ಮಗನಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಲು ಮುಂದಾದ ಸೋನು; ಒಂದು ತಪ್ಪೇ ಇದಕ್ಕೆ ಕಾರಣ
ಸೋನು ನಿಗಮ್ ಮಗನ ಹೆಸರು ನೀವನ್. 2012ರಲ್ಲಿ ನೀವನ್ಗೆ ನಾಲ್ಕು ವರ್ಷ. ಆಗ ‘ಕೊಲವೆರಿ ಡಿ..’ ಹಾಡನ್ನು ತಮ್ಮದೇ ವರ್ಷನ್ನಲ್ಲಿ ಹಾಡುವ ಮೂಲಕ ಅವನು ಎಲ್ಲರ ಗಮನ ಸೆಳೆದಿದ್ದ. ಈ ಮೂಲಕ ಅವನು ಸೆನ್ಸೇಷನ್ ಹುಟ್ಟು ಹಾಕಿದ್ದ.

ಸೆಲೆಬ್ರಿಟಿಗಳ ಮಕ್ಕಳು ಎಂದರೆ ಮಾಧ್ಯಮಗಳಲ್ಲಿ ಹೈಲೈಟ್ ಆಗುತ್ತಾರೆ. ಇವರ ಮಕ್ಕಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಭಿಮಾನಿಗಳು ಸೆಲೆಬ್ರಿಟಿಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಅವರಿಗೂ ನೀಡುತ್ತಾರೆ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಸೋಶಿಯಲ್ ಮೀಡಿಯಾದಿಂದ ಆದಷ್ಟು ದೂರ ಇಡಲು ಬಯಸುತ್ತಾರೆ. ಅವರಿಗೆ ಹೈಪ್ ಸಿಗದಿರಲಿ ಎನ್ನುವ ಬಗ್ಗೆ ಎಚ್ಚರಿಕೆ ವಹಿಸುತ್ತಾರೆ. ಈಗ ನಟ ಸೋನು ನಿಗಮ್ ತಮ್ಮ ಮಗನನ್ನು ವಿದೇಶಕ್ಕೆ ಕಳಿಸೋಕೆ ನಿರ್ಧರಿಸಿದ್ದಾರೆ. ಇದರ ಹಿಂದೆ ಒಂದು ಬಲವಾದ ಕಾರಣ ಇದೆ.
ಸೋನು ನಿಗಮ್ ಮಗನ ಹೆಸರು ನೀವನ್. 2012ರಲ್ಲಿ ನೀವನ್ಗೆ ನಾಲ್ಕು ವರ್ಷ. ಆಗ ‘ಕೊಲವೆರಿ ಡಿ..’ ಹಾಡನ್ನು ತಮ್ಮದೇ ವರ್ಷನ್ನಲ್ಲಿ ಹಾಡುವ ಮೂಲಕ ಅವನು ಎಲ್ಲರ ಗಮನ ಸೆಳೆದಿದ್ದ. ಈ ಮೂಲಕ ಅವನು ಸೆನ್ಸೇಷನ್ ಹುಟ್ಟು ಹಾಕಿದ್ದ. ಇದು ಸೋನು ನಿಗಮ್ಗೆ ಈಗ ಸಮಸ್ಯೆ ಆಗಿದೆ. ಸೆಲೆಬ್ರಿಟಿ ಮಗ ಎನ್ನುವ ಕಾರಣಕ್ಕೆ ಅವನಿಗೆ ವಿಶೇಷ ಆತಿಥ್ಯ ನೀಡಲಾಗುತ್ತದೆ. ಇದು ಆಗಬಾರದು ಎನ್ನುವುದು ಸೋನು ಆಶಯ.
‘ಪ್ರತಿ ಪಾರ್ಟಿಯಲ್ಲಿ ನಾನು ನನ್ನ ಮಗುವನ್ನು ಪರಿಚಯಿಸಲು ಬಯಸಿದರೆ ಮತ್ತು ನನ್ನ ಮಗ ಹೊಸ ಹಾಡನ್ನು ಹೇಳಬೇಕು ಎಂದು ಬಯಸಿದರೆ ಅವನು ಒತ್ತಡಕ್ಕೆ ಒಳಗಾಗುತ್ತಾನೆ. ಪೋಷಕರಾಗಿ, ನಾವು ಅವನ ಬಾಲ್ಯವನ್ನು ಹಾಳುಮಾಡಲು ಬಯಸುವುದಿಲ್ಲ. ಅವನು ಎಲ್ಲರಂತೆ ಬಾಲ್ಯವನ್ನು ಅನುಭವಿಸಬೇಕು ಎಂದು ನಾನು ಬಯಸುತ್ತೇನೆ’ ಎಂದಿದ್ದಾರೆ ಸೋನು.
‘ನನ್ನ ಮಗ ವಿದೇಶದಲ್ಲಿ ಓದಬೇಕು, ಅಲ್ಲಿಯೇ ವಾಸ ಮಾಡಬೇಕು. ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಗ್ರೀನ್ ಕಾರ್ಡ್ ಹೊಂದಿದ್ದೇವೆ. ನನ್ನ ಮಗ ಅಮೆರಿಕದ ಪ್ರಜೆ. ನಾವು 2009ರಲ್ಲಿ ಅಮೆರಿಕಕ್ಕೆ ಹೋಗಲು ಯೋಜಿಸುತ್ತಿದ್ದೆವು. ಆದರೆ, ಲಾಸ್ ಏಂಜಲಿಸ್ನಿಂದ ಮುಂಬೈಗೆ ಪ್ರಯಾಣಿಸುವುದು ತುಂಬಾ ಕಷ್ಟ. ಹಾಗಾಗಿ ನಾನು ಅಲ್ಲಿ ವಾಸಿಸುವ ಕಲ್ಪನೆಯನ್ನು ಕೈಬಿಟ್ಟೆ. ಮುಂಬೈನಿಂದ ದುಬೈ ತುಂಬಾನೇ ಹತ್ತಿರದಲ್ಲಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಾವು ಕೂಡ ದುಬೈನಲ್ಲಿ ವಾಸಿಸುವ ಆಲೋಚನೆ ಹೊಂದಿರುವ ಬಗ್ಗೆ ಅವರು ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್ ಈ ಒಂದು ಶೋಗೆ ಜಡ್ಜ್ ಆಗಲು ಒಪ್ಪಿದ್ದೇಕೆ?
Puneeth Rajkumar: ಪುನೀತ್ ಮುಂದಿನ ಚಿತ್ರದ ವಿಡಿಯೋ ತುಣುಕು ರಿಲೀಸ್; ಭಾವುಕರಾದ ಫ್ಯಾನ್ಸ್