ಮಹೇಶ್ ಬಾಬುಗೆ ಜೆನ್-ಜಿ ಸ್ಲ್ಯಾಂಗ್ ಹೇಳಿಕೊಟ್ಟ ಸಿತಾರಾ; ಇಲ್ಲಿದೆ ಫನ್ ವಿಡಿಯೋ
ಮಹೇಶ್ ಬಾಬು ಮತ್ತು ಅವರ ಮಗಳು ಸಿತಾರಾ ನಡುವಿನ ಜನರೇಶನ್ ಗ್ಯಾಪ್ ಅನ್ನು ಒಂದು ಮೋಜಿನ ಜಾಹೀರಾತಿನಲ್ಲಿ ತೋರಿಸಲಾಗಿದೆ. ಸಿತಾರಾ ತಮ್ಮ ತಂದೆಗೆ ಆಧುನಿಕ ಪದಗಳ ಅರ್ಥವನ್ನು ವಿವರಿಸುತ್ತಾ, ಬಟ್ಟೆ ಶೈಲಿಯಲ್ಲಿನ ವ್ಯತ್ಯಾಸಗಳನ್ನು ತೋರಿಸುತ್ತಾರೆ. ಈ ಜಾಹೀರಾತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮತ್ತು ತಂದೆ-ಮಗಳ ಅದ್ಭುತ ಬಾಂಧವ್ಯವನ್ನು ತೋರಿಸಿದೆ.

ಮಹೇಶ್ ಬಾಬು ಹಾಗೂ ಅವರ ಮಗಳ ಸಿತಾರಾ (Sitara Ghattamaneni) ಮಧ್ಯೆ ಜನರೇಶನ್ ಗ್ಯಾಪ್ ತುಂಬಾನೇ ಇದೆ. ಮಹೇಶ್ ಬಾಬು ಹೀರೋ ಆಗಿರಬಹುದು. ಅವರಿಗೆ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ವಿಚಾರಗಳೂ ತಿಳಿದಿರಬಹುದು. ಆದರೆ, ಜನರೇಶನ್ ಗ್ಯಾಪ್ ಇದ್ದೇ ಇದೆ. ಈಗಿನ ಜೆನ್-ಜಿ (2000ನೇ ಇಸ್ವಿ ಬಳಿಕ ಹುಟ್ಟಿದ ಜನರೇಶನ್) ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವೇ ಇಲ್ಲ. ಈಗ ಮಹೇಶ್ ಬಾಬು (Mahesh Babu) ಹಾಗೂ ಸಿತಾರಾ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಫನ್ ಆಗಿ ಮೂಡಿ ಬಂದಿದೆ.
ಮಹೇಶ್ ಬಾಬು ಹಾಗೂ ಸಿತಾರಾ ಈಗಾಗಲೇ ಸಾಕಷ್ಟು ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ‘ಸರ್ಕಾರಿ ವಾರು ಪಾಟ’ ಚಿತ್ರದ ಪ್ರೋಮೋ ಸಾಂಗ್ನಲ್ಲಿ ಮಹೇಶ್ ಬಾಬು ಹಾಗೂ ಸಿತಾರಾ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈಗ ಇವರು ಬಟ್ಟೆ ಬ್ರ್ಯಾಂಡ್ ಒಂದರ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ.
ಬಟ್ಟೆ ಜಾಹೀರಾತಿನಲ್ಲಿ ಜೆಂಜ್-ಜಿಗಳು ಬಳಕೆ ಮಾಡುವ ಶಬ್ದಗಳ ಅರ್ಥಗಳನ್ನು ಮಹೇಶ್ ಬಾಬುಗೆ ಸಿತಾರಾ ಹೇಳಿಕೊಟ್ಟಿದ್ದಾರೆ. ಬಟ್ಟೆ ಸ್ಟೈಲ್ನಲ್ಲಿಯೂ ಇಬ್ಬರ ಟೇಸ್ಟ್ಗಳು ಬೇರೆ ರೀತಿಯಲ್ಲೇ ಇವೆ ಎಂಬುದನ್ನು ಇದು ವಿವರಿಸುತ್ತದೆ. ಸದ್ಯ ಈ ಜಾಹೀರಾತು ಹಿಟ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾತೆ. ತಂದೆ-ಮಗಳ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಮಹೇಶ್ ಬಾಬು ಹಾಗೂ ಸಿತಾರಾ ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಬಹುದಿನಗಳ ಬಯಕೆಗಳಲ್ಲಿ ಒಂದಾಗಿದೆ. ಮುಂದಿನ ವರ್ಷಗಳಲ್ಲಿ ಮಹೇಶ್ ಬಾಬು ಮಗಳ ಪಾತ್ರದಲ್ಲಿ ನಟಿಸೋ ಅವಕಾಶ ಅವರಿಗೆ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಿತಾರಾ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಗಮನ ಸೆಳೆದರು. ಈ ಮೊದಲು ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿದ, ಅದರ ಮೂಲಕ ಅನೇಕ ಸೆಲೆಬ್ರಿಟಿಗಳ ಸಂದರ್ಶನ ಮಾಡಿದರು. ಇಷ್ಟೇ ಅಲ್ಲ, ಸಣ್ಣ ವಯಸ್ಸಿಗೆ ಜ್ಯುವೆಲರಿ ಜಾಹೀರಾತು ಮಾಡಿ ಅದರಿಂದ ಬಂದ ಹಣವನ್ನು ಚ್ಯಾರಿಟಿಗೆ ನೀಡಿದರು.
ಇದನ್ನೂ ಓದಿ: ಮಹೇಶ್ ಬಾಬು ಪುತ್ರ ಗೌತಮ್ ಘಟ್ಟಮನೇನಿ ನಟಿಸಿದ ಮೊದಲ ವಿಡಿಯೋ ವೈರಲ್
ಮಹೇಶ್ ಬಾಬು ‘ಎಸ್ಎಸ್ಎಂಬಿ 29’ ಸಿನಿಮಾದಲ್ಲಿ ನಟಿಸಿದ್ದಾರೆ. ಎಸ್ಎಸ್ ರಾಜಮೌಳಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.