ಮಾನ್ವಿತಾ ತಾಯಿಗೆ ಅನಾರೋಗ್ಯ: ಸಹಾಯಕ್ಕೆ ಬಂದ ಸೋನು ಸೂದ್; ಧನ್ಯವಾದ ಹೇಳಿದ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Aug 25, 2022 | 6:07 PM

ಮಾನ್ವಿತಾ ಅವರ ಕುಟುಂಬದಲ್ಲಿ ಸಮಸ್ಯೆ ಒಂದು ಎದುರಾಗಿತ್ತು. ಇದಕ್ಕೆ ಸೋನು ಸೂದ್ ಫೌಂಡೇಷನ್ ಮೂಲಕ ಪರಿಹಾರ ಸಿಕ್ಕಿದೆ.

ಮಾನ್ವಿತಾ ತಾಯಿಗೆ ಅನಾರೋಗ್ಯ: ಸಹಾಯಕ್ಕೆ ಬಂದ ಸೋನು ಸೂದ್; ಧನ್ಯವಾದ ಹೇಳಿದ ನಟಿ
ಮಾನ್ವಿತಾ-ಸೋನು
Follow us on

ನಟ ಸೋನು ಸೂದ್ (Sonu Sood) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಮಾಡುತ್ತಿರುವ ಒಳ್ಳೆಯ ಕೆಲಸಗಳು ಸಾಕಷ್ಟು ಸುದ್ದಿ ಆಗುತ್ತಿದೆ. ಕೊವಿಡ್ ಮೊದಲನೆ ಅಲೆ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್ ಜನರ ಸಹಾಯಕ್ಕೆ ನಿಂತರು. ನಂತರ ಅದನ್ನೇ ಮುಂದುವರಿಸಿದರು. ಕಳೆದ ಎರಡೂವರೆ ವರ್ಷಗಳಿಂದ ಸೋನು ಸಹಾಯ ಮಾಡುತ್ತಲೇ ಬರುತ್ತಿದ್ದಾರೆ. ಅವರಿಂದಾಗಿ ಸಾಕಷ್ಟು ಜೀವಗಳು ಉಳಿದಿವೆ. ಅನೇಕ ಮನೆಗಳು ಬೆಳಗಿವೆ. ಈಗ ಸೋನು ಸೂದ್ ಕಡೆಯಿಂದ ಕನ್ನಡದ ನಟಿ ಮಾನ್ವಿತಾ ಕಾಮತ್ (Manvita Kamath) ಕುಟುಂಬಕ್ಕೆ ಸಹಾಯ ಸಿಕ್ಕಿದೆ. ಇದನ್ನು ಮಾನ್ವಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

2015ರಲ್ಲಿ ತೆರೆಗೆ ಬಂದ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ನಟಿ ಮಾನ್ವಿತಾ ಕಾಮತ್. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ನಂತರ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. ‘ಟಗರು’ ಚಿತ್ರದಲ್ಲಿ ಮಾನ್ವಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಮೂರು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಮಧ್ಯೆ ಅವರ ಕುಟುಂಬದಲ್ಲಿ ಸಮಸ್ಯೆ ಒಂದು ಎದುರಾಗಿತ್ತು. ಇದಕ್ಕೆ ಸೋನು ಸೂದ್ ಫೌಂಡೇಷನ್ ಮೂಲಕ ಪರಿಹಾರ ಸಿಕ್ಕಿದೆ.

ಮಾನ್ವಿತಾ ತಾಯಿಗೆ ಅನಾರೋಗ್ಯ ಕಾಡಿದೆ. ಅವರಿಗೆ ಚಿಕಿತ್ಸೆ ಕೊಡಿಸಬೇಕಿತ್ತು. ಸೋನು ಸೂದ್ ಕಡೆಯಿಂದ ಇದಕ್ಕೆ ಸಹಾಯ ಸಿಕ್ಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾನ್ವಿತಾ ಕಾಮತ್, ‘ಈಗತಾನೇ ಸೋನು ಸೂದ್ ಅವರ ಜತೆ ಮಾತನಾಡಿದೆ. ನನ್ನ ತಾಯಿಗೆ ಅವರು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ. ನೀವು ನಿಜವಾದ ಹೀರೋ ಸರ್. ಎಲ್ಲದಕ್ಕೂ ಧನ್ಯವಾದ’ ಎಂದಿದ್ದಾರೆ ಮಾನ್ವಿತಾ ಕಾಮತ್. ‘ನಮ್ಮ ಸಂಕಷ್ಟದಲ್ಲಿ ಏಂಜಲ್ ರೀತಿ ಬಂದಿರಿ. ನಿಮ್ಮಿಂದಾಗಿ ನನ್ನ ತಾಯಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾನ್ವಿತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಜಮೌಳಿ ‘ಬಾಹುಬಲಿ’ ಚಿತ್ರದ ಆಫರ್​ ಕೊಟ್ರೂ ಒಪ್ಪಿಕೊಂಡಿರಲಿಲ್ಲ ಸೋನು ಸೂದ್​; ಕಾರಣ ಏನು?

ಸೋನು ಸೂದ್ ಮಾಡಿದ ಸಹಾಯ ಒಂದೆರಡಲ್ಲ. ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಈ ಕಾರಣಕ್ಕೆ ಸೋನು ರಿಯಲ್ ಹೀರೋ ಆಗಿದ್ದಾರೆ. ವಿಲನ್ ಪಾತ್ರಗಳ ಮೂಲಕವೇ ಸೋನು ಸೂದ್ ಗಮನ ಸೆಳೆದವರು. ಆದರೆ, ಇತ್ತೀಚೆಗೆ ಅವರು ಹೀರೋ ಪಾತ್ರ ಮಾತ್ರ ಮಾಡುತ್ತಿದ್ದಾರೆ. ಸೋನು ಇಮೇಜ್​ಗೆ ತಕ್ಕಂತಹ ಪಾತ್ರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

Published On - 5:44 pm, Thu, 25 August 22