ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಯುವ ನಟ ಸುಧೀರ್ ವರ್ಮಾ (Sudheer Varma) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ (ಜ. 23) ತಮ್ಮ ವೈಜಾಗ್ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ನಟ ಸುಧೀರ್ ವರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸುಧೀರ್ ವರ್ಮಾ ಅವರು 2013ರಲ್ಲಿ ಸ್ವಾಮಿ ರಾ ರಾ ಚಿತ್ರದಿಂದ ತೆಲುಗು ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಬಳಿಕ 2016ರಲ್ಲಿ ಕುಂದನಪು ಬೊಮ್ಮ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಅವರ ಸಾವಿನ ಸುದ್ದಿ ತಿಳಿದ ಇಡೀ ಚಿತ್ರರಂಗ, ಸ್ನೇಹಿತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ವರ್ಮಾ ಸಾವಿನ ಸುದ್ದಿಯನ್ನು ಸಹನಟ ಸುಧಾಕರ ಕೋಮಕುಲ ಅವರು ಟ್ವೀಟ್ ಮಾಡುವ ಮೂಕಲ ಖಚಿತಪಡಿಸಿದ್ದಾರೆ. ಸುಧೀರ್ ಒಳ್ಳೆಯ ವ್ಯಕ್ತಿತ್ವ ಹೊಂದಿರುವಂತಹ ವ್ಯಕ್ತಿ. ನಿಮ್ಮೊಂದಿಗೆ ಕೆಲಸ ಮಾಡುವುದು ತುಂಬಾ ಸಂತೋಷದಾಯಕ ಸಹೋದರ. ನೀವು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Honey Rose: ನಟಿ ಹನಿ ರೋಸ್ ಜತೆ ನಂದಮೂರಿ ಪಾರ್ಟಿ; ಫೋಟೋ ವೈರಲ್
Sudheer! @sudheervarmak Such a lovely and warm guy’ It was great knowing you and working with you brother! Can’t digest the fact that you are no more! Om Shanti!??? @iChandiniC @vara_mullapudi @anil_anilbhanu pic.twitter.com/Sw7KdTRkpG
— Sudhakar Komakula (@UrsSudhakarK) January 23, 2023
ಇದನ್ನೂ ಓದಿ: 100 ಕೋಟಿ ರೂ. ಸಂಭಾವನೆ ಪಡೆಯುವ ಬಗ್ಗೆ ನಟ ಅಕ್ಷಯ್ ಕುಮಾರ್ ಅಭಿಪ್ರಾಯ ಏನು?
ಸುಧೀರ್ ಅವರು ಕೆಲ ಚಿತ್ರಗಳನ್ನು ಮಾಡುವ ಮೂಲಕ ತೆಲುಗು ಚಿತ್ರರಂಗದಲ್ಲಿ ನೆಲೆಕೊಂಡುಕೊಳ್ಳುತ್ತಿದ್ದರು. ಇವರ ನಟನೆಗೆ ಹಿರಿಯ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ ಮಗಳು ಸುಷ್ಮಿತಾ ನಿರ್ಮಾಣದ ಶೂಟೌಟ್ ವೆಬ್ ಸಿರೀಸ್ನಲ್ಲಿ ಸುಧೀರ್ ಅವರು ನಟಿಸಿದ್ದರು. 2010ರಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಸುಧೀರ್ ಅವರು
ಪಾತ್ರಗಳನ್ನು ಪಡೆದುಕೊಳ್ಳಲು ತುಂಬಾ ಕಷ್ಟಪಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅವರ ಸಾವಿನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:57 pm, Mon, 23 January 23