MM Keeravani: ಆಸ್ಕರ್ ಗೆದ್ದ ಖುಷಿಯಲ್ಲಿ ರಾಜಮೌಳಿ, ಕೀರವಾಣಿ ಮಾಡಿದ್ದೇನು ನೋಡಿ

ರಾಮ್ ಚರಣ್, ಜೂನಿಯರ್ ಎನ್​ಟಿಆರ್, ರಾಮ್ ಚರಣ್ ಪತ್ನಿ ಉಪಾಸನಾ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಈ ಹಾಡಿಗೆ ಸಾಹಿತ್ಯ ಬರೆದ ಚಂದ್ರಬೋಸ್ ಮೊದಲಾದವರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು.

MM Keeravani: ಆಸ್ಕರ್ ಗೆದ್ದ ಖುಷಿಯಲ್ಲಿ ರಾಜಮೌಳಿ, ಕೀರವಾಣಿ ಮಾಡಿದ್ದೇನು ನೋಡಿ
ರಾಜಮೌಳಿ

Updated on: Mar 14, 2023 | 12:27 PM

‘ಆರ್​ಆರ್​ಆರ್​’ ಚಿತ್ರದ (RRR Movie) ‘ನಾಟು ನಾಟು..’ ಹಾಡು ಆಸ್ಕರ್ ವೇದಿಕೆಯಲ್ಲಿ ಟ್ರೋಫಿ ಗೆದ್ದಿದೆ. ಇದರಿಂದ ಹೊಸ ಇತಿಹಾಸ ಸೃಷ್ಟಿ ಆಗಿದೆ. ವಿಶ್ವ ಮಟ್ಟದಲ್ಲಿ ರಾಜಮೌಳಿ (SS Rajamouli) ಖ್ಯಾತಿ ಹೆಚ್ಚಿದೆ. ಹಾಲಿವುಡ್​ನಲ್ಲಿ ಸಿನಿಮಾ ಮಾಡಬೇಕು ಎನ್ನುವ ಕನಸಿಗೆ ಈ ಪ್ರಶಸ್ತಿಯಿಂದ ಬೂಸ್ಟ್ ಸಿಕ್ಕಿದೆ. ಆಸ್ಕರ್​ ಗೆದ್ದ ಖುಷಿಯಲ್ಲಿ ರಾಜಮೌಳಿ ಅವರು ಲಾಸ್ ಎಂಜಲಿಸ್​ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಭಾಗಿ ಆಗಿದ್ದ ಕೀರವಾಣಿ ಅವರು ಪಿಯಾನೋ ನುಡಿಸಿದ್ದಾರೆ.. ಈ ವಿಡಿಯೋನ ರಾಮ್ ಚರಣ್ ಪತ್ನಿ ಉಪಾಸನಾ ಅವರು ಹಂಚಿಕೊಂಡಿದ್ದಾರೆ.

ರಾಜಮೌಳಿ ಅವರು ಉಳಿದುಕೊಂಡಲ್ಲಿ ದೊಡ್ಡ ಪಾರ್ಟಿ ಆಯೋಜನೆ ಮಾಡಲಾಗಿತ್ತು. ರಾಮ್ ಚರಣ್, ಜೂನಿಯರ್ ಎನ್​ಟಿಆರ್, ರಾಮ್ ಚರಣ್ ಪತ್ನಿ ಉಪಾಸನಾ, ‘ನಾಟು ನಾಟು..’ ಹಾಡಿನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಈ ಹಾಡಿಗೆ ಸಾಹಿತ್ಯ ಬರೆದ ಚಂದ್ರಬೋಸ್ ಮೊದಲಾದವರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಇದರಲ್ಲಿ ಕೀರವಾಣಿ ಪಿಯಾನೋ ನುಡಿಸಿದ ವಿಡಿಯೋನ ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಉಪಾಸನಾ ಶೇರ್ ಮಾಡಿಕೊಂಡಿದ್ದಾರೆ.

ಕೀರವಾಣಿ ಅವರು ಕುಳಿತು ಸಂತೋಷದಿಂದ ಪಿಯಾನೋ ಬಾರಿಸುತ್ತಿದ್ದಾರೆ. ಸುತ್ತಲೂ ಇದ್ದವರು ಕ್ಲ್ಯಾಪ್ ಹೊಡೆದಿದ್ದಾರೆ. ರಾಮ್ ಚರಣ್ ಮೊದಲಾದವರು ಇದನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ‘ನಾವು ವಿಶ್ವದ ಟಾಪ್​ನಲ್ಲಿದ್ದೇವೆ. ಕೀರವಾಣಿ ಹಾಗೂ ಆರ್​ಆರ್​ಆರ್​ ಕುಟುಂಬಕ್ಕೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
19.20.21: ಹೊಸ ಕನ್ನಡ ಸಿನಿಮಾಕ್ಕೆ ಸಿಕ್ತು ಸೆಲೆಬ್ರಿಟಿಗಳ ಭರಪೂರ ಬೆಂಬಲ, ಪ್ರಶಂಸೆಯ ಸುರಿಮಳೆ
19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
Vittal Malekudiya: ‘19.20.21’ ಚಿತ್ರದಲ್ಲಿರುವ ರಿಯಲ್​ ಕಥೆ ಯಾರದ್ದು? ಫೋಟೋ ಸಹಿತ ಮಾಹಿತಿ ಹಂಚಿಕೊಂಡ ಚಿತ್ರತಂಡ
Mansore: ತಮ್ಮದೇ ಕಥೆಯನ್ನು ತೆರೆ ಮೇಲೆ ನೋಡಿ ಕಣ್ಣೀರು ಹಾಕಿದ ‘19.20.21’ ಚಿತ್ರದ ನೈಜ ಪಾತ್ರಗಳು

ಉಪಾಸನಾ ಅವರು ತಾಯಿ ಆಗುತ್ತಿದ್ದಾರೆ. ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದರು. ಈಗ ಅವರು ಆಸ್ಕರ್ ಪಡೆಯಲು ಅಮೆರಿಕಕ್ಕೆ ತೆರಳಿದ್ದರಿಂದ ಅಲ್ಲಿಯೇ ಮಗು ಜನಿಸಲಿದೆ ಎಂದು ಎಲ್ಲರೂ ಊಹಿಸಿದ್ದರು. ಇದಕ್ಕೆ ರಾಮ್ ಚರಣ್ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ಪತ್ನಿ ಜೊತೆ ರಾಮ್ ಚರಣ್ ಸುತ್ತಾಟ; ಬೇಬಿಬಂಪ್​ಗಾಗಿ ಹುಡುಕಾಡಿದ ಫ್ಯಾನ್ಸ್

‘ಆರ್​ಆರ್​ಆರ್​’ ಕಳೆದ ಮಾರ್ಚ್​ 24ರಂದು ರಿಲೀಸ್ ಆಯಿತು. ಈ ಸಿನಿಮಾ ಹಲವು ದಾಖಲೆ ಬರೆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 1200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಬೀಗಿದೆ. ರಾಜಮೌಳಿ ಅವರು ಹಾಲಿವುಡ್​ನಲ್ಲಿ ಸಿನಿಮಾ ಮಾಡುವ ಪ್ಲ್ಯಾನ್​ನಲ್ಲಿ ಇದ್ದಾರೆ. ಇದಕ್ಕೆ ಹಾಲಿವುಡ್​ನ ಅನೇಕ ನಿರ್ದೇಶಕರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ಅವರು ಅಲ್ಲಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us