ಸೈಟ್ ಒತ್ತುವರಿ ಪ್ರಕರಣ: ನ್ಯಾಯಾಲಯದಲ್ಲಿ ಯಶ್ ತಾಯಿಗೆ ಹಿನ್ನಡೆ

Yash mother Pushpa: ಹಾಸನದಲ್ಲಿ ಯಶ್ ಅವರ ತಾಯಿ ಪುಷ್ಪ ಅವರಿಗೆ ಸೇರಿದ ಮನೆಗೆ ಹೊಂದಿಕೊಂಡಂತೆ 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆ ಕಾಂಪೌಂಡ್ ಅನ್ನು ದೇವರಾಜು ಎಂಬುವರು ಜೆಸಿಬಿ ಬಳಸಿ ಒಡೆದು ಹಾಕಿದ್ದರು. ಆದರೆ ಇದನ್ನು ಯಶ್ ತಾಯಿ ಖಂಡಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಹ ನೀಡಿದ್ದರು. ವಕೀಲರ ಸಹಾಯದಿಂದ ನ್ಯಾಯಾಲಯದಲ್ಲಿ ದಾವೆ ಸಹ ಹೂಡಿದ್ದರು. ಆದರೆ ಇದೀಗ ನ್ಯಾಯಾಲಯದಲ್ಲಿ ಪುಷ್ಪ ಅವರಿಗೆ ಹಿನ್ನಡೆ ಆಗಿದೆ.

ಸೈಟ್ ಒತ್ತುವರಿ ಪ್ರಕರಣ: ನ್ಯಾಯಾಲಯದಲ್ಲಿ ಯಶ್ ತಾಯಿಗೆ ಹಿನ್ನಡೆ
Yash Mother

Updated on: Jan 15, 2026 | 1:44 PM

ನಟ ಯಶ್ (Yash) ಅವರ ತಾಯಿ ಅವರಿಗೆ ಸೇರಿದ್ದು ಎನ್ನಲಾಗಿದ್ದ ಸೈಟಿಗೆ ಕಟ್ಟಲಾಗಿದ್ದ ಕಾಂಪೌಂಡ್ ಅನ್ನು ಒಡೆದುಹಾಕಿದ್ದು ಇತ್ತೀಚೆಗೆ ಸುದ್ದಿ ಆಗಿತ್ತು. ಹಾಸನದಲ್ಲಿ ಯಶ್ ಅವರ ತಾಯಿ ಪುಷ್ಪ ಅವರಿಗೆ ಸೇರಿದ ಮನೆಗೆ ಹೊಂದಿಕೊಂಡಂತೆ 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆ ಕಾಂಪೌಂಡ್ ಅನ್ನು ದೇವರಾಜು ಎಂಬುವರು ಜೆಸಿಬಿ ಬಳಸಿ ಒಡೆದು ಹಾಕಿದ್ದರು. ಆದರೆ ಇದನ್ನು ಯಶ್ ತಾಯಿ ಖಂಡಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಹ ನೀಡಿದ್ದರು. ವಕೀಲರ ಸಹಾಯದಿಂದ ನ್ಯಾಯಾಲಯದಲ್ಲಿ ದಾವೆ ಸಹ ಹೂಡಿದ್ದರು. ಆದರೆ ಇದೀಗ ನ್ಯಾಯಾಲಯದಲ್ಲಿ ಪುಷ್ಪ ಅವರಿಗೆ ಹಿನ್ನಡೆ ಆಗಿದೆ.

ಯಶ್ ತಾಯಿ ಪುಷ್ಪ ಮತ್ತು ನಟರಾಜ್ ಎಂಬುವರು ದೇವರಾಜ್ ಅವರ ವಿರುದ್ಧ ಹಾಸನದ ನಾಲ್ಕನೇ ಜೆಎಂಎಫ್​​ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪುಷ್ಪ ಅವರು, ಸೈಟಿನ ಪ್ರಕರಣದಲ್ಲಿ ಈ ಹಿಂದೆ ನೀಡಿರುವ ಆದೇಶಕ್ಕೆ ತಡೆ ನೀಡುವುದು ಹಾಗೂ ದೇವರಾಜುಗೆ ನೊಟೀಸ್ ನೀಡುವ ಮೊದಲು ಪ್ರತಿಬಂಧಕಾಜ್ಞೆ ನೀಡುವಂತೆ ಬೇಡಿಕೆ ಇರಿಸಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ನಟರಾಜು ಎಂಬುವರು ಸಹ ದೇವರಾಜುಗೆ ಈ ಹಿಂದೆ ನೀಡಲಾಗಿರುವ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿದ್ದರು. ಆದರೆ ಈ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

ಇದನ್ನೂ ಓದಿ:ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು

ಯಶ್ ಅವರ ತಾಯಿ ಹೇಳಿರುವಂತೆ ಕೆಲವು ವರ್ಷಗಳ ಹಿಂದೆ ಗಿರೀಶ್ ಎಂಬುವರಿಂದ ಹಾಸನದ ವಿದ್ಯಾನಗರದಲ್ಲಿರುವ ಸರ್ವೆ ನಂಬರ್ 90ರ 125*45 ಅಡಿ ಅಳತೆಯ ಸೈಟನ್ನು ಖರೀದಿಸಿದ್ದರಂತೆ. ಅದರ ಬಂದೋಬಸ್ತಿಗೆ ಕಾಂಪೌಂಡ್ ಹಾಕಿದ್ದರು. ಆದರೆ ದೇವರಾಜ್ ಅಕ್ರಮವಾಗಿ ತಮ್ಮ ಕಾಂಪೌಂಡ್ ಒಡೆದು ಸೈಟನ್ನು ವಶಕ್ಕೆ ಪಡೆದಿದ್ದು, ಸೈಟ್​​ನಲ್ಲಿ ಬೋರ್ಡ್ ಸಹ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಯಶ್​ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಯಶ್ ತಾಯಿ ಆರೋಪಿಸಿದ್ದರು.

ಆದರೆ ದೇವರಾಜ್ ಅವರು ಹೇಳಿರುವಂತೆ ಮೈಸೂರಿನ ನಿವಾಸಿ ಲಕ್ಷ್ಮಮ್ಮ ಎಂಬುವರಿಂದ ದೇವರಾಜ್ ಅವರು ಕೆಲ ವರ್ಷಗಳ ಹಿಂದೆ ಸೈಟನ್ನು ಜಿಪಿಎ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಆ ಸೈಟು ತಮ್ಮದು ಎಂಬುದನ್ನು ನ್ಯಾಯಾಲಯ ಸಹ ಒಪ್ಪಿಕೊಂಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ತಾವು ಕಾಂಪೌಂಡ್ ಅನ್ನು ತೆರವುಗೊಳಿಸಿದ್ದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಸೈಟಿನ ವಿಚಾರವಾಗಿ ಪುಷ್ಪ ಕಡೆಯವರು ತಮಗೆ ಜೀವ ಬೆದರಿಕೆ ಹಾಕಿರುವುದಾಗಿ ಸಹ ಆರೋಪಿಸಿದ್ದರು.

ಇದೀಗ ನಾಲ್ಕನೇ ಜೆಎಂಎಫ್​​ಸಿ ನ್ಯಾಯಾಲಯವು ದೇವರಾಜ್​​ಗೆ ನೊಟೀಸ್ ಮಾತ್ರವೇ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜನವರಿ 31ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ