Sobhita Dhulipala: ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೆಸರು ಎತ್ತಿದ್ದಕ್ಕೆ ಮಧ್ಯ ಬೆರಳು ತೋರಿಸಿ ಗರಂ ಆದ ಶೋಭಿತಾ?

| Updated By: ಮದನ್​ ಕುಮಾರ್​

Updated on: Jun 28, 2022 | 9:52 AM

Sobhita Dhulipala Viral Video: ಸದ್ಯ ಇಂಟರ್​ನೆಟ್​ನಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಮೊದಲು ನಯವಾಗಿ ನಗು ಚೆಲ್ಲಿದ ಶೋಭಿತಾ ಧುಲಿಪಾಲಾ ಅವರು ನಂತರ ಸಿಟ್ಟು ಮುಖ ಮಾಡಿಕೊಂಡು ಮಧ್ಯ ಬೆರಳು ತೋರಿಸಿದ್ದಾರೆ!

Sobhita Dhulipala: ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೆಸರು ಎತ್ತಿದ್ದಕ್ಕೆ ಮಧ್ಯ ಬೆರಳು ತೋರಿಸಿ ಗರಂ ಆದ ಶೋಭಿತಾ?
ಶೋಭಿತಾ, ನಾಗ ಚೈತನ್ಯ
Follow us on

ನಟಿ ಸಮಂತಾ ರುತ್​ ಪ್ರಭು ಮತ್ತು ನಟ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಅವರ ಸಂಸಾರದಲ್ಲಿ ಯಾವಾಗ ಬಿರುಕು ಮೂಡಿತೋ ಆಗಿನಿಂದಲೇ ಅನೇಕ ಗಾಸಿ​ಪ್​ಗಳು ಹುಟ್ಟಿಕೊಂಡವು. ಸಮಂತಾ (Samanth Ruth Prabhu) ಮತ್ತು ನಾಗಚೈತನ್ಯ ಈಗಾಗಲೇ ಡಿವೋರ್ಸ್​ ಪಡೆದು ಹಲವು ತಿಂಗಳುಗಳೇ ಕಳೆದಿವೆ. ಹಾಗಿದ್ದರೂ ಕೂಡ ಗಾಸಿಪ್​ಗಳು ಕೇಳಿಬರುವುದು ನಿಂತಿಲ್ಲ. ಈಗ ನಾಗ ಚೈತನ್ಯ ಅವರು ಯಾರ ಜೊತೆ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ವಿಷಯವೇ ಹಾಟ್​ ಟಾಪಿಕ್​ ಆಗಿದೆ. ಇತ್ತೀಚಿನ ದಿನಗಳಲ್ಲಿ ಅವರು ನಟಿ ಶೋಭಿತಾ ಧುಲಿಪಾಲಾ (Sobhita Dhulipala) ಜತೆ ತಿರುಗಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ನಾಗ ಚೈತನ್ಯ ಅವರಾಗಲೀ ಶೋಭಿತಾ ಅವರಾಗಲೀ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಶೋಭಿತಾ ಅವರು ಮಧ್ಯ ಬೆರಳು ತೋರಿಸಿರುವ ವಿಡಿಯೋ ವೈರಲ್​ ಆಗಿದೆ.

ಶೋಭಿತಾ ಧುಲಿಪಾಲಾ ಅವರು 2016ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವೆಬ್​ ಸಿರೀಸ್​ ಲೋಕದಲ್ಲೂ ಅವರಿಗೆ ಬೇಡಿಕೆ ಇದೆ. ಕೈಯಲ್ಲಿ ಹಲವು ಆಫರ್​ಗಳನ್ನು ಇಟ್ಟುಕೊಂಡು ಅವರು ಬ್ಯುಸಿ ಆಗಿದ್ದಾರೆ. ಈ ಸಂದರ್ಭದಲ್ಲಿ ನಟ ನಾಗ ಚೈತನ್ಯ ಜೊತೆ ತಮ್ಮ ಹೆಸರು ತಳುಕು ಹಾಕಿಕೊಂಡಿರುವುದಕ್ಕೆ ಶೋಭಿತಾ ಧುಲಿಪಾಲಾ ಗರಂ ಆದಂತಿದೆ.

ಇದನ್ನೂ ಓದಿ
ಆಮಿರ್​ ಖಾನ್​ ಮೇಲೆ ನಾಗ ಚೈತನ್ಯ ಫ್ಯಾನ್ಸ್​ ಬೇಸರ; ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​ನಿಂದ ನಿರಾಸೆ
ವೃತ್ತಿಜೀವನದಲ್ಲೂ ಮಾಜಿ ಗಂಡನಿಗೆ ಎದುರಾಳಿಯಾಗಿ ನಿಂತ ಸಮಂತಾ; ನಾಗ ಚೈತನ್ಯ ಚಿತ್ರಕ್ಕೆ ‘ಯಶೋದ’ ಫೈಟ್​
3 ವರ್ಷದ ಹಿಂದಿನ ಘಟನೆ ನೆನೆದು ಖುಷಿಪಟ್ಟ ಸಮಂತಾ; ಇದು ಮಾಜಿ ಪತಿ ನಾಗ ಚೈತನ್ಯ ಕುರಿತ ವಿಷಯ
ವಿದೇಶದಲ್ಲಿ ಹಣ ಉಳಿಸಲು ಇಂಥ ಕೆಲಸ ಮಾಡಿದ್ರಾ​ ನಾಗ ಚೈತನ್ಯ-ರಾಶಿ ಖನ್ನಾ? ಇದು ಟಾಲಿವುಡ್​ ಗಾಸಿಪ್​

ಸದ್ಯ ಇಂಟರ್​ನೆಟ್​ನಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಮೊದಲು ನಯವಾಗಿ ನಗು ಚೆಲ್ಲುವ ಶೋಭಿತಾ ಅವರು ನಂತರ ಸಿಟ್ಟು ಮುಖ ಮಾಡಿಕೊಂಡು ಮಧ್ಯ ಬೆರಳು ತೋರಿಸುತ್ತಾರೆ. ತಮ್ಮ ಬಗ್ಗೆ ಗಾಸಿಪ್​ ಹಬ್ಬಿಸುವವರಿಗಾಗಿಯೇ ಅವರು ಈ ರೀತಿ ಅಶ್ಲೀಲ ಸನ್ನೆ ತೋರಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಡಿಯೋವನ್ನು ಶೋಭಿತಾ ಧುಲಿಪಾಲಾ ಅವರು ತಮ್ಮ ಯಾವುದೇ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಂಡಿಲ್ಲ. ಕೆಲವರು ಹೇಳುವ ಪ್ರಕಾರ ಇದು ಅವರ ಹಳೇ ವಿಡಿಯೋ. ಈಗ ಬೇಕಂತಲೇ ಯಾರೋ ವೈರಲ್​ ಮಾಡಿದ್ದಾರೆ ಎನ್ನಲಾಗಿದೆ. ಇದರ ಹಿಂದಿನ ಕಹಾನಿ ಏನು ಎಂಬುದನ್ನು ಸ್ವತಃ ಶೋಭಿತಾ ಅವರೇ ತಿಳಿಸಬೇಕಿದೆ. ಡೇಟಿಂಗ್​ ಗಾಸಿಪ್​ ಬಗ್ಗೆ ನಾಗ ಚೈತನ್ಯ ಅವರಿಂದಲಾದರೂ ಪ್ರತಿಕ್ರಿಯೆ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಸಮಂತಾ

ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್​ನಲ್ಲಿ ಆಗುತ್ತಿತ್ತು ಭೇಟಿ

Published On - 9:45 am, Tue, 28 June 22