AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೂಟ್​ ಸೆಲೆಕ್ಟ್ ಒಟಿಟಿಯಲ್ಲಿ ‘ಪೆಟ್ರೋಮ್ಯಾಕ್ಸ್​’ ಕಾಮಿಡಿ ಕಚಗುಳಿ; ಆಗಸ್ಟ್​ 26ರಿಂದ ಪ್ರಸಾರ

Petromax | Voot Select: ಹೊಸ ಹೊಸ ಕನ್ನಡ ಸಿನಿಮಾಗಳು ‘ವೂಟ್​ ಸೆಲೆಕ್ಟ್’ ಮೂಲಕ ಜನರನ್ನು ತಲುಪುತ್ತಿವೆ. ಆ ಸಾಲಿಗೆ ‘ಪೆಟ್ರೋಮ್ಯಾಕ್ಸ್​’ ಸೇರ್ಪಡೆ ಆಗುತ್ತಿದೆ.

ವೂಟ್​ ಸೆಲೆಕ್ಟ್ ಒಟಿಟಿಯಲ್ಲಿ ‘ಪೆಟ್ರೋಮ್ಯಾಕ್ಸ್​’ ಕಾಮಿಡಿ ಕಚಗುಳಿ; ಆಗಸ್ಟ್​ 26ರಿಂದ ಪ್ರಸಾರ
ಹರಿಪ್ರಿಯಾ. ಸತೀಶ್​ ನೀನಾಸಂ
TV9 Web
| Updated By: ಮದನ್​ ಕುಮಾರ್​|

Updated on: Aug 25, 2022 | 3:14 PM

Share

ಟ್ರೇಲರ್​ ಮೂಲಕ ‘ಪೆಟ್ರೋಮ್ಯಾಕ್ಸ್​’ ಸಿನಿಮಾ (Petromax Kannada Movie) ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿತ್ತು. ಜುಲೈ 15ರಂದು ಥಿಯೇಟರ್​ನಲ್ಲಿ ರಿಲೀಸ್​ ಆದ ಈ ಸಿನಿಮಾ ಈಗ ಒಟಿಟಿ ಪ್ಲಾಟ್​ಫಾರ್ಮ್​ಗೆ ಬರುತ್ತಿದೆ. ವೂಟ್​ ಸೆಲೆಕ್ಟ್​ (Voot Select) ಮೂಲಕ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಆಗಸ್ಟ್​ 26ರಿಂದ ‘ಪೆಟ್ರೋಮ್ಯಾಕ್ಸ್​’ ಚಿತ್ರದ ಸ್ಟ್ರೀಮಿಂಗ್​ ಆರಂಭ ಆಗಲಿದೆ. ಈ ಚಿತ್ರಕ್ಕೆ ‘ನೀರ್​ ದೋಸೆ’ ಖ್ಯಾತಿಯ ವಿಜಯ್​ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸುಧೀರ್ ಕೆ.ಎಂ. ಮತ್ತು ರಾಜಶೇಖರ್ ಕೆ.ಜಿ. ಬಂಡವಾಳ ಹೂಡಿದ್ದಾರೆ. ಸತೀಶ್ ನೀನಾಸಂ (Sathish Ninasam), ಹರಿಪ್ರಿಯಾ, ನಾಗಭೂಷಣ್, ಕಾರುಣ್ಯ ರಾಮ್​, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್, ಅರುಣ್ ಕುಮಾರ್ ಮುಂತಾದವರು ನಟಿಸಿರುವ ಈ ಚಿತ್ರ ಪಕ್ಕಾ ಕಾಮಿಡಿ ಕಚಗುಳಿ ನೀಡುತ್ತದೆ. ಅಡಲ್ಟ್​ ಕಾಮಿಡಿ ವಿಚಾರಗಳು ‘ಪೆಟ್ರೋಮ್ಯಾಕ್ಸ್​’ ಸಿನಿಮಾದಲ್ಲಿ ಇದ್ದರೂ ಕೂಡ ಕೌಟುಂಬಿಕ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

‘ಪೆಟ್ರೋಮ್ಯಾಕ್ಸ್’ ಸಿನಿಮಾದಲ್ಲಿ ನಾಲ್ವರು ಅನಾಥರ ಪಾತ್ರ ಹೈಲೈಟ್​ ಆಗಿದೆ. ಬಾಲ್ಯದಿಂದಲೂ ಅನಾಥಾಶ್ರಮದಲ್ಲಿ ಬೆಳೆದ ಈ ನಾಲ್ವರು ಪೋಷಕರಿಂದ ಕಾಳಜಿ ಮತ್ತು ಸಹಾನುಭೂತಿಯನ್ನು ಪಡೆಯಲು ಹಾತೊರೆಯುತ್ತಾರೆ. ಮುಂದೇನಾಗುತ್ತದೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಚಿತ್ರಮಂದಿರದಲ್ಲಿ ಮಿಸ್​ ಮಾಡಿಕೊಂಡವರು ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಎಂಜಾಯ್​ ಮಾಡಬಹುದು.

ಒಟಿಟಿಯಲ್ಲಿ ‘ಪೆಟ್ರೋಮ್ಯಾಕ್ಸ್​’ ಪ್ರಸಾರ ಆಗುತ್ತಿರುವುದಕ್ಕೆ ನಟ ನೀನಾಸಂ ಸತೀಶ್​ ಖುಷಿ ವ್ಯಕ್ತಪಡಿಸಿದ್ದಾರೆ. ‘ನನ್ನ ಪಾಲಿಗೆ ಪೆಟ್ರೋಮ್ಯಾಕ್ಸ್ ಒಂದು ವಿಶೇಷ ಚಿತ್ರ. ತುಂಬ ಸರಳವಾದ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಮನುಷ್ಯನ ದೈನಂದಿನ ಜೀವನದ ಸಂಕೀರ್ಣತೆ ಜತೆಗೆ ಭಾವನಾತ್ಮಕ ಅಂಶಗಳನ್ನು ವಿನೋದಮಯವಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈ ಚಿತ್ರವು ಪ್ರತಿಯೊಂದು ದೃಶ್ಯದಲ್ಲಿಯೂ ನನ್ನ ಮಿತಿಗಳನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ವೂಟ್ ಸೆಲೆಕ್ಟ್ ಮೂಲಕ ವೀಕ್ಷಿಸಲು ನಾನು ಉತ್ಸುಕನಾಗಿದ್ದೇನೆ’ ಎಂದು ಸತೀಶ್​ ಹೇಳಿದ್ದಾರೆ.

ಇದನ್ನೂ ಓದಿ
Image
Vikrant Rona: ಒಟಿಟಿಗೆ ಎಂಟ್ರಿ ನೀಡಲು ಸಜ್ಜಾದ ‘ವಿಕ್ರಾಂತ್​ ರೋಣ’; ಜೀ5 ಕಡೆಯಿಂದ ಸಿಕ್ತು ಅಪ್​ಡೇಟ್​
Image
777 Charlie OTT: ಒಟಿಟಿಗೆ ಎಂಟ್ರಿ ಕೊಟ್ಟ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’; ಜುಲೈ 29ರಿಂದ ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ
Image
‘ವೂಟ್ ಸೆಲೆಕ್ಟ್​’ ಮೂಲಕ ನೇರವಾಗಿ ರಿಲೀಸ್​ ಆಗಲಿದೆ ‘ಡಿಯರ್​ ವಿಕ್ರಮ್​’; ಗಮನ ಸೆಳೆದ ಟ್ರೇಲರ್​
Image
ಪೊಲೀಸ್​ ಆಫೀಸರ್​​ ಆಗಿ ಬರ್ತಿದ್ದಾರೆ ದಾನಿಶ್ ಸೇಠ್; ವೂಟ್​ನಲ್ಲಿ ರಿಲೀಸ್ ಆಗ್ತಿದೆ ‘ಸೋಲ್ಡ್’

ವಾಸ್ತವ ಜೀವನದಲ್ಲಿ ನಡೆಯುತ್ತಿರುವ ಸಾಮಾಜಿಕ ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆಯನ್ನು ಹೆಣೆದಿರುವುದಾಗಿ ನಿರ್ದೇಶಕ ವಿಜಯ್​ ಪ್ರಸಾದ್ ಹೇಳಿದ್ದಾರೆ. ‘ಆಧುನಿಕ ಮತ್ತು ಸಾಂಪ್ರದಾಯಿಕ ಜೀವನವು ತಡೆರಹಿತ ರೀತಿಯಲ್ಲಿ ಸಹಬಾಳ್ವೆ ನಡೆಸುವ ಸಾಧ್ಯತೆಯನ್ನು ಈ ಸಿನಿಮಾ ತೋರಿಸುತ್ತದೆ. ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿರುವುದರಿಂದ ವಿಭಿನ್ನವಾದ ವಿಮರ್ಶೆಗಳು ಮತ್ತು ಗ್ರಹಿಕೆಗಳನ್ನು ತಿಳಿಯಲು ಇದು ನಮಗೆ ಸಹಾಯ ಮಾಡುತ್ತದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ದಿನದಿಂದ ದಿನಕ್ಕೆ ಒಟಿಟಿ ವ್ಯಾಪ್ತಿ ಹೆಚ್ಚುತ್ತಿದೆ. ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ವೂಟ್​ ಸೆಲೆಕ್ಟ್​ ಕೂಡ ಹೊಸ ಹೊಸ ಕನ್ನಡ ಸಿನಿಮಾಗಳನ್ನು ಜನರಿಗೆ ತಲುಪಿಸುತ್ತಿದೆ. ಆ ಸಾಲಿಗೆ ‘ಪೆಟ್ರೋಮ್ಯಾಕ್ಸ್​’ ಸೇರ್ಪಡೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!