಿತಾರಾ ಅವರ ಬ್ಯೂಟಿಯನ್ನು ಮೆಚ್ಚಿದ್ದಾರೆ. ಇನ್ನೂ ಕೆಲವರು ಅವರನ್ನು ಶ್ರೀಲೀಲಾಗೆ ಹೋಲಿಕೆ ಮಾಡಿದ್ದು, ‘ಜೂನಿಯರ್ ಶ್ರೀಲೀಲಾ’ ಎಂದು ಕರೆದಿದ್ದಾರೆ.
View this post on Instagram
ಸಿತಾರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಕೇವಲ 13ನೇ ವಯಸ್ಸಿಗೆ ಬರೋಬ್ಬರಿ 21 ಲಕ್ಷ ಹಿಂಬಾಲಕರು ಇದ್ದಾರೆ. ಚಿತ್ರರಂಗಕ್ಕೆ ಕಾಲಿಡದೆ ಸಿತಾರಾ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರೋದು ವಿಶೇಷ. ಮುಂದಿನ ದಿನಗಳಲ್ಲಿ ಅವರಿಗೆ ಮತ್ತಷ್ಟು ದೊಡ್ಡ ಹಿಂಬಾಲಕರು ಸಿಗೋ ಸಾಧ್ಯತೆ ಇದೆ.
ಇದನ್ನೂ ಓದಿ: ಮಹೇಶ್ ಬಾಬುಗೆ ಜೆನ್-ಜಿ ಸ್ಲ್ಯಾಂಗ್ ಹೇಳಿಕೊಟ್ಟ ಸಿತಾರಾ; ಇಲ್ಲಿದೆ ಫನ್ ವಿಡಿಯೋ
ಮಹೇಶ್ ಬಾಬು ಸಿನಿಮಾ ವಿಚಾರಕ್ಕೆ ಬರೊದಾದರೆ ಅವರು ಎಸ್ಎಸ್ ರಾಜಮೌಳಿ ನಿರ್ದೇಶನದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:58 am, Mon, 31 March 25