ವಿವಿಧ ರಾಜ್ಯಗಳಿಗೆ ತೆರಳಿ ಮದುವೆ ಶಾಪಿಂಗ್ ಮಾಡುತ್ತಿದ್ದಾರೆ ಶೋಭಿತಾ

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಅವರ ಮದುವೆ ಶೀಘ್ರವೇ ನಡೆಯಲಿದ್ದು, ಮದುವೆಯಾಗಿ ಶೋಭಿತಾ ತಯಾರಿ ಆರಂಭಿಸಿದ್ದಾರೆ. ಮದುವೆಗಾಗಿ ಶಾಪಿಂಗ್ ಆರಂಭಿಸಿದ್ದಾರೆ ಶೋಭಿತಾ, ವಸ್ತ್ರ ವಿನ್ಯಾಸಕರು ವಿನ್ಯಾಸ ಮಾಡಿದ ಉಡುಗೆಯ ಬದಲಿಗೆ ತಾವೇ ಖರೀದಿಸಿದ ಉಡುಗೆ ಧರಿಸಲಿದ್ದಾರೆ ಶೋಭಿತಾ.

ವಿವಿಧ ರಾಜ್ಯಗಳಿಗೆ ತೆರಳಿ ಮದುವೆ ಶಾಪಿಂಗ್ ಮಾಡುತ್ತಿದ್ದಾರೆ ಶೋಭಿತಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 15, 2024 | 5:07 PM

ಶೋಭಿತಾ ಧುಲಿಪಾಲ್ ಅವರು ಶೀಘ್ರವೇ ನಾಗ ಚೈತನ್ಯ ಅವರನ್ನು ವರಿಸಲಿದ್ದಾರೆ. ಈ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಮುಂದಿನ ತಿಂಗಳು ಈ ವಿವಾಹ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕುಟುಂಬದಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಮದುವೆಯಲ್ಲಿ ಶೋಭಿತಾ ಅವರು ಸಖತ್ ಟ್ರೆಡಿಷಿನಲ್ ಆಗಿ ಕಾಣಿಸಿಕೊಳ್ಳುವ ಪ್ಲ್ಯಾನ್​ನಲ್ಲಿ ಇದ್ದಾರೆ. ಇದಕ್ಕಾಗಿ ಶೋಭಿತಾ ಅವರು ಶಾಪಿಂಗ್ ಆರಂಭಿಸಿದ್ದಾರೆ.

ಶೋಭಿತಾ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಮದುವೆಯಲ್ಲಿ ಸೀರೆಯಲ್ಲಿ ಮಿಂಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಅವರು ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಶೋಭಿತಾ ತಾಯಿ ಕೂಡ ಸಾಥ್ ನೀಡಿದ್ದಾರೆ. ಅಗತ್ಯ ಇರುವ ವಸ್ತುಗಳ ಖರೀದಿ ಜೋರಾಗಿದೆ.

ಮದುವೆ ಎಂದಾಗ ದೊಡ್ಡ-ದೊಡ್ಡ ಕಲ್ಯಾಣ ಮಂಟಪ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದರೆ, ಶೋಭಿತಾ ಹಾಗೂ ನಾಗ ಚೈತನ್ಯ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಒಡೆತನದಲ್ಲಿ ಇರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಮದುವೆ ನಡೆಯಲಿದೆ. ಈಗಾಗಲೇ ಮದುವೆಗೆ ಆಮಂತ್ರಣಪತ್ರ ನೀಡುವ ಕೆಲಸವನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ:ನಾಗ ಚೈತನ್ಯ-ಶೋಭೀತಾ ಬಗ್ಗೆ ಭವಿಷ್ಯ ನುಡಿದು ಇಕ್ಕಟ್ಟಿಗೆ ಸಿಲುಕಿದ ಸೆಲೆಬ್ರಿಟಿ ಜ್ಯೋತಿಷಿ

ನಾಗ ಚೈತನ್ಯ ಹಾಗೂ ಸಮಂತಾ ಅವರು ನಾಲ್ಕು ವರ್ಷಗಳ ಕಾಲ ದಾಂಪತ್ಯ ನಡೆಸಿದರು. ಆದರೆ, ಇವರ ಸಂಬಂಧ ಹೆಚ್ಚು ಸಮಯ ಇರಲಿಲ್ಲ. ಆ ಬಳಿಕ ನಾಗ ಚೈತನ್ಯ ವಿಚ್ಛೇದನ ಪಡೆದರು. ಆ ಬಳಿಕ ಶೋಭಿತಾ ಅವರು ಆಗಾಗ ನಾಗ ಚೈತನ್ಯ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಇವರ ಸಂಬಂಧ ಗುಟ್ಟಾಗಿಯೇ ಇತ್ತು. ಈಗ ಕೊನೆಗೂ ಇವರ ಸಂಬಂಧ ಬಗ್ಗೆ ಓಪನ್ ಆಗಿ ಮಾತನಾಡಿದರು. ಆಗಸ್ಟ್ ತಿಂಗಳಲ್ಲಿ ಇವರು ನಿಶ್ಚಿತಾರ್ಥ ಮಾಡಿಕೊಂಡರು.

ನಾಗ ಚೈತನ್ಯ ಮದುವೆ ಆಗುತ್ತಿರುವ ಬಗ್ಗೆ ಸಮಂತಾ ಫ್ಯಾನ್ಸ್​ಗೆ ಬೇಸರ ಇದೆ. ನಾಗ ಚೈತನ್ಯ ಮದುವೆ ಬಗ್ಗೆ ಸಮಂತಾ ಈವರೆಗೆ ಓಪನ್ ಆಗಿ ಮಾತನಾಡಿಲ್ಲ. ಈ ವಿಚಾರದಲ್ಲಿ ಅವರು ಮೌನ ವಹಿಸಿದ್ದಾರೆ. ಮದುವೆ ಆದ ಬಳಿಕ ಈ ಬಗ್ಗೆ ಸಮಂತಾ ಅವರು ಮಾತನಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್